ಆಳಂದ‌ ಮತಗಳ್ಳತನ ಪ್ರಕರಣ: ಮಾಜಿ‌ ಶಾಸಕ‌ ಸುಭಾಷ್ ಗುತ್ತೇದಾರ್ ಗೆ ನಿರೀಕ್ಷಣಾ ಜಾಮೀನು ಮಂಜೂರು

2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಐಟಿ ಅಧಿಕಾರಿಗಳ ತಂಡ ಸುಭಾಷ್ ಗುತ್ತೇದಾರ್‌ ಒಡೆತನದ ಮೂರು ಕಡೆಗಳಲ್ಲಿ ದಾಳಿ ಮಾಡಿತ್ತು.

Update: 2025-10-31 16:36 GMT

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಐಟಿ ಅಧಿಕಾರಿಗಳ ತಂಡ ಸುಭಾಷ್ ಗುತ್ತೇದಾರ್‌ ಒಡೆತನದ ಮೂರು ಕಡೆಗಳಲ್ಲಿ ದಾಳಿ ಮಾಡಿತ್ತು. ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದ ಬೆನ್ನಲ್ಲೇ ಸುಭಾಷ್‌ ಗುತ್ತೇದಾರ್‌ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಬಂಧನ ಭೀತಿಯಲ್ಲಿದ್ದ ಸುಭಾಷ್‌ ಗುತ್ತೇದಾರ್‌ಗೆ ಇದೀಗ ಜಾಮೀನು ಸಿಕ್ಕಿರುವುದರಿಂದ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ್‌ ಗುತ್ತೇದಾರ್‌ ನಿವಾಸದ ಮೇಲೆ ಎಸ್‌ಐಟಿ ತಂಡವು ಇತ್ತೀಚೆಗೆ ದಾಳಿ ಮಾಡಿ ಪರಿಶೀಲನೆ ಮಾಡಿತ್ತು. ಈ ಸಂಬಂಧ ಅಮರ್ಜಾ ನದಿಯ ಹಿನ್ನೀರಿನಲ್ಲಿ ಅರ್ಧಂಬರ್ಧ ಸುಟ್ಟ ದಾಖಲೆಗಳು ಕಂಡು ಬಂದಿತ್ತು ಎನ್ನಲಾಗಿದೆ. ಆದರೆ, ಯಾವ ಮತಗಳ್ಳತನವೂ ನಡೆದಿಲ್ಲ ಎಂದು ಸುಭಾಷ್ ಗುತ್ತೇದಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

Tags:    

Similar News