ಹಿಂದಿನಿಂದ ತಳ್ಳಿದ್ದೇ ಘಟನೆ ಕಾರಣ ಪ್ರಯಾಣಿಕ ಧರ್ಮೇಂದ್ರ... ... Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು
ಹಿಂದಿನಿಂದ ತಳ್ಳಿದ್ದೇ ಘಟನೆ ಕಾರಣ
ಪ್ರಯಾಣಿಕ ಧರ್ಮೇಂದ್ರ ಸಿಂಗ್ ಎಂಬುವರು ಘಟನೆ ಬಗ್ಗೆ ವಿವರಿಸಿ "ನಾನು ಪ್ರಯಾಗ್ರಾಜ್ಗೆ ಹೋಗುತ್ತಿದ್ದೆ ರೈಲುಗಳು ತಡವಾಗಿ ಬಂದಿದ್ವವು. ಕೆಲವು ರದ್ದಾಗಿದ್ದವು. ಹೀಗಾಗಿ ನಿಲ್ದಾಣ ಜನದಟ್ಟಣೆಯಿಂದ ಕೂಡಿತ್ತು. ಈ ನಿಲ್ದಾಣದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನರು ಇದ್ದರು. ನನ್ನ ಮುಂದೆಯೇ ಆರೇಳು ಮಹಿಳೆಯರನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
ಪ್ರಮೋದ್ ಚೌರಾಸಿಯಾ ಎಂಬುವರು ಮಾತನಾಡಿ, "ನಾನು ಪುರುಷೋತ್ತಮ್ ಎಕ್ಸ್ಪ್ರೆಸ್ನಲ್ಲಿ ಸ್ಲೀಪರ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದೆ. ಆದರೂ ರೈಲು ಹತ್ತಲು ಸಾಧ್ಯವಾಗಲಿಲ್ಲ. ಮಹಿಳಾ ಪ್ರಯಾಣಿಕರು ಜನಸಂದಣಿಯಲ್ಲಿ ಸಿಲುಕಿಕೊಂಡರು. ನೂಕುನುಗ್ಗಲು ಇತ್ತು. ನಾವು ನೂಕಾಟ ನೋಡಿ ಹೆದರಿ ಹೊರಗೆ ಬಂದೆವು. ಹೀಗಾಗಿ ಜೀವ ಉಳಿಯಿತು ಎಂದು ಹೇಳಿದ್ದಾರೆ.
Update: 2025-02-16 04:20 GMT