Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು
ನನ್ನ ಅಮ್ಮ ಮೃತಪಟ್ಟರು
ಕಾಲ್ತುಳಿತದಲ್ಲಿ ತನ್ನ ತಾಯಿ ಮೃತಪಟ್ಟಿದ್ದಾರೆ ಎಂದು ಸಂತ್ರಸ್ತರಲ್ಲಿ ಒಬ್ಬರು ಹೇಳಿದ್ದಾರೆ. "ನಾವು ಬಿಹಾರದ ಛಾಪ್ರಾದವರು. ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದೆವು, ಆದರೆ ನನ್ನ ತಾಯಿ ಗಲಾಟೆಯಲ್ಲಿ ಮೃತಪಟ್ಟಿದ್ದಾಳೆ.
ಘಟನೆ ಬಳಿಕ ಆ ಕುಟಂಬದ ಮಹಿಳೆಯೊಬ್ಬರು ಕುಸಿದು ಬಿದ್ದಿದ್ದಾರೆ. ಪ್ರಯಾಣಿಕರು ಪರಸ್ಪರ ತಳ್ಳಿದ್ದರಿಂದ ಕೆಲವರಿಗೆ ಗಾಯಗಳಾಗಿವೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ ) ಹಿಮಾಂಶು ಉಪಾಧ್ಯಾಯ ತಿಳಿಸಿದ್ದಾರೆ.
ಎನ್ಡಿಆರ್ಎಫ್ನಿಂದ ಪರಿಹಾರ ಕಾರ್ಯಾಚರಣೆ
ರೈಲ್ವೆ ಇಲಾಖೆ ಡಿಸಿಪಿ ಹೇಳುವುದೇನು?
ಮೃತಪಟ್ಟ 18ರಲ್ಲಿ 5 ಮಕ್ಕಳು ಸೇರಿದ್ದಾರೆ
ಮೃತರನ್ನು ಆಶಾ ದೇವಿ (79), ಪಿಂಕಿ ದೇವಿ (41), ಶೀಲಾ ದೇವಿ (50), ವ್ಯೋಮ್ (25), ಪೂನಂ ದೇವಿ (40), ಲಲಿತಾ ದೇವಿ (35), ಸುರುಚಿ (11), ಕೃಷ್ಣ ದೇವಿ (40), ವಿಜಯ್ ಸಾಹ್ (15), ನೀರಜ್ (12), ಶಾಂತಿ ದೇವಿ (40), ಪೂಜಾ ಕುಮಾರ್ (8), ಸಂಗೀತಾ ಮಲಿಕ್ (4), ಪೂನಂ (3), ಪೂನಂ (3) ಮನೋಜ್ (47) ಎಂದು ಎಂದು ಗುರುತಿಸಲಾಗಿದೆ.
ಹಿಂದಿನಿಂದ ತಳ್ಳಿದ್ದೇ ಘಟನೆ ಕಾರಣ
ಪ್ರಯಾಣಿಕ ಧರ್ಮೇಂದ್ರ ಸಿಂಗ್ ಎಂಬುವರು ಘಟನೆ ಬಗ್ಗೆ ವಿವರಿಸಿ "ನಾನು ಪ್ರಯಾಗ್ರಾಜ್ಗೆ ಹೋಗುತ್ತಿದ್ದೆ ರೈಲುಗಳು ತಡವಾಗಿ ಬಂದಿದ್ವವು. ಕೆಲವು ರದ್ದಾಗಿದ್ದವು. ಹೀಗಾಗಿ ನಿಲ್ದಾಣ ಜನದಟ್ಟಣೆಯಿಂದ ಕೂಡಿತ್ತು. ಈ ನಿಲ್ದಾಣದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನರು ಇದ್ದರು. ನನ್ನ ಮುಂದೆಯೇ ಆರೇಳು ಮಹಿಳೆಯರನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
ಪ್ರಮೋದ್ ಚೌರಾಸಿಯಾ ಎಂಬುವರು ಮಾತನಾಡಿ, "ನಾನು ಪುರುಷೋತ್ತಮ್ ಎಕ್ಸ್ಪ್ರೆಸ್ನಲ್ಲಿ ಸ್ಲೀಪರ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದೆ. ಆದರೂ ರೈಲು ಹತ್ತಲು ಸಾಧ್ಯವಾಗಲಿಲ್ಲ. ಮಹಿಳಾ ಪ್ರಯಾಣಿಕರು ಜನಸಂದಣಿಯಲ್ಲಿ ಸಿಲುಕಿಕೊಂಡರು. ನೂಕುನುಗ್ಗಲು ಇತ್ತು. ನಾವು ನೂಕಾಟ ನೋಡಿ ಹೆದರಿ ಹೊರಗೆ ಬಂದೆವು. ಹೀಗಾಗಿ ಜೀವ ಉಳಿಯಿತು ಎಂದು ಹೇಳಿದ್ದಾರೆ.
ಪರಿಹಾರ ಘೋಷಿಸಿದ ರೈಲ್ವೆ
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪ್ರಕಟಿಸಲಾಗಿದೆ.
ಆಘಾತಕಾರಿ ಘಟನೆ : ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಬಗ್ಗ ಪ್ರತಿಕ್ರಿಯಿಸಿ , "ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಉಂಟಾಗಿರುವ ಪ್ರಾಣಹಾನಿ ಅತ್ಯಂತ ದುಃಖಕರ ಮತ್ತು ಆಘಾತಕಾಗಿ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪವಿದೆ. ಅಗಲಿದ ಆತ್ಮಗಳಿಗೆ ಮೋಕ್ಷ ಸಿಗಲಿ. ದುಃಖಿತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಅದೇ ರೀತಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ರಾಮನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಪೊಲೀಸರಿಂದ ತನಿಖೆ ಆರಂಭ
ಕಾಲ್ತುಳಿತದ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದು, ಏನಾಯಿತು ಎಂಬುದನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
"ಕಾಲ್ತುಳಿತಕ್ಕೆ ಕಾರಣ ಕಂಡು ಹಿಡಿಯುವುದು ನಮ್ಮ ಮುಖ್ಯ ಗುರಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆ ಸಮಯದಲ್ಲಿ ಅಧಿಕಾರಿಗಳು ಮಾಡಿರುವ ಪ್ರಕಟಣೆಗಳ ಎಲ್ಲಾ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ಲಾಟ್ ಫಾರ್ಮ್ ಬದಲಾವಣೆಯ ಬಗ್ಗೆ ತಪ್ಪು ಪ್ರಕಟಣೆ ಗೊಂದಲಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಕಾಲ್ತುಳಿತಕ್ಕೂ ಮುನ್ನ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಪ್ರಯಾಗ್ರಾಜ್ಗೆ ಹೋಗುವ ರೈಲುಗಳನ್ನು ಹತ್ತಲು ದೊಡ್ಡ ಸಂಖ್ಯೆಯ ಪ್ರಯಾಣಿಕರು ಕಾಯುತ್ತಿದ್ದರು. ರೈಲು ವಿಳಂಬವೇ ಕಾಲ್ತುಳಿತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.