Modi 3.0 Budget | ಏನಿಲ್ಲಾ, ಏನಿಲ್ಲಾ, ಕರ್ನಾಟಕಕ್ಕೆ ಏನಿಲ್ಲಾ... ಎಂದು ವ್ಯಂಗ್ಯವಾಡಿದ ಕಾಂಗ್ರೆಸ್

19 ಸಂಸದರು ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ದಕ್ಕಿದ್ದು ಸೊನ್ನೆ, ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ.

Update: 2024-07-23 12:46 GMT
ಬಜೆಟ್‌ ವಿರುದ್ಧ ಕಾಂಗ್ರೆಸ್‌ ಅಸಮಧಾನ ವ್ಯಕ್ತಪಡಿಸಿದೆ.
Click the Play button to listen to article

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಎನ್‌ಡಿಎ ಮೈತ್ರಿಕೂಟದ ಮೂರನೇ ಅವಧಿಯ ಮೊದಲ ಬಜೆಟ್‌ನ ಅನ್ನು ಇಂದು ಮಂಡಿಸಿದ್ದಾರೆ.

ಆದರೆ ಕೇಂದ್ರದ ಬಜೆಟ್‌ ಕುರಿತು ಕರ್ನಾಟಕ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿದೆ. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಇರುವ ಉಪನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹಲವು ನಿರೀಕ್ಷೆಗಳಿತ್ತು. ಆದರೆ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ ರಾಜ್ಯಕ್ಕೆ ಭಾರೀ ನಿರಾಸೆಯುಂಟು ಮಾಡಿದೆ. 

“ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ. ಕರ್ನಾಟಕಕ್ಕಂತೂ ಭಾರಿ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಈ ಬಜೆಟ್‌ಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್‌ ಅಸಮಧಾನ ವ್ಯಕ್ತಪಡಿಸಿದ್ದು, ಈ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಸಿದ್ದು, ರಾಜ್ಯಕ್ಕೆ ಖಾಲಿ ಚೊಂಬು" ಬಿಟ್ಟರೆ ಬೇರೇನಿಲ್ಲ ಎಂದು ಹೇಳಿದೆ.

ಪೋಸ್ಟ್‌ನಲ್ಲಿ ಏನಿದೆ?

ಏನಿಲ್ಲಾ, ಏನಿಲ್ಲಾ, ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನಿಲ್ಲಾ...

19 ಸಂಸದರು ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ದಕ್ಕಿದ್ದು ಸೊನ್ನೆ, ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ.

ಒಟ್ಟಿನಲ್ಲಿ ರಾಜ್ಯಕ್ಕೆ "ಖಾಲಿ ಚೊಂಬು" ಬಿಟ್ಟರೆ ಬೇರೇನಿಲ್ಲ ಎಂದು ಹೇಳಿದೆ.

ಚುನಾವಣೆ ಪೂರ್ವದಲ್ಲಿ ಬಿಜೆಪಿ ಮಂಡಿಸಿದ ಬಜೆಟ್‌ನ್ನೇ ಮತ್ತೆ ಘೋಷಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ವಿತ್ತ ಸಚಿವರು ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಕ್ಯಾನ್ಸರ್ ಔಷಧಿಗಳು , ಮೊಬೈಲ್‌ಗಳು ಮತ್ತು ಮೊಬೈಲ್ ಚಾರ್ಜರ್‌ಗಳು ಸೇರಿದಂತೆ ಇತರ ಸಾಧನಗಳ ಬೆಲೆ ಇಳಿಕೆ ಆಗಲಿದೆ. ಪ್ಲಾಸ್ಟಿಕ್ ವಸ್ತುಗಳ ಮೇಲಿನ ಆಮದು ಸುಂಕ ಪೆಟ್ರೋಕೆಮಿಕಲ್ - ಅಮೋನಿಯಂ ನೈಟ್ರೇಟ್ ಮೇಲೆ ಕಸ್ಟಮ್ ಸುಂಕ ಆಮದುಗಳನ್ನು ಕಡಿಮೆ ಮಾಡಲು 10 ರಿಂದ 25 ರಷ್ಟು ಹೆಚ್ಚು. ವಿಮಾನ ಪ್ರಯಾಣ ದುಬಾರಿ ಸಿಗರೇಟ್ ದುಬಾರಿ ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ ವಿದ್ಯುತ್‌ ಉಪಕರಣಗಳ ಬೆಲೆ ಏರಿಕೆಯಾಗಿದೆ ಎಂದು ಪೋಸ್ಟ್ ಮಾಡಲಾಗಿದೆ.

Tags:    

Similar News