ಹಾಂಗ್ ಕಾಂಗ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ; ಎರಡನೇ ದಿನವೂ ರಕ್ಷಣಾ ಕಾರ್ಯಾಚರಣೆ, ಸಾವಿನ ಸಂಖ್ಯೆ 94ಕ್ಕೆ ಏರಿಕೆ

ರಕ್ಷಣಾ ಸಿಬ್ಬಂದಿ ಅಗ್ನಿ ಅನಾಹುತಕ್ಕೆ ಒಳಗಾದ ಬಹುಮಹಡಿ ಕಟ್ಟಡದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಹೆಚ್ಚಿನ ಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Update: 2025-11-28 06:43 GMT

ಗಾಯಾಳುಗಳನ್ನು ರಕ್ಷಣಾ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರು.

Click the Play button to listen to article

ಹಾಂಗ್ ಕಾಂಗ್‌ನ ಬಹುಮಹಡಿ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೂರನೇ ದಿನವೂ ಬದುಕುಳಿದವರ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 94 ಕ್ಕೆ ಏರಿದೆ.

ಹಾಂಗ್‌ಕಾಂಗ್‌ ಗಡಿಯ ಉಪನಗರವಾದ ತೈ ಪೋ ಜಿಲ್ಲೆಯಲ್ಲಿ ಸಾವಿರಾರು ಜನರು ವಾಸಿಸುವ ಕಟ್ಟಡಗಳ ಸಂಕೀರ್ಣ ಇದಾಗಿದೆ. ಇಲ್ಲಿನ ವಾಂಗ್ ಫುಕ್ ಕೋರ್ಟ್‌ನ ಕಿಟಕಿಗಳಿಂದ ದಟ್ಟವಾದ ಹೊಗೆ ಇನ್ನೂ ಹೊರಬರುತ್ತಿದ್ದು, ಬ್ಯಾಟರಿಗಳನ್ನು ಹಿಡಿದು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.  

"ಕಟ್ಟಡದಲ್ಲಿರುವ ಅನುಪಯುಕ್ರ ವಸ್ತುಗಳಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಯಲು ಅಗ್ನಿಶಾಮಕ ದಳದವರು ಶ್ರಮಿಸುತ್ತಿದ್ದಾರೆ. ಪರಿಸ್ಥಿತಿ ಬಹುತೇಕ ಹತೋಟಿಗೆ ಬಂದಿದೆ ಎಂದು ಅಗ್ನಿಶಾಮಕ ಸೇವೆಗಳ ಕಾರ್ಯಾಚರಣೆಗಳ ಉಪ ನಿರ್ದೇಶಕ ಡೆರೆಕ್ ಆರ್ಮ್‌ಸ್ಟ್ರಾಂಗ್ ಚಾನ್ ಹೇಳಿದ್ದಾರೆ.

ಎಷ್ಟು ಜನರು ಕಾಣೆಯಾಗಿದ್ದಾರೆ ಅಥವಾ ಸಿಕ್ಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಗುರುವಾರ(ನ.27) ಮುಂಜಾನೆ 279 ಜನರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹಾಂಗ್ ಕಾಂಗ್ ನಾಯಕ ಜಾನ್ ಲೀ ಹೇಳಿದ್ದಾರೆ.

ಬಿದಿರಿನ ಸ್ಕ್ಯಾಫೋಲ್ಡಿಂಗ್ ಮತ್ತು ನಿರ್ಮಾಣ ಜಾಲಗಳಲ್ಲಿ ಬೆಂಕಿ ಪ್ರಾರಂಭವಾಗಿ ನಂತರ ಸಂಕೀರ್ಣದ ಎಂಟು ಕಟ್ಟಡಗಳಲ್ಲಿ ಏಳು ಕಟ್ಟಡಗಳಿಗೆ ಹರಡಿತ್ತು. ಕಟ್ಟಡಗಳಿಗೆ ಬೆಂಕಿ ವೇಗವಾಗಿ ಹರಡಿತು ಮತ್ತು ತುರ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಕಾರ್ಯಾಚರಣೆ ಮಾಡಲು ಬಹಳ ತೊಂದರೆ ಅನುಭವಿಸಿದರು ಎಂದು ಹೇಳಿದರು.

 "ಹೆಚ್ಚಿನ ತಾಪಮಾನ ಮತ್ತು ಕತ್ತಲೆ ಹೆಚ್ಚಾಗಿದ್ದರಿಂದ  ಕಟ್ಟಡಕ್ಕೆ ಪ್ರವೇಶಿಸಲು ತುಂಬಾ ಕಷ್ಟಕರವಾಗಿತ್ತು. " 11 ಅಗ್ನಿಶಾಮಕ ದಳದವರು ಸೇರಿದಂತೆ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 94 ಜನರು ಮೃತಪಟ್ಟಿದ್ದಾರೆ. ಸುಮಾರು 900 ಜನರನ್ನು ರಾತ್ರಿಯಿಡೀ ತಾತ್ಕಾಲಿಕ ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ. ಹಾಂಗ್ ಕಾಂಗ್‌ನ ಬಿಷಪ್‌ಗೆ ಪೋಪ್ ಲಿಯೋ XIV ಟೆಲಿಗ್ರಾಮ್ ಕಳುಹಿಸಿದ್ದು, ಬೆಂಕಿಯ ಅನಾಹುತದಿಂದ ದುಃಖಿತನಾಗಿದ್ದೇನೆ. ಮೃತರು ಮತ್ತು ಗಾಯಾಳುಗಳ ಕುಟುಂಬಗಳು ಮತ್ತು ತುರ್ತು ಕಾರ್ಯಕರ್ತರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ಕಾರಣರಾದ ಶಂಕೆಯ ಮೇರೆಗೆ ಮೂವರನ್ನು  ಬಂಧಿಸಲಾಗಿದೆ. ಅವರು ಕೆಲಸ ಮಾಡುವ ಕಂಪನಿಯ ಹೆಸರನ್ನು ಪೊಲೀಸರು ನೇರವಾಗಿ ಹೆಸರಿಸಿಲ್ಲ. ಎಂದು ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಐಲೀನ್ ಚುಂಗ್ ಹೇಳಿದರು.

ಗುರುವಾರ ಪೊಲೀಸರು ಪ್ರೆಸ್ಟೀಜ್ ಕನ್‌ಸ್ಟ್ರಕ್ಷನ್ ಹಾಗೂ ಎಂಜಿನಿಯರಿಂಗ್ ಕಂಪನಿಯ ಕಚೇರಿಗೂ ಭೇಟಿ ನೀಡಿದ್ದು, ನವೀಕರಣದ ಉಸ್ತುವಾರಿ ವಹಿಸಿಕೊಂಡಿದೆ ಎಂದು ದೃಢಪಡಿಸಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೊಲೀಸರು ಪುರಾವೆಯಾಗಿ ದಾಖಲೆಗಳ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ. ಎತ್ತರದ ಕಟ್ಟಡಗಳ ಹೊರ ಗೋಡೆಗಳ ಮೇಲಿನ ಕೆಲವು ವಸ್ತುಗಳು ಬೆಂಕಿ ನಿರೋಧಕ ಮಾನದಂಡಗಳನ್ನು ಪೂರೈಸದಿರುವುದೂ ಕಾರಣವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಕಟ್ಟಡಗಳು ಸ್ಕ್ಯಾಫೋಲ್ಡಿಂಗ್‌ನಲ್ಲಿ ಮುಚ್ಚಲ್ಪಟ್ಟಿದ್ದವು ವಸತಿ ಸಂಕೀರ್ಣವು ಸುಮಾರು 4,800 ನಿವಾಸಿಗಳಿಗೆ ಸುಮಾರು 2,000 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಎಂಟು ಕಟ್ಟಡಗಳನ್ನು ಒಳಗೊಂಡಿತ್ತು, ಇದರಲ್ಲಿ ಅನೇಕ ವೃದ್ಧರು ವಾಸವಾಗಿದ್ದರು.

ವಸತಿ ಸಂಕೀರ್ಣವನ್ನು 1980ರ ದಶಕದಲ್ಲಿ ನಿರ್ಮಿಸಲಾಗಿತ್ತು ಮತ್ತು ಇದೀಗ ನವೀಕರಣ ಮಾಡಲಾಗುತ್ತಿತ್ತು. ಈ ಕುರಿತು ಭ್ರಷ್ಟಾಚಾರದ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತಿರುವುದಾಗಿ ಹಾಂಗ್ ಕಾಂಗ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ತಿಳಿಸಿದೆ.

Tags:    

Similar News