ಪೋಸ್ಟ್ ಎಡಿಟ್ ಮಾಡಿದ ಎಲ್ಜಿ! ದೆಹಲಿಯ ಲೆಫ್ಟಿನೆಂಟ್... ... Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು
ಪೋಸ್ಟ್ ಎಡಿಟ್ ಮಾಡಿದ ಎಲ್ಜಿ!
ದೆಹಲಿಯ ಲೆಫ್ಟಿನೆಂಟ್ ಜನರಲ್ ಸಕ್ಸೇನಾ ಸಾವು ಸಂಭವಿಸಿದೆ ಎಂದು ಪೋಸ್ಟ್ ಮಾಡಿ, ಸಂತಾಪ ಸೂಚಿಸಿದ್ದರು. ಬಳಿಕ ಅದನ್ನು ಅವರು ಎಡಿಟ್ ಮಾಡಿದರು. ಸಾವು ಆಗಿದೆ ಎಂಬ ತಮ್ಮ ಹೇಳಿಕೆಯನ್ನು ತಿದ್ದುಪಡಿ ಮಾಡಿದರು.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಉಂಟಾಗಿರುವ ಅವ್ಯವಸ್ಥೆ ಮತ್ತು ಕಾಲ್ತುಳಿತ ದಿಂದಾಗಿ ಉಂಟಾಗಿರುವ ಗಾಯಗಳು ಮತ್ತು ಪ್ರಾಣ ಹಾನಿ ದುರದೃಷ್ಟಕರ. ಈ ದುರಂತದಲ್ಲಿ ಬಲಿಯಾದವರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಮೊದಲು ಬರೆದಿದ್ದರು. 15 ನಿಮಿಷಗಳ ನಂತರ, ಸಕ್ಸೇನಾ ಸಾವಿನ ಉಲ್ಲೇಖ ತೆಗೆದು ಹಾಕಿದ್ದಾರೆ.
ರಾಜನಾಥ್ ಸಿಂಗ್ ಟ್ವೀಟ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸಾವುಗಳಿಂದ ತಮಗೆ ನೋವಾಗಿದೆ ಎಂದು ಹೇಳಿದ್ದಾರೆ.
"ನವದೆಹಲಿ ರೈಲ್ವೆ ನಿಲ್ದಾಣದಿಂದ ಆಘಾತಕಾರಿ ಸುದ್ದಿ ಬಂದಿದೆ. ರೈಲ್ವೆ ಪ್ಲಾಟ್ ಫಾರ್ಮ್ನಲ್ಲಿ ಕಾಲ್ತುಳಿತದಿಂದಾಗಿ ಪ್ರಾಣಹಾನಿಯಾಗಿರುವುದು ನನಗೆ ತುಂಬಾ ನೋವುಂಟು ಮಾಡಿದೆ. ಎಂದು ಬರೆದುಕೊಂಡಿದ್ದಾರೆ.
Update: 2025-02-16 04:42 GMT