ರಾಜ್ಯದಲ್ಲಿ ಮೂತ್ರಪಿಂಡಕ್ಕಾಗಿ ಕಾಯುತ್ತಿದ್ದಾರೆ ಆರು ಸಾವಿರ ಮಂದಿ!

ರಾಜ್ಯದಲ್ಲಿ ಕಿಡ್ನಿ, ಲಿವರ್‌, ಹೃದಯ, ಶ್ವಾಸಕೋಶಕ್ಕಾಗಿ ಕಾದಿರುವ ರೋಗಿಗಳ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದೆ. ಆದರೆ ಅಂಗಾಂಗ ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ.

Update: 2024-03-01 13:57 GMT
ಅಂಗಾಂಗ ದಾನ ಮಾಡಿದ ಕುಟುಂಬಸ್ಥರನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ | ಫೋಟೊ : facebook/dineshgunduraoofficial

ರಾಜ್ಯದಲ್ಲಿ ಸುಮಾರು ಆರು ಸಾವಿರ ಮಂದಿ ಮೂತ್ರಪಿಂಡ(ಕಿಡ್ನಿ)ಗಳಿಗಾಗಿ ಕಾಯುತ್ತಿದ್ದು, ಯಕೃತ್‌(ಲಿವರ್) ಗಾಗಿ ಎರಡು ಸಾವಿರಕ್ಕೂ ಅಧಿಕ ರೋಗಿಗಳು ಕಾಯುತ್ತಿದ್ದಾರೆ. ಈ ಸಂಗತಿ ರಾಜ್ಯದಲ್ಲಿ ಮಾನವ ಅಂಗಾಂಗಗಳಿಗೆ ಇರುವ ಬೇಡಿಕೆಯ ಪ್ರಮಾಣ ಎಷ್ಟು ಎಂಬುದನ್ನು ಸಾರಿ ಹೇಳುತ್ತಿದೆ.‌ ಆದರೆ, ಅಗತ್ಯ ಪ್ರಮಾಣದಲ್ಲಿ ಅಂಗಾಂಗಗಳು ಲಭ್ಯವಿಲ್ಲದೆ ರೋಗಿಗಳ ಬದುಕಿನ ಭರವಸೆ

ರಾಜ್ಯ ಸರ್ಕಾರ ಅಧಿಕೃತವಾಗಿ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಒಟ್ಟು 5942 ಮೂತ್ರಪಿಂಡಗಳಿಗಾಗಿ ಕಾಯುತ್ತಿರುವ ರೋಗಿಗಳಿದ್ದು, ಲಿವರ್ ದಾನಕ್ಕಾಗಿ 2,043 ಮಂದಿ ಕಾಯುತ್ತಿದ್ದಾರೆ. ಹೃದಯಕ್ಕೆ 187 ಮಂದಿ ಹಾಗೂ ಶ್ವಾಸಕೋಶಗಳಿಗೆ 79 ಮಂದಿ ಕಾಯುತ್ತಿದ್ದಾರೆ. ಹೃದಯ ಮತ್ತು ಶ್ವಾಸಕೋಶ ಎರಡಕ್ಕೂ ಕಾಯುತ್ತಿರುವ ರೋಗಿಗಳ ಸಂಖ್ಯೆ 30 ಇದೆ.

ಲಿವರ್ ಹಾಗೂ ಕಿಡ್ನಿ ಎರಡೂ ಅಂಗಾಂಗಳಿಗಾಗಿ 61 ರೋಗಿಗಳು ಕಾಯುತ್ತಿದ್ದರೆ, ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿಗಾಗಿ 29, ಹೃದಯ ಮತ್ತು ಕಿಡ್ನಿಗಾಗಿ ಎರಡು ಮತ್ತು ಸಣ್ಣ ಕರುಳುಗಾಗಿ ಓರ್ವ ರೋಗಿ ಕಾಯುತ್ತಿದ್ದಾರೆ.


ಅಂಗಾಂಗ ದಾನ ಅರಿವು

ಈ ಬೇಡಿಕೆಯ ಹಿನ್ನೆಲೆಯಲ್ಲಿ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸಾರ್ವಜನಿಕರಲ್ಲಿ ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ಪ್ರಯತ್ನಗಳನ್ನು ನಡೆಸುತ್ತಿದೆ. 2023ರ ಸೆ.5 ರಿಂದ 2024 ರ ಫೆ.27 ರವರೆಗೆ ಒಟ್ಟು 20,029 ಮಂದಿ ಅಂಗಾಗ ದಾನ ಪ್ರತಿಜ್ಞೆ ಮಾಡಿದ್ದು, ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ. ಅಂಗಾಂಗ ದಾನ ಮಾಡಲು ಮುಂದೆ ಬಂದವರಲ್ಲಿ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚಿದ್ದು, ಒಟ್ಟು 11,527 ಮಂದಿ ಮಹಿಳೆಯರು ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ.

ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡುವ ಮೂಲಕ ಓರ್ವ ಅಂಗಾಂಗ ದಾನಿಯು ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅದೇ ವೇಳೆ, ಅಂಗಾಂಶ ದಾನದ ಮೂಲಕ 50 ಕ್ಕೂ ಅಧಿಕ ಜನರ ಜೀವವನ್ನು ಉಳಿಸಬಹುದು. ಹಾಗಾಗಿ, ಅಂಗಾಂಗ ದಾನ ಮತ್ತು ಕಸಿ ಮಾಡುವಿಕೆಗೆ ಸಂಬಂಧಿಸಿದಂತೆ ಇರುವ ಮೂಢನಂಬಿಕೆ ಹಾಗೂ ತಪ್ಪು ಕಲ್ಪನೆಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಅಂಗಾಂಗಗಳಿಗೆ ರಾಜ್ಯದಲ್ಲಿ ಇರುವ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಸಮಾನತೆಯನ್ನು ತಗ್ಗಿಸಲು ಅಂಗಾಂಗ-ಅಂಗಾಂಶ ದಾನದ ಕುರಿತಂತೆ ಅರಿವು ಮೂಡಿಸಲು ರಾಜ್ಯ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದರಂತೆ ಶುಕ್ರವಾರ ಬೆಂಗಳೂರಿನಲ್ಲಿ ಅಂಗಾಂಗ ದಾನ ಮಾಡಿದ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದ್ದಾರೆ.

Tags:    

Similar News