Puc Results | ಪಿಯುಸಿ, ಎಸ್ಎಸ್‌ಎಲ್‌ಸಿಯಲ್ಲಿ ಸಮಾನ ಅಂಕ ಪಡೆದ ಅವಳಿ ಸೋದರಿಯರು!

ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಹಾಸನದ ಚುಕ್ಕಿ ಚಂದ್ರ ಮತ್ತು ಇಬ್ಬನಿ ಚಂದ್ರ ಎಂಬ ಅವಳಿ ವಿದ್ಯಾರ್ಥಿನಿಯರಿಗೆ ಸಮಾನ ಅಂಕ ಬಂದಿದೆ. ಅಚ್ಚರಿಯ ಸಂಗತಿ ಎಂದರೆ ಈ ಸಹೋದರಿಯರು ಈ ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಸಮಾನ ಅಂಕ ಪಡೆದಿದ್ದರು!;

Update: 2024-04-11 08:35 GMT
ಅವಳಿ - ಜವಳಿ ಮಕ್ಕಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಂದೇ ತೆರೆನಾದ ಅಂಕ
Click the Play button to listen to article

ಬುಧವಾರ ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನ ಸೆಳೆದಿರುವುದು ಹಾಸನದ ಚುಕ್ಕಿ ಚಂದ್ರ ಮತ್ತು ಇಬ್ಬನಿ ಚಂದ್ರ ಎಂಬ ಅವಳಿ ವಿದ್ಯಾರ್ಥಿನಿಯರು ಪಡೆದಿರುವ ಅಂಕ.  ಇಬ್ಬರೂ ಸಹೋದರಿಯ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದಾರೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಈ ಅವಳಿ ಸಹೋದರಿಯರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲೂ ಸೇಮ್ ಟು ಸೇಮ್ ಅಂಕ ಗಳಿಸಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಉಪ ನಿರ್ದೇಶಕ ವಿನೋದ್ ಚಂದ್ರ ಅವರ ಅವಳಿ ಪುತ್ರಿಯರಾಗಿರುವ ಈ ಸಹೋದರಿಯರು ದ್ವಿತೀಯ ಪಿಯುಸಿಯಲ್ಲಿಯೂ ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಅವಳಿ ಸಹೋದರಿಯರಾದ ಚುಕ್ಕಿ ಚಂದ್ರ ಹಾಗೂ ಇಬ್ಬನಿ ಚಂದ್ರ ಇಬ್ಬರೂ ಬುಧವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ 571 (ಶೇ 95.17%) ಗಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲೂ ಇಬ್ಬರೂ ಸಮಾನವಾಗಿ 620 ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದರು(99.20% ) ಅಲ್ಲದೇ ಶಾಲಾ ಶಿಕ್ಷಣದಲ್ಲಿಯೂ ಅವರ ಅಂಕಗಳು ಬಹುತೇಕ ಒಂದೇ ಆಗಿರುತ್ತಿದ್ದವು.

ತಮ್ಮ ಪುತ್ರಿಯರ ಸಾಧನೆಯನ್ನು ತಂದೆ ವಿನೋದ್ ಚಂದ್ರ ಫೇಸ್ ಬುಕ್ ನಲ್ಲಿ ಬರೆದು ಕೊಂಡಾಡಿದ್ದಾರೆ. ಆ ದೇವರಿಗೇಕೋ ಇಬ್ಬರಿಗೂ ಬೇಸರ ಮಾಡುವ ಮನಸಿದ್ದಂತಿಲ್ಲ ಎಂದು ಬರೆದು ಮಕ್ಕಳ ಅಂಕಪಟ್ಟಿ ಶೇರ್ ಮಾಡಿದ್ದಾರೆ.

Tags:    

Similar News