ಶೆಹ್ಲಾ ರಶೀದ್ ವಿರುದ್ಧದ ಪ್ರಕರಣ ಕೈಬಿಡಲು ಪೊಲೀಸರಿಗೆ ದೆಹಲಿ ಕೋರ್ಟ್ ಅನುಮತಿ

ಸೇನೆಯ ವಿರುದ್ಧ ಟ್ವೀಟ್ ಮಾಡಿದ್ದ ಆರೋಪ ಹೊಂದಿದ್ದ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶೋರಾ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ದಿಲ್ಲಿ ಪೊಲೀಸರಿಗೆ ಇಲ್ಲಿನ ನ್ಯಾಯಾಲಯ ಅನುಮತಿ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.;

Update: 2025-03-01 13:42 GMT

ಶೆಹ್ಲಾ ರಶೀದ್ ಶೋರಾ

ಶೆಹ್ಲಾ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿದ್ದ ಅನುಮತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹಿಂಪಡೆದಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಲ್ಲಿಸಿದ ಅರ್ಜಿಯ ಮೇರೆಗೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಸಿಂಗ್ ಫೆಬ್ರವರಿ 27 ರಂದು ಈ ಆದೇಶ ಹೊರಡಿಸಿದ್ದಾರೆ.

ಅರ್ಜಿಯ ಪ್ರಕಾರ, ಸ್ಕ್ರೀನಿಂಗ್ ಸಮಿತಿಯ ಶಿಫಾರಸಿನ ಮೇರೆಗೆ ಎಲ್ಜಿ ಆದೇಶ ಬಂದಿದೆ.

ಸ್ಕ್ರೀನಿಂಗ್ ಕಮಿಟಿಯ ಶಿಫಾರಸನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಡಿಸೆಂಬರ್ 23, 2024 ರಂದು ಅನುಮೋದನೆ ನೀಡಿದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್ಯುಎಸ್​​ಯು) ಮಾಜಿ ಉಪಾಧ್ಯಕ್ಷೆ ತನ್ನ ಟ್ವೀಟ್​ಗಳ ಮೂಲಕ ವಿವಿಧ ಗುಂಪುಗಳ ನಡುವೆ ದ್ವೇಷ ಹುಟ್ಟಿಸುತ್ತಿದ್ದಾರೆ ಮತ್ತು ಸಾಮರಸ್ಯ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಆಗಸ್ಟ್ 18, 2019 ರ ಶೆಹ್ಲಾ ಅವರು ಟ್ವೀಟ್​ ಮಾಡಿ, ಸೇನಾ ಸಿಬ್ಬಂದಿ ಕಾಶ್ಮೀರದಲ್ಲಿ ಮನೆಗಳಿಗೆ ಪ್ರವೇಶಿಸಿ ಸ್ಥಳೀಯರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪಗಳನ್ನು ಆಧಾರರಹಿತ ಎಂದು ಸೇನೆ ತಿರಸ್ಕರಿಸಿತ್ತು. 

Tags:    

Similar News