ಧನ್ಯವಾದ ಹೇಳಿದ ಸುನೀತಾ ಸ್ಪೇಸ್ಎಕ್ಸ್ ಡ್ರ್ಯಾಗನ್... ... Sunita Williams : ಬಾಹ್ಯಾಕಾಶ ನಿಲ್ದಾಣ ಸೇರಿದ ನಾಸಾ ಕ್ರ್ಯೂ -10 , ಸುನಿತಾ ವಾಪಾಸ್​ಗೆ ಕ್ಷಣಗಣನೆ

ಧನ್ಯವಾದ ಹೇಳಿದ ಸುನೀತಾ 

ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಡಾಕಿಂಗ್​ ಮಾರ್ಚ್ 16ರಂದು ಬೆಳಿಗ್ಗೆ 11.05 ಕ್ಕೆ ಪ್ರಾರಂಭವಾಯಿತು ಮತ್ತು ಕ್ರ್ಯೂ 10 ಸದಸ್ಯರು ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದರು.

ವೀಡಿಯೊದಲ್ಲಿ ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ತೆರೆಯುವುದನ್ನು ಮತ್ತು ನಂತರ  ನೌಕೆಯ ಗಂಟೆ ಬಾರಿಸುವುದನ್ನು ಕಾಣಬಹುದು. ಹೊಸದಾಗಿ ಆಗಮಿಸಿದ ಗಗನಯಾತ್ರಿಗಳು  ತೇಲುತ್ತಿದ್ದರು ಮತ್ತು ಪರಸ್ಪರ ಅಪ್ಪಿಕೊಇ  ಅಪ್ಪುಗೆ ಮತ್ತು ಹಸ್ತಲಾಘವದೊಂದಿಗೆ ಸ್ವಾಗತಿಸಲಾಯಿತು. ಡಾಕಿಂಗ್ ಸಮಯದಲ್ಲಿ ಸುನೀತಾ ವಿಲಿಯಮ್ಸ್ ತನ್ನ ಸಿಬ್ಬಂದಿಯ ಫೋಟೋಗಳನ್ನು ತೆಗೆಯುವಾಗ ಮುಗುಳ್ನಕ್ಕರು.

"ಅದೊಂದು ಅದ್ಭುತ ದಿನ. ನಮ್ಮ ಸ್ನೇಹಿತರು ಬರುವುದನ್ನು ನೋಡಲು ಸಂತೋಷವಾಗಿದೆ" ಎಂದು ವಿಲಿಯಮ್ಸ್ ಮಿಷನ್ ಕಂಟ್ರೋಲ್​ಗೆ ತಿಳಿಸಿದ್ದಾರೆ.   

Update: 2025-03-16 11:22 GMT

Linked news