ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ; ಬಿಜೆಪಿ ಯಶಸ್ಸಿಗೂ, ಕಾಂಗ್ರೆಸ್‌ ಪರಾಜಯಕ್ಖೂ ಕಾರಣಗಳೇನು?

ಫಲಿತಾಂಶಗಳು, ಪಕ್ಷಗಳ ಚುನಾವಣಾ ಕಾರ್ಯತಂತ್ರಗಳು, ಮೈತ್ರಿ ಪಕ್ಷಗಳ ರಣತಂತ್ರ ಮತ್ತು ಜನಾದೇಶಗಳನ್ನು ರೂಪಿಸುವಲ್ಲಿ ಆ ಪಕ್ಷಗಳು ಅನುಸರಿಸಿದ ವಿಭಜಕ ನಿರೂಪಣೆಗಳ ಮೇಲೆ ಬೆಳಕು ಚೆಲ್ಲಿವೆ.;

Update: 2024-11-24 08:19 GMT
Maharashtra Election

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ವ್ಯತಿರಿಕ್ತವಾಗಿ ಪ್ರಕಟಗೊಂಡಿದೆ. ಇದು ಭಾರತೀಯ ರಾಜಕೀಯದ ಸಂಕೀರ್ಣ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸಿದೆ. ಬಿಜೆಪಿ ನೇತೃತ್ವದ ಮಹಾಯುತಿ (ಮಹಾ ಮೈತ್ರಿಕೂಟ) ಮಹಾರಾಷ್ಟ್ರದಲ್ಲಿ ಭಾರಿ ಬಹುಮತದೊಂದಿಗೆ ಜಯಗಳಿಸಿದರೆ, ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟವು ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವ ಜತೆಗೆ ಮತ್ತು ಆಕ್ರಮಣಕಾರಿ ವಿರೋಧ ತಂತ್ರಗಳನ್ನು ಧಿಕ್ಕರಿಸಿ ಜಾರ್ಖಂಡ್‌ನಲ್ಲಿ ಅಧಿಕಾರ ಉಳಿಸಿಕೊಂಡಿದೆ. ಫಲಿತಾಂಶಗಳು, ಪಕ್ಷಗಳ ಚುನಾವಣಾ ಕಾರ್ಯತಂತ್ರಗಳು, ಮೈತ್ರಿ ಪಕ್ಷಗಳ ರಣತಂತ್ರ ಮತ್ತು ಜನಾದೇಶಗಳನ್ನು ರೂಪಿಸುವಲ್ಲಿ ಆ ಪಕ್ಷಗಳು ಅನುಸರಿಸಿದ ವಿಭಜಕ ನಿರೂಪಣೆಗಳ ಮೇಲೆ ಬೆಳಕು ಚೆಲ್ಲಿವೆ.


Full View


ಮಹಾರಾಷ್ಟ್ರ: ಬಿಜೆಪಿಗೆ ಭರ್ಜರಿ ಜಯ

ಮಹಾರಾಷ್ಟ್ರದಲ್ಲಿ ಮಹಾಯುತಿ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗಳಿಸಿದ್ದು, ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಕೇವಲ 51 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯನ್ನು ಒಳಗೊಂಡ ಎಂವಿಎ ಅವಮಾನಕರ ಸೋಲು ಕಂಡಿದೆ. ಇದು ಅದರ ಮೈತ್ರಿ ರಚನೆ ಮತ್ತು ಪ್ರಚಾರ ವಿಧಾನದಲ್ಲಿನ ಗಮನಾರ್ಹ ದೌರ್ಬಲ್ಯವನ್ನು ಬಹಿರಂಗಪಡಿಸಿದೆ.

ಬಿಜೆಪಿಯ ಗೆಲುವಿನ ಪ್ರಮುಖ ಕಾರಣಗಳು:

ಲಡ್ಕಿ ಬಹಿನಾ ಯೋಜನೆ (LBY): ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಆರಂಭಿಸಿದ ಈ ಕಲ್ಯಾಣ ಯೋಜನೆ. ಕೇವಲ ಕೆಲವು ತಿಂಗಳಲ್ಲಿ ಮಹತ್ವದ ಮತದಾರರನ್ನು ಒಗ್ಗೂಡಿಸಿ ಬದಲಾವಣೆ ತಂದಿದೆ. ಫೆಡರಲ್‌ ಚರ್ಚೆಯಲ್ಲಿ ಭಾಗವಹಿಸಿದ್ದ ಡಾ. ಸಂದೀಪ್ ಯಾದವ್ ಅವರ ಪ್ರಕಾರ, “ಲೋಕಸಭಾ ಚುನಾವಣೆಗೆ ಹೋಲಿಸದರೆ ಮತ ಶೇಕಡಾವಾರು ಕಳೆದುಕೊಂಡರೂ, ಲಡ್ಕಿ ಬೆಹನಾ ಯೋಜನೆ ಬಿಜೆಪಿಗೆ ನಿರ್ಣಾಯಕ ಮತಗಳನ್ನು ಪಡೆಯಲು ನೆರವಾಗಿತ್ತು.

ಪ್ರಚಾರ ಶಿಸ್ತು ಮತ್ತು ಏಕತೆಯ ಧೋರಣೆ: ಬಿಜೆಪಿy ಶಿಸ್ತುಬದ್ಧ ಮತ್ತು ಪ್ರಖರವಾಗಿ ಪ್ರಚಾರ ನಡೆಸಿತ್ತು. ಸಂಘಟನೆಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿದೆ. ಇದರ ವಿರುದ್ಧ, ಮಹಾ ವಿಕಾಸ್‌ ಅಘಾಡಿಯ ಕ್ಷೇತ್ರ ಹಂಚಿಕೆ ಕಸರತ್ತಿನಲ್ಲಿಯೇ ಮುಳುಗಿತು. ಭಿನ್ನಮತದಿಂದ ಕಂಗೆಟ್ಟು, ಮತದಾರರಿಗೆ ಸ್ಪಷ್ಟ ಸಂದೇಶ ನೀಡುವಲ್ಲಿ ವಿಫಲವಾಯಿತು.

ಆರ್ಥಿಕ ಬಲ ಮತ್ತು ಸಂಸ್ಥೆಗಳ ಬಳಕೆ: ಚುನಾವಣೆಯಲ್ಲಿ ಹಣದ ಪ್ರಭಾವ ಮತ್ತು ಸರ್ಕಾರಿ ಸಂಸ್ಥೆಗಳ ದುರುಪಯೋಗ ಮಾಡಿರುವ ಆರೋಪಗಳಿವೆ. ಚುನಾವಣಾ ಪ್ರಕ್ರಿಯೆಯ ದಕ್ಷತೆಯನ್ನು ಪ್ರಶ್ನೆಗೆ ಒಳಪಡಿಸಿದೆ ಎಂದು ಚರ್ಚೆಯಲ್ಲಿ ಪಾಲ್ಗೊಂಡ ಡಾ. ಯಾದವ್ ಹೇಳಿದ್ದಾರೆ. ಹಣ ವಶಪಡಿಸಿಕೊಂಡಿರುವುದು ಮತ್ತು ಇತರ ಅಕ್ರಮಗಳ ವರದಿಗಳು ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಎತ್ತಿ ಸೂಚಿಸುತ್ತವೆ.

ಧ್ರುವೀಕರಣ ಮತ್ತು ಕಥಾಹಂದರದ ನಿಯಂತ್ರಣ: ಬಿಜೆಪಿ ಧಾರ್ಮಿಕ ಮತ್ತು ವಿಭಜನಾ ತಂತ್ರವನ್ನು ಶಕ್ತಿಯುತವಾಗಿ ಬಳಸಿಕೊಂಡಿತು. ಅದಕ್ಕೆ ವಿರೋಧ ಪಕ್ಷಗಳಿಂದ ಸಮರ್ಪಕ ಪ್ರತಿಕ್ರಿಯೆ ಗಳಿಸಲಿಲ್ಲ.

ಜಾರ್ಖಂಡ್‌ನಲ್ಲಿ ಆಡಳಿತ ವಿರೋಧಿ ಅಲೆಯ ನಡುವೆಯೂ ಗೆಲುವು

ಜಾರ್ಖಂಡ್‌ನಲ್ಲಿ, ಜೆಎಂಎಂ-ಕಾಂಗ್ರೆಸ್ ಮೈತ್ರಿ 56 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2019ರ 46 ಸ್ಥಾನಗಳ ಹೋಲಿಕೆಯಲ್ಲಿ ಉತ್ತಮ ಸಾಧನೆ. ಉತ್ತಮ ಪ್ರಚಾರ ಮತ್ತು ಹೆಮಂತ್ ಸೋರೆನ್ ಅವರ ನಾಯಕತ್ವವನ್ನು ಅಡಗಿಸಲು ಬಿಜೆಪಿ ಮಾಡಿರುವ ಪ್ರಯತ್ನಗಳು ಇಲ್ಲಿ ಕೈಕೊಟ್ಟವು. ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಕೇವಲ 24 ಸ್ಥಾನಗಳಿಗೆ ಕುಸಿಯಿತು.

ಜೆಎಂಎಂ ಗೆಲುವಿನ ಕಾರಣಗಳು:

ತಳ ಮಟ್ಟದ ಸಂಪರ್ಕ: ಹೆಮಂತ್ ಸೋರೆನ್ ಸರ್ಕಾರವು ಗ್ರಾಮೀಣ ಮತ್ತು ಸ್ಥಳೀಯ ಸಮುದಾಯಗಳಲ್ಲಿ ಬಲವಾದ ಸಂಪರ್ಕವನ್ನು ಉಳಿಸಿಕೊಂಡಿತ್ತು. ಫ್ರಂಟ್‌ಲೈನ್ ನ ಹಿರಿಯ ಉಪಸಂಪಾದಕಿ ಟಿ.ಕೆ. ರಾಜಲಕ್ಷ್ಮಿ ಹೇಳುವಂತೆ , “ಬಿಜೆಪಿಯ ವಿಭಜನಾ ತಂತ್ರವನ್ನು ಎದುರಿಸಲು ಜೆಎಂಎಂ ಮಾಡಿದ ಪ್ರಯತ್ನ ಮಹತ್ವದ್ದು. ವಿರೋಧಿ ಅಲೆಯ ನಡುವೆಯೂ ಅವರು ತಮ್ಮ ಮತಗಳನ್ನು ಕಾಪಾಡಿಕೊಂಡು, ಸ್ಥಾನ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ.

ವಿಭಜನಾ ರಾಜಕೀಯದ ತಿರಸ್ಕಾರ: ಜಾರ್ಖಂಡ್‌ನಲ್ಲಿ ಬಿಜೆಪಿ ನಡೆಸಿದ ಧಾರ್ಮಿಕ ತಾರತಮ್ಯದ ಪ್ರಚಾರ ಮತದಾರರ ಮೇಲೆ ಪರಿಣಾಮ ಬೀರುವಲ್ಲಿ ವಿಫಲವಾಯಿತು. ರಾಜಲಕ್ಷ್ಮಿ ಅವರ ಪ್ರಕಾರ, “ಜೆಎಂಎಂ ಗೆಲುವು, ವಿಭಜನಾ ಚರ್ಚೆಯ ಮಿತಿಗಳನ್ನು ತೋರಿಸುತ್ತದೆ. ವಿಶೇಷವಾಗಿ ಆದಿವಾಸಿ ಸಮುದಾಯದ ಮನ ಗೆದ್ದಿದ್ದಾರೆ.”

ಹೆಮಂತ್ ಮೇಲಿನ ಸಹಾನುಭೂತಿ : ಈ ವರ್ಷದ ಆರಂಭದಲ್ಲಿ ಭ್ರಷ್ಟಾಚಾರದ ಆರೋಪದಿಂದ ಸೋರೆನ್ ಜೈಲು ಸೇರಿದ್ದರು. ಹೀಗಾಗಿ ಅಲ್ಲಿನ ಮತದಾರರು ಬಿಜೆಪಿ ವಿರುದ್ಧ ನಿಂತರು ಮತ್ತು ಹೇಮಂತ್‌ಗೆ ಸಹಾನುಭೂತಿ ತೋರಿದರು. ಸೋರೆನ್ ವಿರುದ್ಧ ಬಿಜೆಪಿ ಬಳಸಿದ ಬಲಪ್ರಯೋಗ ಆದಿವಾಸಿ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಮೈತ್ರಿ ತಂತ್ರ:

ಕಾಂಗ್ರೆಸ್ ಜಾರ್ಖಂಡ್‌ನಲ್ಲಿ ಪ್ರಾಮುಖ್ಯ ಪಾತ್ರವಹಿಸದಿದ್ದರೂ ಜೆಎಂಎಂ ಜೊತೆಗಿನ ಮೈತ್ರಿ ನಿರ್ಣಾಯಕವಾಗಿತ್ತು. ರಾಜಲಕ್ಷ್ಮಿ ಪ್ರಕಾರ, “ಜಾರ್ಖಂಡ್‌ನಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಮಾಡಿರುವ ಮೈತ್ರಿಯು ಕಾಂಗ್ರೆಸ್‌ಗೆ ಮಾದರಿಯಾಗಲಿದೆ.

ಕಾಂಗ್ರೆಸ್; ಉದಾಸಿನ ನೀತಿ

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸಮರ್ಥತೆಯನ್ನು ತೋರಿದೆ. ಈ ಅಸಮರ್ಥತೆ ಇಂಡಿಯಾ ಒಕ್ಕೂಟಕ್ಕೆ ಬಲಿಷ್ಠಗೊಳ್ಳಲು ತಡೆಯಾಗಿದೆ. ಪುನೀತ್ ನಿಕೊಲಸ್ ಯಾದವ್ ಹೇಳುವಂತೆ, “ಕಾಂಗ್ರೆಸ್ ತನ್ನ ಲೋಕ್ಸಭಾ ಚುನಾವಣಾ ಸಾಧನೆಗಳನ್ನು ಪುನರಾವರ್ತಿಸಲು ವಿಫಲವಾಗಿದೆ. ಪಕ್ಷದ ಆಂತರಿಕ ಪ್ರಗತಿಗೆ ಬಹಳ ದೊಡ್ಡ ಅಡ್ಡಿಯಾಗಿದೆ.

ಕಾಂಗ್ರೆಸ್ ಒಳಗಿನ ಸಮಸ್ಯೆಗಳು:

ಅಸಂಘಟಿತ ಪ್ರಚಾರ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೀಟು ಹಂಚಿಕೆಯಲ್ಲೇ ಬ್ಯುಸಿಯಾಗಿದ್ದ ಕಾರಣ ಪ್ರಚಾರದ ವೇಗ ಕುಂಠಿತವಾಯಿತು. ಜಾರ್ಖಂಡ್‌ನಲ್ಲಿ ಹಿರಿಯ ಪಾಲುದಾರರಾಗಿದ್ದರೂ ದಕ್ಷತೆ ತೋರಲಿಲ್ಲ.

ನೆಲದ ವಾಸ್ತವಕ್ಕಿಂತ ದೂರ : ರಾಜಕೀಯದಲ್ಲಿ ಗೆಲ್ಲಲು ಬೇಕಾದ ಪ್ರಥಮ ಸಂಗತಿಗಳನ್ನು ಗುರುತಿಸಲು ರಾಹುಲ್ ಗಾಂಧಿ ವಿಫಲರಾಗಿದ್ದಾರೆ.

ಸಂಘಟನಾ ದೌರ್ಬಲ್ಯ: ಜಾಗತಿಕ ಮಟ್ಟದಲ್ಲಿ ದೃಢತೆಯ ಅಭಾವ. ಮತದಾರರನ್ನು ಬಲಪಡಿಸಲು ಪಕ್ಷ ಅಸಮರ್ಥವಾಗಿದೆ.

ಬಿಜೆಪಿಯ ಬೆಳವಣಿಗೆ, ಮುಂದಿನ ಹಾದಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವು ಮತ್ತು ಉಪಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ 2029ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಗೆ ಬಲ ನೀಡಿದೆ.

ಇಂಡಿಯಾ ಒಕ್ಕೂಟಕ್ಕಿರುವ ಸವಾಲುಗಳು:

ಮೈತ್ರಿಗಳ ಏಕತೆ:

ತಂತ್ರಜ್ಞಾನ ದೃಷ್ಟಿ:

ಚುನಾವಣಾ ಸುಧಾರಣೆಗಳು:

ಉಪಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಗೆಲುವು

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಾಧನೆಗಳು ತೋರಿಸುತ್ತವೆ.

Tags:    

Similar News