ರಾಜ್ಯದಲ್ಲಿ ಮೇ 29ರಿಂದ ಶಾಲೆಗಳ ಪುನರಾರಂಭ
ಕರ್ನಾಟಕದಲ್ಲಿ ಮೇ 29ರಿಂದ ಶಾಲೆಗಳ ಪುನರಾರಂಭವಾಗಲಿದೆ. 2024-25ನೇ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಲಿಕಾ ದಿನ ಹಾಗೂ ರಜೆ ಅವಧಿ ನಿಗದಿ ಮಾಡಲಾಗಿದೆ.;
By : The Federal
Update: 2024-04-13 06:03 GMT
2024-25ನೇ ಸಾಲಿನ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳನ್ನು ಮೇ 29ರಿಂದ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 29ರಿಂದ ರಾಜ್ಯದ ಎಲ್ಲ ಪಠ್ಯಕ್ರಮದ ಶಾಲೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
2024-25ನೇ ಸಾಲಿನಲ್ಲಿ 48 ದಿನ ಬೇಸಿಗೆ ರಜೆ ಸಿಗಲಿದ್ದು, 18 ದಿನ ದಸರಾ ರಜೆ ಇರಲಿದೆ. 244 ದಿನ ಶಾಲಾ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರಿಗೆ 121 ದಿನಗಳ ರಜೆ ಸಿಗಲಿದೆ. 244 ದಿನಗಳ ಶಾಲಾ ಅವಧಿಯಲ್ಲಿ 180 ದಿನಗಳನ್ನು ಬೋಧನೆ ಮತ್ತು ಕಲಿಕೆಗೆ , ಪರೀಕ್ಷೆ ಹಾಗೂ ಮೌಲ್ಯಾಂಕನಕ್ಕಾಗಿ 26 ದಿನ, 24 ದಿನ ಪತ್ಯೇತಕ ಚಟುವಟಿಕೆಗಳಿಗೆ, 10 ದಿನ ಫಲಿತಾಂಶ ವಿಶ್ಲೇಷಣೆಗೆ ಮೀಸಲಿರಿಸಲಾಗಿದ್ದು, ಇನ್ನುಳಿದ 4 ದಿನಗಳನ್ನು ಸ್ಥಳೀಯ ರಜಾ ದಿನಗಳನ್ನಾಗಿ ಬಳಸಿಕೊಳ್ಳು ಸೂಚಿಸಲಾಗಿದೆ.