ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಶೇ.35ರಷ್ಟು ಉತ್ತೀರ್ಣ

ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಮಂಗಳವಾರ (ಮೇ 21) ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆ ಫಲಿತಾಂಶ 35.25% ಬಂದಿದೆ.

Update: 2024-05-21 11:00 GMT
ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದೆ.
Click the Play button to listen to article

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಮಂಗಳವಾರ (ಮೇ 21) ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆ ಫಲಿತಾಂಶ 35.25% ಬಂದಿದೆ.

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆದರೆ ಮೊದಲ ಹಂತದಲ್ಲಿ ಅನುತ್ತೀರ್ಣರಾದವರಿಗಾಗಿ ಎರಡನೇ ಬಾರಿಗೆ ರಾಜ್ಯಾದ್ಯಂತ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ಏ. 29 ರಿಂದ ಮೇ 16ರವರೆಗೆ ಪರೀಕ್ಷೆಗಳು ನಡೆದಿದ್ದವು. 1,49,824 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಆದರೆ, ಪರೀಕ್ಷೆಗೆ ಹಾಜರಾಗಿದ್ದ 1,48,942 ವಿದ್ಯಾರ್ಥಿಗಳ ಪೈಕಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 52,505 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಾಲಕರು 26,496 (31.31%) ಮತ್ತು 26,009 (40.44%) ಬಾಲಕಿಯರು ಪಾಸ್ ಆಗಿದ್ದಾರೆ.

ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್‌ karresults.nic.in ನಲ್ಲಿ ನೋಡಬಹುದಾಗಿದೆ.

ರಿಸಲ್ಟ್ ಚೆಕ್ ಮಾಡುವುದು ಹೇಗೆ?

  • karresults.nic.in ನಲ್ಲಿ ಕರ್ನಾಟಕ ಫಲಿತಾಂಶ ಪೋರ್ಟಲ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೀಡಲಾದ ಪಿಯುಸಿ 2 ಪರೀಕ್ಷೆಯ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಲಾಗಿನ್ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆಯನ್ನು ಹಾಕಿ, ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ ಅನ್ನು ಆಯ್ಕೆ ಮಾಡಿ (ವಿಜ್ಞಾನ/ಕಲೆ/ವಾಣಿಜ್ಯ) ಕ್ಲಿಕ್ ಮಾಡಿದಾಗ ನಿಮಗೆ ಫಲಿತಾಂಶವು ಸ್ಕ್ರೀನ್​​ ಮೇಲೆ ಕಾಣಿಸುತ್ತದೆ.
  • ಬಳಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಇನ್ನೂ ಪರೀಕ್ಷೆ 1 ಮತ್ತು ಪರೀಕ್ಷೆ 2ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಪಿಯುಸಿ ಪರೀಕ್ಷೆಗಳನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ರೋಲ್ ನಂಬರ್ ಆಧರಿಸಿ ತಮ್ಮ ಫಲಿತಾಂಶಗಳನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

ಪರೀಕ್ಷೆ-3ಗೆ ವೇಳಾಪಟ್ಟಿ ಪ್ರಕಟ

ಪರೀಕ್ಷೆ-3ಗೆ ಪರೀಕ್ಷಾ ಶುಲ್ಕ ಪಾವತಿಗೆ ಕೊನೆ ದಿನ (ದಂಡ ರಹಿತ) ಮೇ 23 ರಿಂದ ಮೇ 28 ಹಾಗೂ ದಂಡ ಸಹಿತ ಮೇ 29 ರಿಂದ ಮೇ 30 ಆಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ 3ಕ್ಕೆ ವೇಳಾಪಟ್ಟಿ ಪ್ರಕಟ ಮಾಡಿದ್ದು, ಜೂನ್ 26 ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ 5,52,690 ವಿದ್ಯಾರ್ಥಿಗಳು ಪಾಸ್ ಆಗಿ 81.15% ಫಲಿತಾಂಶ ಬಂದಿತ್ತು.

Tags:    

Similar News