ಮಸೀದಿ- ಮಂದಿರ ವಿಚಾರ ಎತ್ತಿ ಹಿಂದೂ ನಾಯಕರಾಗಬೇಡಿ: ಮೋಹನ್​ ಭಾಗವತ್​

ರಾಮ ಮಂದಿರ ನಿರ್ಮಾಣಗೊಂಡ ಬಳಿಕ ಕೆಲವರು ಮಸೀದಿ- ಮಂದಿರ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ನಾಯಕರಾಗಲು ಹೋಗುತ್ತಿದ್ದಾರೆ. ನಾವು ಒಳಗೊಳ್ಳುವಿಕೆಯ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.

Update: 2024-12-20 09:23 GMT

ದೇಶದ ಹಲವೆಡೆ ಮಸೀದಿ ಹಾಗೂ ಮಂದಿರಗಳ ನಡುವಿನ ವಿವಾದಗಳು ಕಂಡು ಬರುತ್ತಿವೆ. ಇದು ಅಶಾಂತಿಗೆ ಕಾರಣವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್ ಭಾಗ್ವತ್​ ಹೇಳಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ನಂತರ ಕೆಲವು ವ್ಯಕ್ತಿಗಳು ಇಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ "ಹಿಂದೂಗಳ ನಾಯಕರು" ಆಗಬಹುದು ಎಂದು ಭಾವಿಸಿದ್ದಾರೆ ಎಂದು ಹೇಳಿದರು.


ಪುಣೆಯ ಸಹಜೀವನ್ ವ್ಯಾಖ್ಯನ್​ಮಾಲಾದಲ್ಲಿ ಮಾತನಾಡಿದ ಗುರುವಾರ (ಡಿಸೆಂಬರ್ 19) "ಭಾರತ - ವಿಶ್ವಗುರು" ಕುರಿತು ಉಪನ್ಯಾಸ ನೀಡಿದ ಭಾಗವತ್, ಭಾರತವು ಶಾಂತಿಯಿಂದ ಇದೆ ಎಂಬುದನ್ನು ಜಗತ್ತಿಗೆ ತೋರಿಸಬೇಕಾದ ಅವರು ಹೇಳಿದರು.

ಭಾರತೀಯ ಸಮಾಜದ ಬಹುತ್ವ ಎತ್ತಿ ತೋರಿಸಿದೆ. ರಾಮಕೃಷ್ಣ ಮಿಷನ್​ನಲ್ಲಿ ಕ್ರಿಸ್ಮಸ್ ಆಚರಿಸುವುದೇ ಅದಕ್ಕೆ ಉತ್ತಮ ಉದಾಹರಣೆ ಎಂದ ಹೇಳಿದ ಮೋಹನ್ ಭಾಗವತ್ ಅವರು, ನಾವು ಹಿಂದೂಗಳಾಗಿರುವುದರಿಂದ ಇವೆಲ್ಲವೂ ಸಾಧ್ಯ ಎಂದು ಹೇಳಿದರು.

"ಭಾರತೀಯರು ಬಹಳ ಸಮಯದಿಂದ ಸಾಮರಸ್ಯದಿಂದ ಬದುಕುತ್ತಿದ್ದಾರೆ. ನಾವು ಈ ಸಾಮರಸ್ಯವನ್ನು ಜಗತ್ತಿಗೆ ನೀಡಲು ಬಯಸಿದರೆ, ನಾವು ಅದರ ಮಾದರಿಯನ್ನು ರಚಿಸಬೇಕಾಗಿದೆ. ರಾಮ ಮಂದಿರ ನಿರ್ಮಾಣದ ನಂತರ ಹೊಸ ಸ್ಥಳಗಳಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಎತ್ತುವ ಮೂಲಕ ತಾವು ಹಿಂದೂಗಳ ನಾಯಕರಾಗಬಹುದು ಎಂದು ಕೆಲವರು ಭಾವಿಸುತ್ತಾರೆ. ಇದು ಸ್ವೀಕಾರಾರ್ಹ ಕ್ರಮವಲ್ಲ " ಎಂದು ಅವರು ಹೇಳಿದರು.

ಎಲ್ಲಾ ಹಿಂದೂಗಳ ನಂಬಿಕೆಯ ವಿಷಯವಾಗಿರುವುದರಿಂದ ರಾಮ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಭಾಗವತ್ ಇದೇ ವೇಳೆ ನುಡಿದರು. ''ನಾವೆಲ್ಲರೂ ಒಟ್ಟಿಗೆ ಬದುಕಬಹುದು ಎಂದು ಭಾರತ ಜಗತ್ತಿಗೆ ತೋರಿಸಬೇಕಾಗಿದೆ' ಎಂದು ಹೇಳಿದರು.

"ಪ್ರತಿದಿನ ಹೊಸ ವಿವಾದ ಎತ್ತಲಾಗುತ್ತಿದೆ. ಇದನ್ನು ಹೇಗೆ ಅವಕಾಶ ನೀಡಬಹುದು. ಇದು ಮುಂದುವರಿಯಬಾರದು. ನಾವು ಒಟ್ಟಿಗೆ ಬದುಕಬಹುದು ಎಂದು ಭಾರತ ತೋರಿಸಬೇಕಾಗಿದೆ ಎಂದು ಅವರು ಹೇಳಿದರು. ಆದರೆ ಅವರು ಯಾವುದೇ ದೇವಾಲಯ ಅಥವಾ ಮಸೀದಿಯ ಹೆಸರನ್ನು ಉಲ್ಲೇಖ ಮಾಡಿಲ್ಲ.

ಈಗ ದೇಶವು ಸಂವಿಧಾನದ ಪ್ರಕಾರ ನಡೆಯುತ್ತಿದೆ. ಈ ವ್ಯವಸ್ಥೆಯಲ್ಲಿ, ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅವರು ಸರ್ಕಾರವನ್ನು ನಡೆಸುತ್ತಾರೆ. ರಾಜರ ಪ್ರಾಬಲ್ಯದ ದಿನಗಳು ಕಳೆದುಹೋಗಿವೆ" ಎಂದು ಅವರು ಪ್ರತಿಪಾದಿಸಿದರು.

"ಅಯೋಧ್ಯೆಯಲ್ಲಿನ ರಾಮ ಮಂದಿರವನ್ನು ಹಿಂದೂಗಳಿಗೆ ನೀಡಬೇಕೆಂಬ ನಿರ್ಧಾರವಿತ್ತು. ಆದರೆ ಬ್ರಿಟಿಷರು ಅದನ್ನು ಗ್ರಹಿಸಿ ಎರಡು ಸಮುದಾಯಗಳ ನಡುವೆ ಬಿರುಕು ಸೃಷ್ಟಿಸಿದರು. ಅಂದಿನಿಂದ, ಈ ಪ್ರತ್ಯೇಕತಾವಾದ ಪ್ರಜ್ಞೆ ಅಸ್ತಿತ್ವಕ್ಕೆ ಬಂದಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಿತು" ಎಂದು ಮೋಹನ್​ ಭಾಗವತ್​ ಹೇಳಿದರು.

'ಇಲ್ಲಿ ಎಲ್ಲರೂ ಸಮಾನರು'

ಪ್ರತಿಯೊಬ್ಬರೂ ತಮ್ಮನ್ನು ಭಾರತೀಯರು ಎಂದು ಗುರುತಿಸಿಕೊಳ್ಳಬೇಕು. ಹೀಗಿರುವಾಗ ಪ್ರಾಬಲ್ಯ ಮತ್ತು ದೌರ್ಬಲ್ಯ ಎಂಬ ಪ್ರಶ್ನೆಯೇ ಬರುವುದಿಲ್ಲ.

ಭಾರತದಲ್ಲಿ ಯಾರು ಅಲ್ಪಸಂಖ್ಯಾತರು ಮತ್ತು ಯಾರು ಬಹುಸಂಖ್ಯಾತರು? ಇಲ್ಲಿ ಎಲ್ಲರೂ ಸಮಾನರು. ಈ ರಾಷ್ಟ್ರದ ಸಂಪ್ರದಾಯವೆಂದರೆ ಎಲ್ಲರೂ ತಮ್ಮದೇ ಆದ ಪೂಜಾ ವಿಧಾನಗಳನ್ನು ಅನುಸರಿಸಬಹುದು. ಸಾಮರಸ್ಯದಿಂದ ಬದುಕುವುದು ಮತ್ತು ನಿಯಮಗಳು ಮತ್ತು ಕಾನೂನುಗಳಿಗೆ ಬದ್ಧರಾಗಿರುವುದು ಏಕೈಕ ಅವಶ್ಯಕತೆ" ಎಂದು ಆರ್​ಎಸ್​ಎಸ್​ ಮುಖ್ಯಸ್ಥರು ಪ್ರತಿಪಾದಿಸಿದರು. 

Tags:    

Similar News