ದೇಶದ ದೀರ್ಘಾವಧಿ ಸಿಎಂಗಳ ಪಟ್ಟಿಯಲ್ಲಿ ನಿತೀಶ್ ಕುಮಾರ್‌ಗೆ ಸ್ಥಾನ, ಉಳಿದವರ ಪಟ್ಟಿ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರ ಸಮ್ಮುಖದಲ್ಲಿ 74 ವರ್ಷದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರ ಸಮ್ಮುಖದಲ್ಲಿ 74 ವರ್ಷದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಬಿಹಾರದ ರಾಜಕೀಯದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯುವ ಮೂಲಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶದ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಅಗ್ರ 10 ಮುಖ್ಯಮಂತ್ರಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಗುರುವಾರ ಪಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರ ಸಮ್ಮುಖದಲ್ಲಿ 74 ವರ್ಷದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ತಮ್ಮ 19 ವರ್ಷಗಳ ಆಡಳಿತವನ್ನು ವಿಸ್ತರಿಸುವ ಜೊತೆಗೆ, ಭಾರತದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
'ಪಲ್ಟು ರಾಮ್' ಟು 'ಸುಶಾಸನ್ ಬಾಬು'
1951ರಲ್ಲಿ ಬಿಹಾರದ ಭಕ್ತಿಯಾರ್‌ಪುರದಲ್ಲಿ ಜನಿಸಿದ ನಿತೀಶ್ ಕುಮಾರ್, ಜಯಪ್ರಕಾಶ್ ನಾರಾಯಣ್ (ಜೆಪಿ) ಚಳವಳಿಯ ಮೂಲಕ ರಾಜಕೀಯ ಪ್ರವೇಶಿಸಿದವರು. 1977ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಅವರು, 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ತಮ್ಮ ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಮೈತ್ರಿಕೂಟಗಳನ್ನು ಬದಲಾಯಿಸುವ ಮೂಲಕ 'ಪಲ್ಟು ರಾಮ್' ಎಂಬ ಟೀಕೆಗೂ ಗುರಿಯಾಗಿದ್ದ ನಿತೀಶ್, ಬಿಹಾರದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ 'ಸುಶಾಸನ್ ಬಾಬು' ಎಂದೂ ಖ್ಯಾತಿ ಗಳಿಸಿದ್ದಾರೆ. ಇದೀಗ ದೇಶದ ರಾಜಕೀಯ ದಿಗ್ಗಜರ ಸಾಲಿಗೆ ಸೇರುವ ಮೂಲಕ ತಮ್ಮ ಪ್ರಭಾವವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ದೇಶದ ದೀರ್ಘಾವಧಿ ಮುಖ್ಯಮಂತ್ರಿಗಳು (ಅಗ್ರ 10)
ಭಾರತದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಸಿಕ್ಕಿಂನ ಪವನ್ ಕುಮಾರ್ ಚಾಮ್ಲಿಂಗ್ ಅಗ್ರಸ್ಥಾನದಲ್ಲಿದ್ದಾರೆ. ನಿತೀಶ್ ಕುಮಾರ್ ಸೇರಿದಂತೆ ಪ್ರಮುಖ 10 ನಾಯಕರ ವಿವರ ಈ ಕೆಳಗಿನಂತಿದೆ:
1. ಪವನ್ ಕುಮಾರ್ ಚಾಮ್ಲಿಂಗ್ (ಸಿಕ್ಕಿಂ): 25 ವರ್ಷಗಳಿಗೂ ಹೆಚ್ಚು ಕಾಲ (ಡಿಸೆಂಬರ್ 12, 1994 - ಮೇ 26, 2019).
2. ನವೀನ್ ಪಟ್ನಾಯಕ್ (ಒಡಿಶಾ): 24 ವರ್ಷಗಳಿಗೂ ಹೆಚ್ಚು ಕಾಲ (ಮಾರ್ಚ್ 5, 2000 - ಜೂನ್ 11, 2024).
3. ಜ್ಯೋತಿ ಬಸು (ಪಶ್ಚಿಮ ಬಂಗಾಳ): 23 ವರ್ಷಗಳಿಗೂ ಹೆಚ್ಚು ಕಾಲ (ಜೂನ್ 21, 1977 - ನವೆಂಬರ್ 5, 2000).
4. ಗೆಗಾಂಗ್ ಅಪಾಂಗ್ (ಅರುಣಾಚಲ ಪ್ರದೇಶ): 22 ವರ್ಷಗಳಿಗೂ ಹೆಚ್ಚು ಕಾಲ (ಜನವರಿ 18, 1980 - ಜನವರಿ 19, 1999; ಆಗಸ್ಟ್ 3, 2003 - ಏಪ್ರಿಲ್ 9, 2007).
5. ಲಾಲ್ ತನ್ಹಾವಲಾ (ಮಿಜೋರಾಂ): 22 ವರ್ಷಗಳಿಗೂ ಹೆಚ್ಚು ಕಾಲ (ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ).
6. ವೀರ್ಭದ್ರ ಸಿಂಗ್ (ಹಿಮಾಚಲ ಪ್ರದೇಶ): 21 ವರ್ಷಗಳಿಗೂ ಹೆಚ್ಚು ಕಾಲ (ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ).
7. ಮಾಣಿಕ್ ಸರ್ಕಾರ್ (ತ್ರಿಪುರಾ): 19 ವರ್ಷಗಳಿಗೂ ಹೆಚ್ಚು ಕಾಲ (ಮಾರ್ಚ್ 11, 1998 - ಮಾರ್ಚ್ 9, 2018).
8. ನಿತೀಶ್ ಕುಮಾರ್ (ಬಿಹಾರ): ಸುಮಾರು 19 ವರ್ಷಗಳು (ಮಾರ್ಚ್ 2000ರಲ್ಲಿ ಅಲ್ಪಾವಧಿ; ನಂತರ ನವೆಂಬರ್ 2005ರಿಂದ ಮೇ 2014; ಫೆಬ್ರವರಿ 2015ರಿಂದ ಇಲ್ಲಿಯವರೆಗೆ).
9. ಎಂ. ಕರುಣಾನಿಧಿ (ತಮಿಳುನಾಡು): 18 ವರ್ಷಗಳಿಗೂ ಹೆಚ್ಚು ಕಾಲ (1969ರಿಂದ 2011ರವರೆಗೆ ವಿವಿಧ ಅವಧಿಗಳಲ್ಲಿ).
10. ಪ್ರಕಾಶ್ ಸಿಂಗ್ ಬಾದಲ್ (ಪಂಜಾಬ್): 18 ವರ್ಷಗಳಿಗೂ ಹೆಚ್ಚು ಕಾಲ (1970ರಿಂದ 2017ರವರೆಗೆ ವಿವಿಧ ಅವಧಿಗಳಲ್ಲಿ).