Two Child Policy : ಎರಡು ಮಕ್ಕಳ ನಿಯಮ ರದ್ದುಗೊಳಿಸಿದ ಆಂಧ್ರ ಸರ್ಕಾರ
ಈ ಮಸೂದೆಯನ್ನು ನಾಲ್ಕು ದಿನಗಳ ಹಿಂದೆ ಮುನ್ಸಿಪಲ್ ಸಚಿವ ಪಿ ನಾರಾಯಣ ಅವರು ಸದನದಲ್ಲಿ ಮಂಡಿಸಿದ್ದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಇದ್ದ ನಿಯಮವನ್ನು ಆಂಧ್ರ ಪ್ರದೇಶ ಸರ್ಕಾರ ರದ್ದು ಮಾಡಿದೆ. ಆಂಧ್ರಪ್ರದೇಶ ವಿಧಾನಸಭೆ ಸೋಮವಾರ ಹೊನ ಕಾನೂನನ್ನು ಅಂಗೀಕರಿಸಿದೆ.
ಆಂಧ್ರಪ್ರದೇಶ ಮುನ್ಸಿಪಲ್ ಕಾನೂನುಗಳ ತಿದ್ದುಪಡಿ ಮಸೂದೆ, 2024 ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ನಿಯಮ ಸರ್ಕಾರ ಬದಲಾಯಿಸಿದೆ.
ಈ ಮಸೂದೆಯನ್ನು ನಾಲ್ಕು ದಿನಗಳ ಹಿಂದೆ ಮುನ್ಸಿಪಲ್ ಸಚಿವ ಪಿ ನಾರಾಯಣ ಅವರು ಸದನದಲ್ಲಿ ಮಂಡಿಸಿದ್ದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ.
1994ರಲ್ಲಿ, ದಕ್ಷಿಣದ ರಾಜ್ಯವು ಪುರಸಭೆಯ ನಿಯಮಗಳನ್ನು ತಂದಿತು. ಇದು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿತ್ತು. ಅದಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಪರ್ಧಿಸುವುದನ್ನು ನಿಷೇಧಿಸಿತ್ತು.
ಹೊಸ ನಿಯಮವು ಆಂಧ್ರಪ್ರದೇಶದ ಕ್ಷೀಣಿಸುತ್ತಿರುವ ಫಲವತ್ತತೆ ದರದ ಸಮಸ್ಯೆಯನ್ನು ನಿವಾರಿಸಲು ಮತ್ತು ಆ ಮೂಲಕ ಜನಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.