ಫೆಬ್ರವರಿಯಲ್ಲಿ ಜಿಎಸ್ಟಿ ಸಂಗ್ರಹ ಶೇ.9.1ರಷ್ಟು ಏರಿಕೆ; 1.84 ಲಕ್ಷ ಕೋಟಿ ಸಂಗ್ರಹ

ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ಆದಾಯವು ಫೆಬ್ರವರಿಯಲ್ಲಿ ದೇಶೀಯ ಆದಾಯದಲ್ಲಿ ಶೇಕಡಾ 10.2 ರಷ್ಟು ಏರಿಕೆಯಾಗಿ 1.42 ಲಕ್ಷ ಕೋಟಿ ರೂ.ಗೆ ಮತ್ತು ಆಮದುಗಳಿಂದ ಬರುವ ಆದಾಯದಲ್ಲಿ ಶೇಕಡಾ 5.4 ರಷ್ಟು ಏರಿಕೆಯಾಗಿ 41,702 ಕೋಟಿ ರೂ.ಗೆ ತಲುಪಿದೆ.;

Update: 2025-03-01 13:57 GMT

ಸಂಗ್ರಹ ಚಿತ್ರ.

ಫೆಬ್ರವರಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ಶೇಕಡಾ 9.1 ರಷ್ಟು ಏರಿಕೆಯಾಗಿದ್ದು, ಸುಮಾರು 1.84 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಅಧಿಕೃತ ಅಂಕಿ ಅಂಶಗಳು ಶನಿವಾರ ತಿಳಿಸಿವೆ.

ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ಆದಾಯವು ಫೆಬ್ರವರಿಯಲ್ಲಿ ದೇಶೀಯ ಆದಾಯದಲ್ಲಿ ಶೇಕಡಾ 10.2 ರಷ್ಟು ಏರಿಕೆಯಾಗಿ 1.42 ಲಕ್ಷ ಕೋಟಿ ರೂ.ಗೆ ಮತ್ತು ಆಮದುಗಳಿಂದ ಬರುವ ಆದಾಯದಲ್ಲಿ ಶೇಕಡಾ 5.4 ರಷ್ಟು ಏರಿಕೆಯಾಗಿ 41,702 ಕೋಟಿ ರೂ.ಗೆ ತಲುಪಿದೆ.

ಅಂಕಿಅಂಶಗಳ ಪ್ರಕಾರ, ಈ ತಿಂಗಳಲ್ಲಿ ಕೇಂದ್ರ ಜಿಎಸ್ಟಿ 35,204 ಕೋಟಿ ರೂ., ರಾಜ್ಯ ಜಿಎಸ್ಟಿ 43,704 ಕೋಟಿ ರೂ., ಒಟ್ಟು ಜಿಎಸ್ಟಿ 90,870 ಕೋಟಿ ರೂ. ಪರಿಹಾರ ಸೆಸ್ 13,868 ಕೋಟಿ ರೂ. ಸಂಗ್ರಹಗೊಂಡಿದೆ.

ಫೆಬ್ರವರಿಯಲ್ಲಿ ನೀಡಲಾದ ಒಟ್ಟು ಮರುಪಾವತಿ 20,889 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 17.3 ರಷ್ಟು ಹೆಚ್ಚಾಗಿದೆ. ಫೆಬ್ರವರಿ 2025 ರಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ಶೇಕಡಾ 8.1 ರಷ್ಟು ಏರಿಕೆಯಾಗಿ ಸುಮಾರು 1.63 ಲಕ್ಷ ಕೋಟಿ ರೂ.ಗೆ ತಲುಪಿದೆ.

ಫೆಬ್ರವರಿ 2024 ರಲ್ಲಿ ನಿವ್ವಳ ಹಾಗೂ ಒಟ್ಟು ಜಿಎಸ್ಟಿ ಆದಾಯವು ಕ್ರಮವಾಗಿ 1.68 ಲಕ್ಷ ಕೋಟಿ ಮತ್ತು 1.50 ಲಕ್ಷ ಕೋಟಿ ರೂಪಾಯಿಗಳಾಗಿವೆ.

ರಾಜ್ಯವಾರು ಸಂಗ್ರಹ ಹೇಗಿದೆ?

ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಜಿಎಸ್​​ಟಿ ಸಂಗ್ರಹ ಗಮನಾರ್ಹ ಏರಿಕೆ ಕಂಡು ಬಂದಿದೆ. ಹರಿಯಾಣದ ಸಂಗ್ರಹವು ಶೇ. 20ರಷ್ಟು ಏರಿಕೆಯಾಗಿದ್ದರೆ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಶೇ. 14ರಷ್ಟು ಅಧಿಕವಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 2ರಷ್ಟು ಕುಸಿತವಾಗಿದ್ದರೆ, ಲಡಾಖ್ ಮತ್ತು ಲಕ್ಷದ್ವೀಪದಲ್ಲಿಯೂ ಇಳಿಕೆಯಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಈ ವರ್ಷದ ಜಿಎಸ್‌ಟಿ ಆದಾಯದಲ್ಲಿ ಶೇ. 11ರಷ್ಟು ಹೆಚ್ಚಳ ಅಂದಾಜಿಸಿದೆ. ಕೇಂದ್ರ ಜಿಎಸ್‌ಟಿ ಮತ್ತು ಪರಿಹಾರ ಸೆಸ್ ಸೇರಿದಂತೆ 11.78 ಲಕ್ಷ ಕೋಟಿ ರೂ.ಗೆ ತಲುಪುವ ಸಾಧ್ಯತೆ ಇದೆ.

gst collection,gst collections,india gst collection,record gst collection,gst collection news,gst collection india,august gst collection,gst collection record,highest gst collection,tax collection,highest gst collection in india,gst collection april,gst collection in news,gst collection in april,gst collection in march,gst collection month wise,gst collection in december,gst collections in august,tax collections

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ಪದ್ಧತಿಯೇ ಜಿಎಸ್‌ಟಿ. ಜಿಎಸ್‌ಟಿ ಕಾಯ್ದೆಯನ್ನು 2017ರ ಮಾ. 29ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಮತ್ತು 2017ರ ಜು. 1ರಂದು ಜಾರಿಗೆ ಬಂತು. ಜಿಎಸ್‌ಟಿ ಮಸೂದೆ ಬಗ್ಗೆ ಮೊದಲು ಧ್ವನಿ ಎತ್ತಿದ್ದು 2000ನೇ ಇಸವಿಯಲ್ಲಿ ಯುಪಿಎ ಸರ್ಕಾರ. ಆದರೆ ಆಗ ಮಸೂದೆ ಅಂಗೀಕಾರವಾಗಿರಲಿಲ್ಲ. ಅದಾಗಿ 17 ವರ್ಷಗಳ ಬಳಿಕ ಎನ್‌ಡಿಎ ಸರ್ಕಾರದಲ್ಲಿ ಮಸೂದೆಗೆ ಅಂಗೀಕಾರ ಲಭಿಸಿತ್ತು. ತೆರಿಗೆ ವಂಚನೆಯ ತಡೆ, ವ್ಯವಹಾರ ಸುಗಮಗೊಳಿಸುವುದು, ವ್ಯವಸ್ಥೆಯನ್ನು ಸುಧಾರಿಸುವುದು, ಸ್ಪರ್ಧಾತ್ಮಕ ಬೆಲೆಯನ್ನು ಉತ್ತೇಜಿಸುವುದು ಮುಂತಾದ ಗುರಿ ಜಿಎಸ್‌ಟಿ ಜಾರಿಯ ಹಿಂದಿದೆ. 

Tags:    

Similar News