Kerala News : ಪ್ರಿಯಕರನಿಗೆ ವಿಷವಿಕ್ಕಿ ಕೊಂದವಳಿಗೆ ಮರಣದಂಡನೆ
Kerala News : 24 ವರ್ಷದ ಯುವತಿಗೆ ಕೇರಳ ಕೋರ್ಟ್ ಮರಣ ದಂಡನೆ ವಿಧಿಸಿದರೆ, ಆಕೆಯ ಚಿಕ್ಕಪ್ಪನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.;
ತನ್ನ ಪ್ರಿಯಕರನನ್ನು ಕ್ರಿಮಿನಾಶಕ ಪ್ರಾಷನ ಮಾಡಿ ಕೊಲೆ ಮಾಡಿದ್ದ ಕೇರಳ ಮೂಲಕ 24 ವರ್ಷದ ಯುವತಿಗೆ ಅಲ್ಲಿನ ನ್ಯಾಯಾಲಯ ಸೋಮವಾರ ಮರಣ ದಂಡನೆ ವಿಧಿಸಿದೆ. ಇದೇ ವೇ
ಈ ಪ್ರಕರಣವು 23 ವರ್ಷದ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ ಅವರ ದುರಂತ ಸಾವಿನ ಪ್ರಕರಣವಾಗಿದೆ. ಆರೋಪಿ ಗ್ರೀಷ್ಮಾ ರಾಮವರ್ಂಂಚಿರೈನಲ್ಲಿರುವ ತನ್ನ ಮನೆಯಲ್ಲಿಯೇ ಪ್ರಿಯಕರನಿಗೆ ವಿಷ ಉಳಿಸಿದ್ದರು. .
ನ್ಯಾಯಾಲಯವು ಸೋಮವಾರ (ಜನವರಿ 20) ಗ್ರೀಷ್ಮಾ ಅವರ ವಯಸ್ಸಿನ ಹಿನ್ನೆಲೆಯಲ್ಲಿ ಶಿಕ್ಷೆ ತಗ್ಗಿಸುವ ಮನವಿಯನ್ನು ತಿರಸ್ಕರಿಸಿತು. ಅಪರಾಧವು ಅಪ್ರಚೋದಿತ ಮತ್ತು ಯೋಜಿತ ಎಂದು ಕೋರ್ಟ್ ಹೇಳಿದೆ. ಗ್ರೀಷ್ಮಾ ಅವರ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಅವರಿಗೆ ಸಾಕ್ಷ್ಯ ನಾಶ ಮಾಡಿದಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ, ಸಾಕಷ್ಟು ಪುರಾವೆಗಳಿಲ್ಲದ ಕಾರಣ ಗ್ರೀಷ್ಮಾ ಅವರ ತಾಯಿ ಸಿಂಧು ಅವರನ್ನು ಖುಲಾಸೆಗೊಳಿಸಿದೆ.
ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಇದು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ ಅವಳ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಪರಿಗಣಿಸಿ ಮರಣದಂಡನೆ ವಿಧಿಸಿತು.
ಈ ಹಿಂದೆ ಗ್ರಿಷ್ಮ ಪರ ನ್ಯಾಯವಾದಿಗಳು, ಯವತಿ ಉತ್ತಮ ಶೈಕ್ಷಣಿಕ ದಾಖಲೆ ಹೊಂದಿರುವ ಕಾರಣ ಸುಧಾರಣೆಯ ಅವಕಾಶಕ್ಕೆ ಅರ್ಹರು ಎಂದು ವಾದಿಸಿದ್ದರು. ಆಕೆ ಈಗಾಗಲೇ ಸುಧಾರಣೆಗಳ ಲಕ್ಷಣ ತೋರಿಸಿದ್ದಾಳೆ. ಆದ್ದರಿಂದ ಅವಳ ಜೀವನವನ್ನು ಪುನರ್ನಿರ್ಮಿಸಲು ಅವಕಾಶ ನೀಡಬೇಕು ಎಂದು ಪ್ರತಿವಾದಿ ವಾದಿಸಿದರು.
ನ್ಯಾಯಾಲಯದ ಪ್ರಕಾರ, ಆಕೆ ತನ್ನನ್ನು ಪ್ರೀತಿಸಿದ ವ್ಯಕ್ತಿಗೆ ಮೋಸ ಮಾಡಿದ್ದಾಳೆ. ಅದು ಸಮಾಜಕ್ಕೆ ಉತ್ತಮ ಸಂದೇಶ ಕಳುಹಿಸುವುದಿಲ್ಲ. ಇದೇ ವೇಳೆ ನ್ಯಾಯಾಲಯವು ತನಿಖಾ ತಂಡ ಶ್ಲಾಘಿಸಿತು ಮತ್ತು ತನಿಖೆಯನ್ನು ಬಹಳ ಬುದ್ಧಿವಂತಿಕೆಯಿಂದ ನಡೆಸಲಾಗಿದೆ ಎಂದು ಅಭಿಪ್ರಾಯಪಟ್ಟಿತು.