Sunita Williams : ಬಾಹ್ಯಾಕಾಶ ನಿಲ್ದಾಣ ಸೇರಿದ ನಾಸಾ ಕ್ರ್ಯೂ -10 , ಸುನಿತಾ ವಾಪಾಸ್​ಗೆ ಕ್ಷಣಗಣನೆ

ಈ ಯೋಜನೆಯ ಭಾಗವಾಗಿ ನಾಸಾದ ಬಾಹ್ಯಾಕಾಶಯಾತ್ರಿಗಳಾದ ಮ್ಯಾಥ್ಯೂ ಡೊಮಿನಿಕ್, ಮೈಕೆಲ್ ಬರ್ರಾಟ್, ಜಿನೆಟ್ ಎಪ್ಸ್, ಮತ್ತು ರೊಸ್ಕೋಸ್ಮೋಸ್‌ನ ಅಲೆಕ್ಸಾಂಡರ್ ಗ್ರೆಬೆನ್ಕಿನ್ ಅಂತರಿಕ್ಷ ನಿಲ್ದಾಣ ಪ್ರವೇಶಿಸಿದ್ದಾರೆ.;

Update: 2025-03-16 11:19 GMT

ನಾಸಾದ ಕ್ರ್ಯೂ 10 ಅಂತರಿಕ್ಷ ವಾಹನ ಯಶಸ್ವಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ್ದು, ನಾಸಾದ ವಾಣಿಜ್ಯ ಬಾಹ್ಯಾಕಾಶ ಯೋಜನೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಸ್ಪೇಸ್​ ಎಕ್ಸ್​ ಡ್ರ್ಯಾಗನ್ ಅಂತರಿಕ್ಷ ನೌಕೆಯಲ್ಲಿ ಭೂಮಿಯಿಂದ 4 ಬಾಹ್ಯಾಕಾಶ ಯಾನಿಗಳು ಪ್ರಯಾಣಿಸಿದ್ದರು. ಈ ನೌಕೆಯನ್ನು ಸಮರ್ಪಕವಾಗಿ ಡಾಕ್​ ಮಾಡಲಾಗಿದೆ.

ಈ ಯೋಜನೆಯ ಭಾಗವಾಗಿ ನಾಸಾದ ಬಾಹ್ಯಾಕಾಶಯಾತ್ರಿಗಳಾದ ಮ್ಯಾಥ್ಯೂ ಡೊಮಿನಿಕ್, ಮೈಕೆಲ್ ಬರ್ರಾಟ್, ಜಿನೆಟ್ ಎಪ್ಸ್, ಮತ್ತು ರೊಸ್ಕೋಸ್ಮೋಸ್‌ನ ಅಲೆಕ್ಸಾಂಡರ್ ಗ್ರೆಬೆನ್ಕಿನ್ ಅಂತರಿಕ್ಷ ನಿಲ್ದಾಣ ಪ್ರವೇಶಿಸಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಈ ಸಿಬ್ಬಂದಿಯನ್ನು ಸ್ವಾಗತಿಸಿದರು. ಇನ್ನೀಗ ವಿಲಿಯಮ್ಸ್ ಮತ್ತು ವಿಲ್ಮೋರ್ ಹಿಂತಿರುಗಲಿದ್ದಾರೆ. ಅವರು ಮಾರ್ಚ್​ 19ರಂದು ಭೂಮಿಗೆ ತಲುಪಲಿದ್ದಾರೆ.

ಯಶಸ್ವಿ ಡಾಕಿಂಗ್​, ಸ್ವಾಗತ

ಫ್ಲೋರಿಡಾದ ಕೆನೆಡಿ ಸ್ಪೇಸ್ ಸೆಂಟರ್​ ನಿಂದ ಉಡಾವಣೆಯಾದ ನಂತರ, ಕ್ರ್ಯೂ 10 ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣದ ಸಮವಾಗಿ ಕಕ್ಷೆಯಲ್ಲಿ ಸ್ಥಿರಗೊಂಡಿತು. ಬಳಿಕ ಸ್ವಯಂಚಾಲಿತ ಡೋಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಿತು. ಬಾಹ್ಯಾಕಾಶದಲ್ಲಿ ಮಾನವ ಹಾಜರಾತಿಯನ್ನು ನಿರಂತರವಾಗಿ ಮುಂದುವರಿಸಲು ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಮುನ್ನಡೆಸಲು ಈ ಮಿಷನ್ ಪ್ರಮುಖ ಪಾತ್ರವಹಿಸಿದೆ.

ಡಾಕಿಂಗ್ ಬಳಿಕ ನಾಲ್ವರು ಬಾಹ್ಯಾಕಾಶಯಾತ್ರಿಗಳು ನಿಲ್ದಾಣಕ್ಕೆ ತೇಲಿಕೊಂಡು ಸೇರಿಕೊಂಡರು. ಪ್ರಸ್ತುತ ಅಲ್ಲಿರುವ ಬಾಹ್ಯಾಕಾಶ ಸಿಬ್ಬಂದಿ, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರೆನ್ನು ಆತ್ಮೀಯ ಸ್ವಾಗತಿಸಿದರು.

ಮಿಷನ್ ಉದ್ದೇಶಗಳು

ಕ್ರ್ಯೂ 10 ತಂಡ ಸುಮಾರು ಆರು ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ವೈಜ್ಞಾನಿಕ ಪ್ರಯೋಗಗಳು, ನಿರ್ವಹಣಾ ಕಾರ್ಯಗಳು, ಮತ್ತು ಬಾಹ್ಯಾಕಾಶ ವೀಕ್ಷಣೆ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ. ಈ ಮಿಷನ್ ಶೂನ್ಯ ಗುರುತ್ವಾಕರ್ಷಣೆಯ ಅಧ್ಯಯನ, ಜೀವಶಾಸ್ತ್ರ ಮತ್ತು ತಂತ್ರಜ್ಞಾನ ಪರೀಕ್ಷೆಗಳು ಸೇರಿದಂತೆ ಹಲವು ಪ್ರಮುಖ ಸಂಶೋಧನೆಗಳೊಂದಿಗೆ ಭವಿಷ್ಯದ ಚಂದ್ರ ಮತ್ತು ಮಂಗಳ ಗ್ರಹ ಯಾತ್ರೆಗಳಿಗೆ ಪೂರಕವಾಗಲಿದೆ.

ಮುಂದಿನ ಹಂತ?

ಕ್ರ್ಯೂ 10 ತಂಡ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವೇಶಿಸಿದ ಬೆನ್ನಿಗೇ, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಒಳಗೊಂಡ ಪ್ರಸ್ತುತ ತಂಡ ಹಿಂತಿರುಗಲು ಸಿದ್ಧತೆ ನಡೆಸುತ್ತಿದೆ. ನಾಸಾ ಸ್ಪೇಸ್​ಎಕ್ಸ್​ ಮತ್ತು ಇತರ ವಾಣಿಜ್ಯ ಪಾಲುದಾರರೊಂದಿಗೆ ಕೈಜೋಡಿಸಿ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಿರ್ವಹಿಸಲು ಯೋಜನೆ ಹಾಕಿದೆ.

Live Updates
2025-03-16 11:33 GMT

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಾಸಾ ಗಗನಯಾತ್ರಿ ಆನ್ ಸಿ ಮೆಕ್‌ಕ್ಲೇನ್ , "ನಾವು ಕಿಟಕಿಯಿಂದ ಹೊರಗೆ ನೋಡಿದಾಗ ಮತ್ತು ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣವನ್ನು ನೋಡಿದಾಗ ನಮ್ಮ ಸಿಬ್ಬಂದಿಗೆ ಆದ ಅಪಾರ ಸಂತೋಷವನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2025-03-16 11:33 GMT

ಹಲವು ತೊಡಕುಗಳ ಬಳಿಕ ಗಗನಯಾತ್ರಿ ಸುನಿತಾ ಹಾಗೂ ಬುಚ್‌ ವಿಲ್ಮೋರ್‌ ಅವರನ್ನು ಹೊತ್ತ ಸ್ಟಾರ್‌ಲಿಂಕ್‌ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿ ಐಎಸ್‌ಎಸ್‌ ತಲುಪಿದರೂ, ತಾಂತ್ರಿಕ ಕಾರಣಗಳಿಂದ ಅವರನ್ನು ಅಲ್ಲೇ ಬಿಟ್ಟು ಮರಳಬೇಕಾಗಿ ಬಂದಿತ್ತು. ಅದಾದ ನಂತರ ಅವರಿಬ್ಬರನ್ನು ಕರೆತರುವ ಯತ್ನಗಳು ನಾನಾಕಾರಣಗಳಿಂದ ವಿಫಲವಾದರೂ, ಇದೀಗ ನಾಸಾ ಹಾಗೂ ಎಲಾನ್‌ ಮಸ್ಕ್‌ರ ಜಂಟಿ ಪರಿಶ್ರಮ ಫಲ ಕೊಡುವ ನಿರೀಕ್ಷೆಯಿದೆ.

2025-03-16 11:32 GMT

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಭೂಮಿಗೆ ಕರೆತರುವ ಪ್ರಯತ್ನವಾಗಿ ಕ್ರೂ ಡ್ರಾಗನ್‌ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಡಾಕಿಂಗ್‌ ಪ್ರಕ್ರಿಯೆ ಇಂದು ಯಶಸ್ವಿಯಾಗಿದೆ.  

2025-03-16 11:31 GMT

ಸುನೀತಾ ಹಾಗೂ ವಿಲ್ಮೋರ್ ಅವರು ಭೂಮಿಗೆ ಮರಳುತ್ತಿದ್ದಂತೆಯೇ "ಶಿಶು ಪಾದ" (ಬೇಬಿ ಫೀಟ್) ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ ನಾಸಾದ ಮಾಜಿ ಗಗನಯಾತ್ರಿ ಲೆರಾಯ್ ಚಿಯಾವೊ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅವರು ಯಾವತ್ತೂ ಪಾದಗಳನ್ನು ನೆಲಕ್ಕೆ ಊರಿರುವುದಿಲ್ಲ. ಗುರುತ್ವ ಬಲ ಇಲ್ಲದ ಕಾರಣ ಅವರು ಅಲ್ಲಿ ಹಾರಾಡುತ್ತಲೇ ಸಂಚರಿಸಿರುತ್ತಾರೆ. ಹೀಗಾಗಿ, ಕಾಲಿನ ಚರ್ಮದ ದಪ್ಪನೆಯ ಭಾಗವು ಮೃದುವಾಗಿರುತ್ತದೆ.

ಅದು ಮೃದುವಾಗಿ ಬದಲಾಗಿರುತ್ತದೆ. ಹೀಗಾಗಿ ಅವರು ಬೇಬಿ ಫೀಟ್ ಸಮಸ್ಯೆ ಅನುಭವಿಸಬೇಕಾಗುತ್ತದೆ. ಅವರ ಪಾದಗಳು ಮಗುವಿನ ಪಾದದಂತೆ ಮೃದುವಾಗಿರುತ್ತದೆ. ಹೀಗಾಗಿ ಭೂಮಿಗೆ ಮರಳಿದ ತಕ್ಷಣ ಅಂಗಾಲಿನ ಮೇಲೆ ಒತ್ತಡ ಹಾಕಿ ನಿಲ್ಲುವುದಕ್ಕಾಗಲೀ, ನಡೆಯುವುದಕ್ಕಾಗಲೀ ಸಾಧ್ಯವಾಗದು. ವಿಶೇಷ ವ್ಯಾಯಾಮಗಳ ಮೂಲಕ ಅವರು ಮತ್ತೆ ಮೊದಲಿನ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದೂ ಚಿಯಾವೊ ತಿಳಿಸಿದ್ದಾರೆ. ಇದಲ್ಲದೆ, ತಲೆತಿರುಗುವಿಕೆ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳೂ ಅವರನ್ನು ಕಾಡುವ ಸಾಧ್ಯತೆಯಿದೆ ಎಂದಿದ್ದಾರೆ.

"ಸುನೀತಾ ಮತ್ತು ವಿಲ್ಮೋರ್ ಬಗ್ಗೆ ಯೋಚಿಸುವಾಗ ನನಗೇ ಜ್ವರ ಬಂದಂತೆ ಭಾಸವಾಗುತ್ತದೆ. ಅವರು ಸಾಮಾನ್ಯ ಸ್ಥಿತಿಗೆ ಮರಳಲು ಒಂದೆರಡು ವಾರಗಳೇ ಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

2025-03-16 11:22 GMT

ಧನ್ಯವಾದ ಹೇಳಿದ ಸುನೀತಾ 

ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಡಾಕಿಂಗ್​ ಮಾರ್ಚ್ 16ರಂದು ಬೆಳಿಗ್ಗೆ 11.05 ಕ್ಕೆ ಪ್ರಾರಂಭವಾಯಿತು ಮತ್ತು ಕ್ರ್ಯೂ 10 ಸದಸ್ಯರು ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದರು.

ವೀಡಿಯೊದಲ್ಲಿ ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ತೆರೆಯುವುದನ್ನು ಮತ್ತು ನಂತರ  ನೌಕೆಯ ಗಂಟೆ ಬಾರಿಸುವುದನ್ನು ಕಾಣಬಹುದು. ಹೊಸದಾಗಿ ಆಗಮಿಸಿದ ಗಗನಯಾತ್ರಿಗಳು  ತೇಲುತ್ತಿದ್ದರು ಮತ್ತು ಪರಸ್ಪರ ಅಪ್ಪಿಕೊಇ  ಅಪ್ಪುಗೆ ಮತ್ತು ಹಸ್ತಲಾಘವದೊಂದಿಗೆ ಸ್ವಾಗತಿಸಲಾಯಿತು. ಡಾಕಿಂಗ್ ಸಮಯದಲ್ಲಿ ಸುನೀತಾ ವಿಲಿಯಮ್ಸ್ ತನ್ನ ಸಿಬ್ಬಂದಿಯ ಫೋಟೋಗಳನ್ನು ತೆಗೆಯುವಾಗ ಮುಗುಳ್ನಕ್ಕರು.

"ಅದೊಂದು ಅದ್ಭುತ ದಿನ. ನಮ್ಮ ಸ್ನೇಹಿತರು ಬರುವುದನ್ನು ನೋಡಲು ಸಂತೋಷವಾಗಿದೆ" ಎಂದು ವಿಲಿಯಮ್ಸ್ ಮಿಷನ್ ಕಂಟ್ರೋಲ್​ಗೆ ತಿಳಿಸಿದ್ದಾರೆ.   

Tags:    

Similar News