ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ಅಗತ್ಯವಾದ ನೀಟ್-ಪಿಜಿ ಪರೀಕ್ಷೆಯು ಈ ತಿಂಗಳು ನಡೆಯಲಿದೆ. ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆಗಳ ಮೊದಲು ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ.
ಸರ್ಕಾರದ ಸೈಬರ್ ಅಪರಾಧ ನಿಗ್ರಹ ಸಂಸ್ಥೆಯ ಅಧಿಕಾರಿಗಳನ್ನು ಗೃಹ ಸಚಿವಾಲಯದ ಅಧಿಕಾರಿಗಳು ಭೇಟಿಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜೂನ್ 23 ಕ್ಕೆ ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಆರಂಭವಾಗುವ ಗಂಟೆಗಳ ಮೊದಲು ಮುಂದೂಡಲಾಗಿತ್ತು. ನೀಟ್-ಪಿಜಿ ಪ್ರಕ್ರಿಯೆಗಳ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳುವುದಾಗಿ ಸರ್ಕಾರ ಆನಂತರ ಹೇಳಿತು.
ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಲಕ್ಷಗಟ್ಟಲೆ ವೃತ್ತಿಪರರು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಆರೋಪ: ಯುಜಿಸಿ-ನೆಟ್ ಮತ್ತು ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಡಾರ್ಕ್‌ನೆಟ್‌ನಲ್ಲಿ ಪ್ರಶ್ನೆಪತ್ರಿಕೆ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಆನಂತರ ಎನ್ ಟಿಎ ಮುಖ್ಯಸ್ಥ ಎಸ್.ಕೆ. ಸಿಂಗ್ ಅವರನ್ನು ವಜಾಗೊಳಿಸಲಾಯಿತು.