RCB VS KKR | ಮಳೆಯಿಂದ ರದ್ದಾದ ಆರ್ ಸಿಬಿ - ಕೆಕೆಆರ್ ಪಂದ್ಯ; ಪ್ಲೇ ಆಪ್ ನಿಂದ ಕೆಕೆಆರ್ ಹೊರಕ್ಕೆ
ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ನಂತರ ಮಳೆ ರಭಸವಾಗಿ ಸುರಿಯಿತು. ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಗೆ ಪಂದ್ಯ ಅಹುತಿಯಾಯಿತು.;
ರಭಸದ ಮಳೆಯಿಂದಾಗಿ ಶನಿವಾರ ನಡೆಯಬೇಕಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಐಪಿಎಲ್ ಪಂದ್ಯ ರದ್ದುಗೊಂಡಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ನಂತರ ಮಳೆ ರಭಸವಾಗಿ ಸುರಿಯಿತು. ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಗೆ ಪಂದ್ಯ ಅಹುತಿಯಾಯಿತು. ಅಂತಿಮವಾಗಿ ಪಂದ್ಯವನ್ನು ರದ್ದುಪಡಿಸಿ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು.
12 ಪಂದ್ಯಗಳಿಂದ ಒಟ್ಟು 17 ಅಂಕ ಸಂಪಾದಿಸಿರುವ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಪ್ಲೇ ಆಪ್ ಸನಿಹದಲ್ಲಿದೆ.
ಕೆಕೆಆರ್ ತಂಡ 13 ಪಂದ್ಯಗಳಿಂದ ಒಟ್ಟು 12 ಅಂಕ ಮಾತ್ರ ಗಳಿಸಿದ್ದು, ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. ಆರನೇ ಸ್ಥಾನದಲ್ಲಿರುವ ಕೆಕೆಆರ್ ಬಳಿ ಇನ್ನೊಂದು ಪಂದ್ಯ ಮಾತ್ರ ಬಾಕಿಯಿದೆ.
ಭಾರತ ಹಾಗೂ ಪಾಕಿಸ್ತಾನ ಸಂಘರ್ಷದಿಂದಾಗಿ ಐಪಿಎಲ್ ಪಂದ್ಯಗಳನ್ನು ಒಂದು ವಾರದ ಕಾಲ ಮುಂದೂಡಲಾಗಿತ್ತು. ಇದೀಗ ಪಂದ್ಯಗಳು ಆರಂಭವಾಗಿದ್ದು, ಮೊದಲ ಪಂದ್ಯವೇ ಮಳೆಯಿಂದ ರದ್ದಾಗಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ವಿರಾಟ್ ಕೊಯ್ಲಿಗೆ ಅಭಿಮಾನಿಗಳಿಂದ ವಿದಾಯ
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಅವರನ್ನು ಮೈದಾನದಲ್ಲಿ ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಮಳೆಯಿಂದಾಗಿ ಅಭಿಮಾನಿಗಳ ಆಸೆ ಕೈಗೂಡಲಿಲ್ಲ. ಆದರೂ ವಿರಾಟ್ ಕೊಹ್ಲಿ ಅವರ ಬಿಳಿ ಸಮವಸ್ತ್ರ ಧರಿಸಿ ಅಭಿಮಾನಿಗಳು ಗೌರವ ಸೂಚಿಸಿದರು.