ರೈಲ್ವೆ ಮಂಡಳಿಯ ಹೇಳಿಕೆ ಇಲ್ಲಿದೆ ರೈಲ್ವೆ ಮಂಡಳಿ ಘಟನೆ... ... Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು

ರೈಲ್ವೆ ಮಂಡಳಿಯ ಹೇಳಿಕೆ ಇಲ್ಲಿದೆ

ರೈಲ್ವೆ ಮಂಡಳಿ ಘಟನೆ ಬಗ್​ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ನಿಲ್ದಾಣದ ಪ್ಲಾಟ್​ಫಾರ್ಮ್​ 13 ಮತ್ತು 14ರಲ್ಲಿ ಶನಿವಾರ ರಾತ್ರಿ 9.30ಕ್ಕೆ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.

"ಜನ ಸಂಖ್ಯೆ ಏರಿಕೆಯಿಂದಾಗಿ ಉಂಟಾಗಿರುವ ಗೊಂದಲದಲ್ಲಿ ಕೆಲವು ವ್ಯಕ್ತಿಗಳು ಮೂರ್ಛೆ ಹೋದರು. ಇದು ವದಂತಿಗಳಿಗೆ ಕಾರಣವಾಯಿತು ಹಾಗೂ ಪ್ರಯಾಣಿಕರಲ್ಲಿ ಭೀತಿ ಉಂಟುಮಾಡಿತು. ನಂತರ ದಟ್ಟಣೆ ಸರಾಗಗೊಳಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು" ಎಂದು ತಿಳಿಸಲಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಶನಿವಾರ ತಡರಾತ್ರಿ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಪರಿಸ್ಥಿತಿ ನಿಭಾಯಿಸಲು ಮತ್ತು ಪರಿಹಾರ ಕಾರ್ಯಕ್ಕೆ ಸಿಬ್ಬಂದಿ ನಿಯೋಜಿಸಲು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

"ಎಲ್ಲಾ ಆಸ್ಪತ್ರೆಗಳು ಸಿದ್ಧವಾಗಿವೆ. ಸ್ಥಳದಲ್ಲಿದ್ದು ಪರಿಹಾರ ಕ್ರಮಗಳ ನಿಯಂತ್ರಣವನ್ನು ತೆಗೆದುಕೊಳ್ಳುವಂತೆ ಸಿಎಸ್ ಮತ್ತು ಸಿಪಿಗೆ ಸೂಚನೆ ನೀಡಿದ್ದೇನೆ" ಎಂದು ಸಕ್ಸೇನಾ ಹೇಳಿದರು.

Update: 2025-02-16 04:36 GMT

Linked news