ಬಹಿಷ್ಕಾರ ಆರೋಪ | ಮಾಹಿತಿ ಪಡೆಯಲು ಬಂದ ಪೊಲೀಸರ ಎದುರೇ ಮಹಿಳೆ ಅಸಭ್ಯ ವರ್ತನೆ

ಪೊಲೀಸರೊಂದಿಗೆ ಮಾತನಾಡುವಾಗಲೇ ಮೊಬೈಲ್‌ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ರತ್ನಮ್ಮ ಪೊಲೀಸರ ವಿರುದ್ಧ ಕೂಗಾಡಿದ್ದು, ಅಸಭ್ಯವಾಗಿ ವರ್ತಿಸಿದ್ದಾರೆ.;

Update: 2025-08-01 08:50 GMT

ಪೊಲೀಸರೊಂದಿಗ ವಾಗ್ವಾದ ನಡೆಸಿದ ಮಹಿಳೆ

ಬಹಿಷ್ಕಾರ ಕುರಿತಂತೆ ಮಾಹಿತಿ ಸಂಗ್ರಹಕ್ಕಾಗಿ ಬಂದಿದ್ದ ಪೊಲೀಸರ ಎದುರೇ ಮಹಿಳೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ನಡೆದಿದೆ.

ರತ್ನಮ್ಮ ಎಂಬುವರು ಎರಡು ದಿನಗಳ ಹಿಂದೆ ಮೈಸೂರು ಜಿಲ್ಲಾ ಪರ್ತಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಶಿರಮಳ್ಳಿ ಗ್ರಾಮಸ್ಥರು ನಮಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಎಸ್ಪಿ ಕಚೇರಿಗೂ ದೂರು ಸಲ್ಲಿಸಿದ್ದರು. ಆರೋಪ ಕುರಿತಂತೆ ಶುಕ್ರವಾರ ಬೆಳಿಗ್ಗೆ ಹುಲ್ಲಹಳ್ಳಿ ಪೊಲೀಸರು ಮಾಹಿತಿ ಪಡೆಯಲು ಮನೆಯ ಬಳಿ ಹೋಗಿದ್ದಾಗ ಅಸಭ್ಯವಾಗಿ ವರ್ತಿಸಿದ್ದಾರೆ. 

ಪೊಲೀಸರೊಂದಿಗೆ ಮಾತನಾಡುವಾಗಲೇ ಮೊಬೈಲ್‌ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ರತ್ನಮ್ಮ ತಮ್ಮ ಸೀರೆಯನ್ನು ತಾವೇ ಬಿಚ್ಚಿ ಪೊಲೀಸರ ವಿರುದ್ಧ ಕೂಗಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದು, ಇದು ವೈರಲ್‌ ಆಗಿದೆ. ರತ್ನಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರೊಂದಿಗೂ ಇದೇ ರೀತಿ ವರ್ತನೆ ಮಾಡುತ್ತಿದ್ದರು. ಈಗ ಬಹಿಷ್ಕಾರ ನಾಟಕವಾಡುತ್ತಿದ್ದಾರೆ. ಇದರ ಬಗ್ಗೆ ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Tags:    

Similar News