ಚಾಮರಾಜನಗರ: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ; ವೃದ್ಧರು ಸೇರಿ 7 ಮಂದಿಗೆ ಗಾಯ
ಪಟ್ಟಣದ ಕೆನರಾ ಬ್ಯಾಂಕ್ ಸಮೀಪ ಬಸ್‌ಗಾಗಿ ಕಾಯುತ್ತಾ ನಿಂತಿದ್ದವರು ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ನಾಯಿ ಏಕಾಏಕಿ ಎರಗಿದೆ. ಕಂಡ ಕಂಡವರ ಮೇಲೆ ದಾಳಿ ಮಾಡಿದೆ.
ಹುಚ್ಚುನಾಯಿ ದಾಳಿಗೆ ಒಳಗಾದ ಮಹಿಳೆಯರು.
ಹುಚ್ಚುನಾಯಿಯೊಂದು ಏಕಾಏಕಿ ಪಾದಚಾರಿಗಳ ಮೇಲೆ ದಾಳಿ ನಡೆಸಿ, ವೃದ್ಧರು ಸೇರಿದಂತೆ ಸುಮಾರು ಏಳು ಮಂದಿಯನ್ನು ಗಾಯಗೊಳಿಸಿದ ಘಟನೆ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಭಾನುವಾರ (ಡಿ.7) ನಡೆದಿದೆ.
ಪಟ್ಟಣದ ಕೆನರಾ ಬ್ಯಾಂಕ್ ಸಮೀಪ ಬಸ್‌ಗಾಗಿ ಕಾಯುತ್ತಾ ನಿಂತಿದ್ದವರು ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ನಾಯಿ ಏಕಾಏಕಿ ಎರಗಿದೆ. ಕಂಡ ಕಂಡವರ ಮೇಲೆ ದಾಳಿ ಮಾಡಿ ಪರಾರಿಯಾಗಿದೆ. ನಾಯಿಯ ಕಡಿತದಿಂದ ಯಳಂದೂರು ಪಟ್ಟಣದ ಚೌಡಮ್ಮ, ವೈ.ಕೆ.ಮೋಳೆ ಗ್ರಾಮದ ಲಕ್ಷ್ಮಮ್ಮ ಮತ್ತು ಕೆ.ದೇವರಹಳ್ಳಿ ಗ್ರಾಮದ ರತ್ನಮ್ಮ ಸೇರಿದಂತೆ ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಹೆಚ್ಚಿನವರು ವೃದ್ಧರಾಗಿದ್ದು, ನಾಯಿ ಕೈ-ಕಾಲುಗಳಿಗೆ ಕಚ್ಚಿ, ಪರಚಿ ಗಾಯಗೊಳಿಸಿದೆ. ಗಾಯಾಳುಗಳಿಗೆ ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.