ಹೆಚ್ಚುವರಿ ರೈಲುಗಳು ವ್ಯವಸ್ಥೆ ರೈಲ್ವೆ ಮಂಡಳಿಯ ಮಾಹಿತಿ... ... Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು

ಹೆಚ್ಚುವರಿ ರೈಲುಗಳು ವ್ಯವಸ್ಥೆ

ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ಕಾರ್ಯನಿರ್ವಾಹಕ ದಿಲೀಪ್ ಕುಮಾರ್ ಮಾತನಾಡಿ, ಪ್ರಯಾಣಿಕರ ಅನುಕೂಲಕ್ಕಾಗಿ ಈವರೆಗೆ ನಾಲ್ಕು ವಿಶೇಷ ರೈಲುಗಳನ್ನು ಬಿಡಲಾಗಿದೆ. ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾದಂತೆ ಯಾವುದೇ ರೈಲುಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಅವರು ತಿಳಿಸಿದರು. "ಪ್ರಯಾಣಿಕರ ಭಾರಿ ವಾರಾಂತ್ಯದ ನೂಕುನುಗ್ಗಲು ಇತ್ತು" ಎಂದು ಅವರು ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ನಿಜವಾದ ಕಾರಣವನ್ನು ಕಂಡುಹಿಡಿಯಲಾಗುವುದು. ಆದಾಗ್ಯೂ, ನಮಗೆ ತಿಳಿದಿರುವುದು ಏನೆಂದರೆ, ಕೆಲವರು ಪರಸ್ಪರ ತಳ್ಳಿದ ಕಾರಣ ಘಟನೆ ಉಂಟಾಗಿದೆ" ಎಂದು ಕುಮಾರ್ ಹೇಳಿದರು. ದೊಡ್ಡ ಪ್ರಮಾಣದ ಸಾವು ನೋವುಗಳ ವರದಿ ತಳ್ಳಿಹಾಕಿದ್ದಾರೆ.

Update: 2025-02-16 04:32 GMT

Linked news