ಟ್ರಂಪ್ ಜತೆಗೆ ಜಗಳ, ಕ್ಷಮೆಯಾಚಿಸಲು ನಿರಾಕರಿಸಿದ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ
ಇದು ಎರಡೂ ಕಡೆಯವರಿಗೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ಈ ಮೂಲಕ ಘಟನೆ ತಮ್ಮೊಬ್ಬರ ತಪ್ಪು ಅಲ್ಲ ಎಂದು ಸಮರ್ಥಿಸಿಕೊಂಡಿರುವ ಅವರು ರಷ್ಯಾ ಕುರಿತು ತಮ್ಮ ಅಭಿಪ್ರಾಯ ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.;
ಅಮೆರಿಕ ಅಧ್ಯಕ್ಷರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ದ್ವಿಪಕ್ಷೀಯ ಸಭೆಯಿಂದ ಹೊರಕ್ಕೆ ನಡೆದಿರುವ ತಮ್ಮ ನಿರ್ಧಾರವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಸಮರ್ಥಿಸಿಕೊಂಡಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಉಕ್ರೇನ್ನಲ್ಲಿಶಾಂತಿ ಸ್ಥಾಪಿಸುವ ಈ ಮಾತುಕತೆ ಕುರಿತು ವಿಶ್ವವೇ ಕಣ್ಣಿಟ್ಟಿತ್ತು. ಆದರೆ, ಶುಕ್ರವಾರ (ಫೆಬ್ರವರಿ 28) ವಾಷಿಂಗ್ಟನ್ನಲ್ಲಿಇಡೀ ಘಟನೆಯೇ ಹಳಿ ತಪ್ಪಿತು. ಉಕ್ರೇನ್ ನಿಯೋಗವನ್ನೇ ಶ್ವೇತ ಭವನದಿಂದ ಹೊರಕ್ಕೆ ಕಳುಹಿಸಿದ ಪ್ರಸಂಗ ನಡೆಯಿತು.
ಫಾಕ್ಸ್ ನ್ಯೂಸ್ಗೆ ಮಾತನಾಡಿದ ಜೆಲೆನ್ಸ್ಕಿ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದರಲ್ಲದೆ, ಈ ಘಟನೆ ಉಭಯ ಪಕ್ಷಕ್ಕೂ ಅಪಾಯಕಾರಿ ಎಂದು ಹೇಳಿದರು.
"ನಾನು ಅಮೆರಿಕ ಅಧ್ಯಕ್ಷರನ್ನು ಗೌರವಿಸುತ್ತೇನೆ ಮತ್ತು ಆ ದೇಶದ ಜನರನ್ನೂ ಗೌರವಿಸುತ್ತೇನೆ. ನಾನು ಮುಕ್ತ ಮತ್ತು ಪ್ರಾಮಾಣಿಕವಾಗಿದ್ದೇನೆ. ತಪ್ಪು ಮಾಡಿದ್ದೇನೆ ಎಂಬುದನ್ನು ಒಪ್ಪುವುದಿಲ್ಲ, ಜೆಲೆನ್ಸ್ಕಿ ಹೇಳಿದ್ದಾರೆ.
"ಪ್ರಜಾಪ್ರಭುತ್ವಕ್ಕೆ ಮತ್ತು ಮುಕ್ತ ಮಾಧ್ಯಮಕ್ಕೆ ಸಕಲ ಗೌರವದೊಂದಿಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ," ಎಂದು ಅವರು ಹೇಳಿದ್ದಾರೆ.
ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ಗೆ ದೀರ್ಘ ಕಾಲ ಬೆಂಬಲ ನೀಡಲು ಖನಿಜ ಸಂಪತ್ತನ್ನು ನೀಡುವ ಒಪ್ಪಂದವೊಂದು ಶುಕ್ರವಾರ ನಡೆಯಬೇಕಾಗಿತ್ತು. ಆದರೆ, ಮಾತುಕತೆ ಹಾದಿ ತಪ್ಪಿದ ಕಾರಣ ಲೈವ್ ಕ್ಯಾಮೆರಾಗಳ ಮುಂದೆಯೇ ಎಲ್ಲವೂ ಆಶಯಗಳು ಭಗ್ನಗೊಂಡವು.
ಅಮೆರಿಕದ ಬಗ್ಗೆ ಜೆಲೆನ್ಸ್ಕಿ
ಇದು ಎರಡೂ ಕಡೆಯವರಿಗೆ ಒಳಿತಲ್ಲ. ನಾನು ತುಂಬಾ ಮುಕ್ತನಾಗಿದ್ದೆ. ರಷ್ಯಾದ ಬಗ್ಗೆ ನಮ್ಮ ಉಕ್ರೇನ್ ದೇಶದ ಮನೋಭಾವ ಬದಲಾಯಿಸಲು ಸಾಧ್ಯವಿಲ್ಲ" ಎಂದು ಜೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಹಾಗೂ ಅಮೆರಿಕದ ಸ್ನೇಹಪರ ದೇಶ ಎಂಬುದು ನಮ್ಮನಂಬಿಕೆ ಎಂದು ಹೇಳಿದ್ದಾರೆ.
"ಅಮೆರಿಕನ್ನರು ನಮ್ಮ ಅತ್ಯುತ್ತಮ ಸ್ನೇಹಿತರು. ಯುರೋಪಿಯನ್ನರು ನಮ್ಮ ಅತ್ಯುತ್ತಮ ಸ್ನೇಹಿತರು. ರಷ್ಯಾ ನಮ್ಮ ಶತ್ರುಗಳು" ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ವಾಗ್ವಾದ ತಪ್ಪು
"ನಮ್ಮ ಜನರ ನಡುವಿನ ಉತ್ತಮ ಸಂಬಂಧಗಳಿವೆ. ಮತ್ತು ಅದಕ್ಕಾಗಿಯೇ ನಾನು ಯಾವಾಗಲೂ ಅಮೆರಿಕಕ್ಕೆ ಧನ್ಯವಾದ ಹೇಳುವೆ" ಎಂದು ಜೆಲೆನ್ಸ್ಕಿ ಹೇಳಿದ್ದಾರೆ.
ಗೌಪ್ಯವಾಗಿ ಈ ಚರ್ಚೆ ನಡೆಯಬೇಕಿತ್ತೇ ಎಂದು ಕೇಳಿದ ಪ್ರಶ್ನೆಗೆ ಅವರು, ಇಲ್ಲ ಅದು ಒಳ್ಳೆಯ ಸಂದೇಶವಲ್ಲ ಎಂದು ಹೇಳಿದ್ದಾರೆ.
ವ್ಯಾನ್ಸ್ ಗಲಾಟೆ ಕಾರಣರೇ?
ಟ್ರಂಪ್ ಅವರೊಂದಿಗಿನ ಚರ್ಚೆ ವಿಫಲವಾಗಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಮಧ್ಯಪ್ರವೇಶವೇ ಕಾರಣ ಎಂದು ಜೆಲೆನ್ಸ್ಕಿ ಹೇಳಿದರು.
ಜಗಳದ ನಂತರ, ಟ್ರಂಪ್ ಮತ್ತು ಜೆಲೆನ್ಸ್ಕಿ ಪ್ರತ್ಯೇಕ ಕೋಣೆಗಳಿಗೆ ಹೋದರು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾತುಕತೆ ಮುಂದುವರಿಯಬೇಕೆಂದು ಉಕ್ರೇನಿಯನ್ನರು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.
ನಾವು ಬಲಶಾಲಿಗಳಾಗಬೇಕು
ಟ್ರಂಪ್ ಮತ್ತು ಜೆಲೆನ್ಸ್ಕಿ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸುವ ನಿರೀಕ್ಷೆಯಿತ್ತು, ಆದರೆ ಅದನ್ನು ರದ್ದುಗೊಳಿಸಲಾಯಿತು. ಯಾವುದೇ ಮಾತುಕತೆಗಳು ಉಕ್ರೇನ್ಗೆ"ನ್ಯಾಯಯುತ ಮತ್ತು ಶಾಶ್ವತ ಶಾಂತಿ" ಗೆ ಕಾರಣವಾಗಬೇಕು ಎಂದು ಹೇಳಿದರು.