ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ| 9 ಸಂತ್ರಸ್ತೆಯರಿಂದ ಹೊಸ ಎಫ್‌ಐಆರ್‌ ಶೀಘ್ರದಲ್ಲೇ ದಾಖಲು

Update: 2024-05-06 00:40 GMT

ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದೇ ಅಲ್ಲದೆ ಮೊಬೈಲ್‌ ಚಿತ್ರೀಕರಣ ಮಾಡಿದ್ದ ಬೃಹತ್‌ ಲೈಂಗಿಕ ಹಗರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣನ ವಿರುದ್ಧ ಅತ್ಯಾಚಾರ ಹಾಗೂ ಮಾನಹಾನಿಯ ಕುರಿತಂತೆ ಇನ್ನೂ ಒಂಭತ್ತು ಎಫ್‌ಐಆರ್‌ಗಳು ದಾಖಲಾಗುವ ಸಾಧ್ಯತೆಯಿದ್ದು, ಆರೋಪಿ ಸಂಸದನಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಎಸ್‌ಐಟಿ ಮಹಿಳಾ ಅಧಿಕಾರಿಗಳು ಈಗಾಗಲೆ ಸುಮಾರು ಮೂವತ್ತಕ್ಕೂ ಹೆಚ್ಚು ಸಂತ್ರಸ್ತೆಯರನ್ನು ಸಂಪರ್ಕಿಸಿದ್ದು, ಒಂಭತ್ತು ಮಂದಿ ಪ್ರಜ್ವಲ್‌ ರೇವಣ್ಣ ವಿರುದ್ಧ ಎಫ್‌ಐಆರ್‌ ದಾಖಲಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಷ್ಟೂ ಪ್ರಕರಣಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾದರೆ ಪ್ರಜ್ವಲ್‌ ವಿರುದ್ಧ ಸಂಸದನ ಅಧಿಕಾರದ ಆಮಿಷವೊಡ್ಡಿ ಮಾಡಿದ ಹಾಗೂ ಬಲವಂತವಾಗಿ ದೌರ್ಜನ್ಯ ನಡೆಸಿ ಮೊಬೈಲ್‌ ಚಿತ್ರೀಕರಣ ನಡೆಸಿ ಮಾನಹಾನಿ ಮಾಡಿರುವ ಆರೋಪ ಎದುರಾಗಲಿದೆ. ಇವೆಲ್ಲವೂ ಪ್ರಕರಣಗಳನ್ನು ಎದುರಿಸಲು ಆರೋಪಿಗ ವರ್ಷಗಳೇ ಬೇಕಾಗುತ್ತದೆ ಮತ್ತು ಕಾನೂನಿನಿಂದ ಬಚಾವ್‌ ಆಗುವುದು ಅಷ್ಟೇನೂ ಸುಲಭವಿಲ್ಲ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ́"ದ ಫೆಡರಲ್‌ ಕರ್ನಾಟಕ"ಕ್ಕೆ ತಿಳಿಸಿದ್ದಾರೆ.

ಈಗಾಗಲೇ ಎರಡು ಅತ್ಯಾಚಾರ ಪ್ರಕರಣಗಳ ಎಫ್‌ಐಆರ್‌ಗಳು ದಾಖಲಾಗಿವೆ ಹಾಗೂ ಐವರು ಮೂವರು ಸಂತ್ರಸ್ತೆಯರು ಪ್ರಜ್ವಲ್‌ ವಿರುದ್ಧ ಆತ ನಡೆಸಿದ ಲೈಂಗಿಕ ದೌರ್ಜನ್ಯದ ವಿವರಗಳನ್ನು ಎಸ್‌ಐಟಿ ಅಧಿಕಾರಿಗಳಿಗೆ ಒದಗಿಸಿದ್ದಾರೆ. ಒಬ್ಬರು ಈಗಾಗಲೇ ನ್ಯಾಯಾದೀಶರ ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದು ಕಾನೂನಿನ ಸರಪಳಿಯಿಂದ ತಪ್ಪಿಸಿಕೊಳ್ಳುವುದು ಪ್ರಜ್ವಲ್‌ಗ ಅಷ್ಟೇನೂ ಸುಲಭವಿಲ್ಲ ಎಂದು ಹೇಳಲಾಗಿದೆ.

ಒಂದು ಪ್ರಕರಣದಲ್ಲಿ ಮನೆಗೆಲಸದ ಮಹಿಳೆಯೋರ್ವರಿಗೆ ಪ್ರಜ್ವಲ್‌ ಮಾತ್ರವಲ್ಲದೆ ಆತನ ತಂದೆ ಎಚ್‌.ಡಿ. ರೇವಣ್ಣ ಅವರೂ ಕಿರುಕುಳ ನೀಡಿರುವ ಬಗ್ಗೆ ಮಾಹಿತಿಯಿದೆ. ಮುಂದೆ ಸಂತ್ರಸ್ತೆಯರು ನೀಡಲಿರುವ ಹೇಳಿಕೆಗಳು, ದಾಖಲಾಗಲಿರುವ ಪ್ರಕರಣಗಳು ಅಪ್ಪ-ಮಗನನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಲಿವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಎಸ್‌ಐಟಿ ರಚಿಸಿರುವ ಸಹಾಯವಾಣಿಯು ಇನ್ನಷ್ಟು ಸಂತ್ರಸ್ತೆಯರು ಕಾನೂನಿನ ಕದತಟ್ಟುವಂತೆ ಮಾಡಲಿದ್ದು, ಲೈಂಗಿಕ ಪ್ರಕರಣವೊಂದರಲ್ಲಿ ಒಬ್ಬವ್ಯಕ್ತಿಯ ಮೇಲೆ ಅತಿ ಹೆಚ್ಚು ಪ್ರಕರಣ ದಾಖಲಾಗುವಂತೆ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ರಚಿಸಲಾಗಿರುವ ಸಹಾಯವಾಣಿ (6360938947) ಸಂಪರ್ಕಿಸಲಿರುವ ಸಂತ್ರಸ್ತರು ಅಥವಾ ಮಾಹಿತಿದಾರರ ವಿವರಗನ್ನು ಎಸ್‌ಐಟಿ ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags:    

Similar News