ಮತ್ತೆ ಬೆಳಗಾವಿ ಗಡಿ ವಿವಾದದ ಕಿಡಿ ಹಚ್ಚಿದ ಶಿವಸೇನೆ, ಎಂಇಎಸ್‌; ಕೆರಳಿದ ಕರ್ನಾಟಕ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ನೀಡಿರುವ ವಿವಾದಾತ್ಮಕ ಹೇಳಿಕೆ ಕರ್ನಾಟಕದ ಕೆಂಗಣ್ಣಿಗೆ ಗುರಿಯಾಗಿದೆ.;

Update: 2024-12-10 11:48 GMT

ಅತಿ ಹೆಚ್ಚು ಮರಾಠಿ ಭಾಷಿಕರಿರುವ ಕರ್ನಾಟಕದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ  ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ ಹೇಳಿಕೆ  ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಳಗಾವಿ ಅಧಿವೇಶನದ ದಿನವೇ ಮಹಾಮೇಳಾವ್​ ಆಯೋಜಿಸಲು ಯತ್ನಿಸಿರುವುದು ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ವಿವಾದದ ಕಿಡಿ ಹಚ್ಚಿದೆ. ಗಡಿ ವಿವಾದ ಕುರಿತಂತೆ ಶಿವಸೇನೆ ಹಾಗೂ ಎಂಇಎಸ್ ಮತ್ತೆ ತಗಾದೆ ಆರಂಭಿಸಿದ್ದು, ಬೆಳಗಾವಿಯನ್ನು ಕರ್ನಾಟಕದಿಂದ ಹೇಗಾದರೂ ಮಾಡಿ ಬೇರ್ಪಡಿಸಬೇಕೆಂಬ ಈ ವಾದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಗಡಿ ವಿವಾದ ಸಂಬಂಧ ಮಹಾಜನ್ ಆಯೋಗ ವರದಿ ನೀಡಿದೆ. ಅಲ್ಲದೇ ಗಡಿವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹೀಗಿರುವಾಗ ಮಹಾರಾಷ್ಟ್ರ ನಾಯಕರ ಅನಗತ್ಯ ಹೇಳಿಕೆಗಳು ಮತ್ತು ಮಹಾರಾಷ್ಟ್ರ ಪರ ಸಮಾವೇಶಗಳನ್ನು ನಡೆಸುವ ಯತ್ನಗಳು ಉದ್ವಿಗ್ನತೆಯ ಆತಂಕ ಮೂಡಿಸುತ್ತಿವೆ. ಹಾಗಾದರೆ ಏನಿದು ವಿವಾದ, ಆದಿತ್ಯ ಠಾಕ್ರೆ ಹೇಳಿದ್ದೇನು, ಸಿಎಂ ಸಿದ್ದರಾಮಯ್ಯ   ಆಕ್ರೋಶ ವ್ಯಕ್ತಪಡಿಸಿದ್ದು ಏಕೆ ಎಂಬುದು ಇಲ್ಲಿದೆ.

ಆದಿತ್ಯ ಠಾಕ್ರೆ ಹೇಳಿದ್ದೇನು?

ಅತಿ ಹೆಚ್ಚು ಮರಾಠಿ ಭಾಷಿಕರಿರುವ ಕರ್ನಾಟಕದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ ಹೇಳಿಕೆ ನೀಡಿದ್ದರು.

ಬೆಳಗಾವಿಯಲ್ಲಿ ಮರಾಠಿಗರಿಗೆ ಅನ್ಯಾಯವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಹೊಸ ಸರ್ಕಾರ, ಬೆಳಗಾವಿ ಗಡಿ ವಿವಾದದ ಕುರಿತು ಗಮನ ಹರಿಸಬೇಕು. ವಾರ್ಷಿಕವಾಗಿ ಆಯೋಜಿಸುವ ಮಹಾಮೇಳಾವ್‌ಗೆ ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿದೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಹೀಗಾಗಿ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಎರಡೂ ರಾಜ್ಯಗಳ ವಿವಾದಿತ ಜಿಲ್ಲೆಯಾದ ಬೆಳಗಾವಿಯನ್ನು ತಟಸ್ಥ ಅಥವಾ ಕೇಂದ್ರಾಡಳಿತವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದರು.

ಪುಂಡಾಟ ಮಾಡಿದರೆ ಸುಮ್ಮನಿರಲ್ಲ: ಸಿ.ಎಂ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂಬ ಆದಿತ್ಯ ಠಾಕ್ರೆ ಹೇಳಿಕೆ ಅತ್ಯಂತ ಬಾಲಿಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಮಹಾಜನ್ ವರದಿಯೇ ಅಂತಿಮ. ಮಹಾಜನ್ ವರದಿಯನ್ನು ಒಪ್ಪಿಕೊಂಡ ಮೇಲೆ ಮುಗಿಯಿತು. ಯಾರಾದ್ರೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಎಂಇಎಸ್ನವರು ಇದೇ ವಿಚಾರದಲ್ಲಿ ಪುಂಡಾಟಿಕೆ ಮಾಡಿದರೆ ಸರ್ಕಾರ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹೇಳಿಕೆ ಹಿಂಪಡೆಯದಿದ್ದರೆ ತಕ್ಕ ಪಾಠ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂಬ ಶಿವಸೇನೆ( ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಹೇಳಿಕೆಗೆ ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಆದಿತ್ಯ ಠಾಕ್ರೆ ಹೇಳಿಕೆ ಹಾಸ್ಯಾಸ್ಪದ. ಎಂಇಎಸ್ ಪುಂಡಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಮಹಾಜನ್ ವರದಿಯೇ ಅಂತಿಮ. ಎಂದಿಗೂ ಬೆಳಗಾವಿ ಕರ್ನಾಟಕದ ಭಾಗವೇ ಆಗಿದೆ. ಆದಿತ್ಯ ಠಾಕ್ರೆ ಅವರದ್ದು ಉದ್ದಟತನ, ಶಾಂತಿ ಕದಡುವ ಹೇಳಿಕೆಯಾಗಿದೆ. ಶಿವಸೇನೆ ನಾಯಕರು ಮೊದಲಿನಿಂದಲೂ ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಮಧ್ಯೆ ದ್ವೇಷ ಬಿತ್ತುತ್ತಿದೆ ಎಂದು ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಆರೋಪಿಸಿದ್ದಾರೆ.

ಮಹಾಮೇಳವಾಗೆ ತಡೆ ನೀಡಿದ ಜಿಲ್ಲಾಡಳಿತ

ಮರಾಠ ಮಹಾಮೇಳವ ನಡೆಸಲು ಸಿದ್ಧತೆ ನಡೆಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಯತ್ನಕ್ಕೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ಅನುಮತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಪಟ್ಟಣ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರನ್ನು ಕೆಣಕಿದ್ದರು.

ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ 50ಕ್ಕೂ ಅಧಿಕ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪದ ಕೊಗನೊಳ್ಳಿ ಚೆಕ್ ಪೋಸ್‌ನಲ್ಲಿ ಕೊಲ್ಹಾಪುರದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕಾರ್ಯಕರ್ತರನ್ನು ನಿಪ್ಪಾಣಿ ಪೋಲಿಸರು ತಡೆದು ವಾಪಸ್‌ ಕಳುಹಿಸಿದ್ದರು.

ಏನಿದು ಗಡಿ ವಿವಾದ?

ಬೆಳಗಾವಿ ಗಡಿ ವಿವಾದ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಭೂಭಾಗ ಹಂಚಿಕೆಯ ವ್ಯಾಜ್ಯವಾಗಿದೆ. ಈ ಹಿಂದೆ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯನ್ನು 1956 ರಲ್ಲಿನ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ವಯ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಇದರಿಂದ ಬಹುಪಾಲು ಮರಾಠಿ ಭಾಷಿಕರ ಪ್ರಾಂತ್ಯಗಳು ಕರ್ನಾಟಕದಲ್ಲೇ ಉಳಿದವು. ಅಂತೆಯೇ ಕನ್ನಡ ಭಾಷಿಕ ಪ್ರದೇಶಗಳು ಮಹಾರಾಷ್ಟ್ರದಲ್ಲಿ ಉಳಿಯುವಂತಾಯಿತು. 1957 ರಲ್ಲಿ ಮಹಾರಾಷ್ಟ್ರ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಕರ್ನಾಟಕ-ಮಹಾರಾಷ್ಟ್ರದ ನಡುವೆ ಉಲ್ಬಣಿಸಿದ್ದ ಗಡಿ ವಿವಾದ ಬಗೆಹರಿಸಲು 1960 ರಲ್ಲಿ ಮಹಾಜನ್ ಆಯೋಗ ರಚಿಸಿತ್ತು.

 ಮಹಾಜನ್ ವರದಿ ಹೇಳುವುದೇನು?

ಮಹಾರಾಷ್ಟ್ರ-ಕರ್ನಾಟಕ ನಡುವಿನ ಗಡಿ ವಿವಾದ ಇತ್ಯರ್ಥಕ್ಕಾಗಿ 1966 ರಲ್ಲಿ ಕೇಂದ್ರ ಸರ್ಕಾರ ಮಹಾಜನ್ ಆಯೋಗ ರಚಿಸಿತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ನಡುವಿನ ಗಡಿ ವಿವಾದದ ಕುರಿತು ಅಧ್ಯಯನ ನಡೆಸಿದ ಆಯೋಗ 1967 ರಲ್ಲಿ ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿತ್ತು. ವರದಿಯಿಂದ ಅನುಕೂಲ ಆಗುವುದಿಲ್ಲ ಎಂದು ತಿಳಿದ ಮಹಾರಾಷ್ಟ್ರ ಸರ್ಕಾರ, ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿತ್ತು.

ವರದಿಯಲ್ಲಿ ದಕ್ಷಿಣ ಸೊಲ್ಲಾಪುರದ 65 ಹಳ್ಳಿ, ಅಕ್ಕಲಕೋಟೆ ತಾಲೂಕು, ಜತ್ತ ತಾಲೂಕಿನ 44 ಹಳ್ಳಿ, ಗಡಹಿಂಗ್ಲಜ ತಾಲೂಕಿನ 15 ಹಳ್ಳಿ, ಕೇರಳದ ಚಂದ್ರಗಿರಿ ನದಿಯ ಉತ್ತರಭಾಗ (ಕಾಸರಗೋಡು ಸೇರಿ) ಕರ್ನಾಟಕಕ್ಕೆ ಸೇರಬೇಕು ಎಂದು ಹೇಳಿತ್ತು.

ಅದೇ ರೀತಿ ಬೆಳಗಾವಿ ತಾಲೂಕಿನ 62 ಹಳ್ಳಿ, ಖಾನಾಪುರ ತಾಲೂಕಿನ 152 ಹಳ್ಳಿ, ಚಿಕ್ಕೋಡಿಯ ನಿಪ್ಪಾಣಿ ಸೇರಿ 41 ಹಳ್ಳಿ, ಹುಕ್ಕೇರಿ ತಾಲೂಕಿನ 9 ಹಳ್ಳಿ, ನಂದಗಢ, ರಕ್ಕಸಕೊಪ್ಪ ಜಲಾಶಯ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ವರದಿಯಲ್ಲಿ ತಿಳಿಸಿತ್ತು. ಆದರೆ, ವರದಿ ತನಗೆ ಅನುಕೂಲಕರವಾಗಿಲ್ಲ ಎಂದು ತಿಳಿದು ಗಡಿವಿವಾದವನ್ನು ಸುಪ್ರೀಂಕೋರ್ಟ್ ಅಂಗಳಕ್ಕೆ ಕೊಂಡೊಯ್ದಿತ್ತು.

ಕರ್ನಾಟಕದ ಪ್ರತಿಪಾದನೆ ಏನು?

ಮಹಾಜನ್ ವರದಿ ತಿರಸ್ಕರಿಸಿದಲ್ಲದೇ 1956ರ ರಾಜ್ಯ ಪುನರ್ವಿಂಗಡಣಾ ಕಾನೂನನ್ನೇ ಪ್ರಶ್ನಿಸಿ 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ, ಮಹಾಜನ್ ವರದಿಯನ್ನು 1970ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆ ಬಳಿಕ ವರದಿ ಜಾರಿ ವಿಳಂಬವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಸಭೆಯೇ ಆಯೋಗ ರಚಿಸಿದೆ. ಹಾಗಾಗಿ ವರದಿ ಕುರಿತು ಲೋಕಸಭೆಯೇ ತೀರ್ಮಾನಿಸಬೇಕು. ಗಡಿ ವಿವಾದ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕರ್ನಾಟಕ ಪ್ರತಿಪಾದಿಸಿತ್ತು.

ಮಹಾರಾಷ್ಟ್ರದ ವಾದವೇನು?

ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಸೇರಿದಂತೆ ಗಡಿಯಲ್ಲಿರುವ 814 ಗ್ರಾಮಗಳು ತನಗೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದ. ಆದರೆ, ಇದಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ.

ಅತಿ ಹೆಚ್ಚು ಮರಾಠಿ ಭಾಷಿಕರಿರುವ ಕರ್ನಾಟಕದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ ಹೇಳಿಕೆ ನೀಡಿದ್ದರು.

ಬೆಳಗಾವಿಯಲ್ಲಿ ಮರಾಠಿಗರಿಗೆ ಅನ್ಯಾಯವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಹೊಸ ಸರ್ಕಾರ, ಬೆಳಗಾವಿ ಗಡಿ ವಿವಾದದ ಕುರಿತು ಗಮನ ಹರಿಸಬೇಕು. ವಾರ್ಷಿಕವಾಗಿ ಆಯೋಜಿಸುವ ಮಹಾಮೇಳಾವ್‌ಗೆ ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿದೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಹೀಗಾಗಿ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಎರಡೂ ರಾಜ್ಯಗಳ ವಿವಾದಿತ ಜಿಲ್ಲೆಯಾದ ಬೆಳಗಾವಿಯನ್ನು ತಟಸ್ಥ ಅಥವಾ ಕೇಂದ್ರಾಡಳಿತವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದರು.

ಪುಂಡಾಟ ಮಾಡಿದರೆ ಸುಮ್ಮನಿರಲ್ಲ: ಸಿ.ಎಂ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂಬ ಆದಿತ್ಯ ಠಾಕ್ರೆ ಹೇಳಿಕೆ ಅತ್ಯಂತ ಬಾಲಿಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಮಹಾಜನ್ ವರದಿಯೇ ಅಂತಿಮ. ಮಹಾಜನ್ ವರದಿಯನ್ನು ಒಪ್ಪಿಕೊಂಡ ಮೇಲೆ ಮುಗಿಯಿತು. ಯಾರಾದ್ರೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಎಂಇಎಸ್ನವರು ಇದೇ ವಿಚಾರದಲ್ಲಿ ಪುಂಡಾಟಿಕೆ ಮಾಡಿದರೆ ಸರ್ಕಾರ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹೇಳಿಕೆ ಹಿಂಪಡೆಯದಿದ್ದರೆ ತಕ್ಕ ಪಾಠ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂಬ ಶಿವಸೇನೆ( ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಹೇಳಿಕೆಗೆ ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಆದಿತ್ಯ ಠಾಕ್ರೆ ಹೇಳಿಕೆ ಹಾಸ್ಯಾಸ್ಪದ. ಎಂಇಎಸ್ ಪುಂಡಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಮಹಾಜನ್ ವರದಿಯೇ ಅಂತಿಮ. ಎಂದಿಗೂ ಬೆಳಗಾವಿ ಕರ್ನಾಟಕದ ಭಾಗವೇ ಆಗಿದೆ. ಆದಿತ್ಯ ಠಾಕ್ರೆ ಅವರದ್ದು ಉದ್ದಟತನ, ಶಾಂತಿ ಕದಡುವ ಹೇಳಿಕೆಯಾಗಿದೆ. ಶಿವಸೇನೆ ನಾಯಕರು ಮೊದಲಿನಿಂದಲೂ ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಮಧ್ಯೆ ದ್ವೇಷ ಬಿತ್ತುತ್ತಿದೆ ಎಂದು ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಆರೋಪಿಸಿದ್ದಾರೆ.

Tags:    

Similar News