ಪ್ರಾಣಿ- ಪಕ್ಷಿಗಳ ದಾಹ ತೀರಿಸಲು ಕಬ್ಬನ್ ಪಾರ್ಕ್‌ನಲ್ಲಿ ನೀರಿನ ಕುಡಿಕೆ ವ್ಯವಸ್ಥೆ
ಕಬ್ಬನ್ ಪಾರ್ಕಿನಲ್ಲಿ ಸುಮಾರು 150 ಕಡೆಗಳಲ್ಲಿ ಕುಡಿಯುವ ನೀರಿನ ಕುಡಿಕೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.;
By : The Federal
Update: 2024-04-15 06:20 GMT
ಬೆಂಗಳೂರು: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಮತ್ತು ಬೆಳಕು ಚಾರಿಟಬಲ್ ಟ್ರಸ್ಟ್ ಸಂಸ್ಥೆ ವತಿಯಿಂದ ಮೂಕ ಪ್ರಾಣಿ- ಪಕ್ಷಿಗಳ ಹಸಿವು ಹಾಗೂ ದಾಹವನ್ನು ತೀರಿಸಲು ಕಬ್ಬನ್ ಪಾರ್ಕಿನಲ್ಲಿ ಸುಮಾರು 150 ಕಡೆಗಳಲ್ಲಿ ಕುಡಿಯುವ ನೀರಿನ ಪಾಟ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಸದರು ಹಾಗೂ ಈ ಬಾರಿಯ ಬಿಜೆಪಿಯ ಲೋಕಸಭೆ ಅಭ್ಯರ್ಥಿಯಾದ ಪಿ. ಸಿ ಮೋಹನ್ ಹಾಗೂ ಕಾಂಗ್ರೆಸ್ ನ ಲೋಕಸಭೆ ಅಭ್ಯರ್ಥಿಯಾದ ಮನ್ಸೂರ್ ಆಲಿ ಖಾನ್ ಹಾಗೂ ಕೆ.ಆರ್. ಎಸ್ ಪಕ್ಷದ ಮುಖಂಡ ಕೆ. ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರಾಜ್ಯದಲ್ಲಿ ತೀವ್ರ ಬರ ಉಂಟಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮೂಕ ಪ್ರಾಣಿಗಳು ನಿರ್ಜಲೀಕರಣದಿಂದಾಗಿ ಸಾವನ್ನಪ್ಪುತ್ತಿವೆ. ಈ ನಿಟ್ಟಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಪಕ್ಷಿಗಳ ದಾಹ ತೀರಿಸಲು ನೀರಿನ ಪಾಟ್ ವ್ಯವಸ್ಥೆ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.