ಅದ್ದೂರಿ ಮದುವೆಯ ಹಪಹಪಿ- ಇಲ್ಲದಿದ್ದರೂ ಹಣ! ಸರ್ಕಾರೀ 'ಮಾಂಗಲ್ಯ ಭಾಗ್ಯʼಕ್ಕೆ ಗ್ರಹಣ!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ 'ಮಾಂಗಲ್ಯ ಭಾಗ್ಯ'. ಸರ್ಕಾರ ಸುಮಾರು 55ಸಾವಿರ ರೂ.ಗಳ ಮೌಲ್ಯದ ಸವಲತ್ತುಗಳನ್ನು ನೀಡುತ್ತಿದ್ದರೂ, ಈ ಯೋಜನೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ
ಭಾರತೀಯ ಸಮಾಜದಲ್ಲಿ ವಿವಾಹ ಎಂಬುದು ಕೇವಲ ಎರಡು ಮನಸ್ಸುಗಳ ಮಿಲನವಲ್ಲ, ಬದಲಿಗೆ ಅದೊಂದು ಸಾಮಾಜಿಕ ಪ್ರತಿಷ್ಠೆಯ ಸಂಕೇತ. ಸಾಲ ಸೋಲ ಮಾಡಿಯಾದರೂ ಅದ್ದೂರಿಯಾಗಿ ಮದುವೆ ಮಾಡಬೇಕೆಂಬ ಮಧ್ಯಮ ಮತ್ತು ಬಡವರ್ಗದ ಜನರ ಹಪಹಪಿತನ ಇಂದಿಗೂ ಕಡಿಮೆಯಾಗಿಲ್ಲ.
ಹಾಸನ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಇದುವರೆಗೂ ಒಂದೂ ವಿವಾಹ ನಡೆದಿಲ್ಲ. ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಕೂಡ ಈವರೆಗೆ ಒಂದೂ ವಿವಾಹ ನಡೆದಿಲ್ಲ. ರಾಜ್ಯಾದ್ಯಂತ ಆಯ್ದ 20 ದೇವಾಲಯಗಳಲ್ಲಿ ಕೇವಲ 900 ರಿಂದ 950 ಮದುವೆಗಳಾಗಿವೆ. ಆರಂಭದಲ್ಲಿ (2020ರಲ್ಲಿ) ಸಾಮೂಹಿಕ ವಿವಾಹ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ರಾಜ್ಯದ ಎಲ್ಲಾ'ಎ' ಗ್ರೇಡ್ ದೇವಾಲಯಗಳಲ್ಲಿ ಈ ಯೋಜನೆ ಆರಂಭಿಸಲಾಯಿತು. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬರಲಾಯಿತು. ಆದರೆ, ಕ್ರಮೇಣ ಯೋಜನೆಗೆ ಬೇಡಿಕೆ ಕಡಿಮೆಯಾಗುತ್ತಾ ಹೋಯಿತು. ಕೆಲವು ದೇವಾಲಯಗಳಲ್ಲಿ ಒಂದೂ ಅರ್ಜಿಗಳು ಬಾರದಿದ್ದರೂ ಇಲಾಖೆ ಆಗಿಂದಾಗ್ಗೆ ಅರ್ಜಿಗಳನ್ನು ಆಹ್ವಾನಿಸುತ್ತಾ ಬಂದಿತು. ಆದರೆ, ಇತ್ತೀಚೆಗೆ ಪ್ರತಿಷ್ಠಿತ ಕೆಲ ದೇವಾಲಯಗಳಲ್ಲಿ ವಿವಾಹಗಳು ನಡೆದರೆ, ಉಳಿದಂತೆ ಹಲವು ದೇವಾಲಯಗಳಲ್ಲಿ ಯೋಜನೆ ಸ್ಥಗಿತಗೊಂಡಿದೆ.
ಪ್ರಸ್ತುತ ಚಿನ್ನದ ದರ ಗಗನಕ್ಕೇರಿದೆ ಸರ್ಕಾರ ನಿಗದಿಪಡಿಸಿದ್ದ 55 ಸಾವಿರ ರೂ.ಗಳ ಪ್ಯಾಕೇಜ್‌ನಲ್ಲಿ 8 ಗ್ರಾಂ ಚಿನ್ನ ಮತ್ತು ಇತರೆ ಖರ್ಚುಗಳನ್ನು ನಿಭಾಯಿಸುವುದು ಅಸಾಧ್ಯವಾಗುತ್ತಿದೆ.
5 ವರ್ಷಗಳಲ್ಲಿ ಕೇವಲ 900 ಮದುವೆಗಳಾಗಿವೆ ಎಂದರೆ, ವರ್ಷಕ್ಕೆ ಸರಾಸರಿ 180 ಮದುವೆಗಳು ಮಾತ್ರ ನಡೆದಂತಾಯಿತು. ಸರ್ಕಾರದಂತಹ ಬೃಹತ್ ವ್ಯವಸ್ಥೆಗೆ ಇದು ಅತ್ಯಂತ ಕಡಿಮೆ ಸಾಧನೆಯಾಗಿದೆ.
ಐದು ವರ್ಷಗಳ ವಿವರ ಹೀಗಿದೆ
2020 - 2021 : ಈ ಅವಧಿಯಲ್ಲಿ ಯೋಜನೆಗೆ ಚಾಲನೆ ಸಿಕ್ಕಿತಾದರೂ, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್ ಕಾರಣದಿಂದ ಸಾಮೂಹಿಕ ವಿವಾಹಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿಯಾಗಿದ್ದ ಮುಹೂರ್ತಗಳು ರದ್ದಾದವು.
ಸಾಮಾಜಿಕ ಮಾನ್ಯತೆಯಿಲ್ಲ!
ಸರ್ಕಾರದ ರಾಜಕಾರಣ?