ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದ್ದ ಬಾಲಕಿ ಅಪಹರಣ; ಆರೋಪಿ ಬಂಧನ

ಬಾಲಕಿಯನ್ನು ವಿವಾಹವಾಗಿದ್ದ ಆರೋಪಿ ಚಂದ್ರಕಾಂತ್, ತಾನು ಬಾಲಕಿಯ ಚಿಕ್ಕಪ್ಪ ಎಂದು ಸುಳ್ಳು ಹೇಳಿ, ಮಾತ್ರೆ ನೀಡುವ ನೆಪದಲ್ಲಿ ಆಶ್ರಯ ಕೇಂದ್ರಕ್ಕೆ ಬಂದಿದ್ದ. ನಂತರ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿ ಬಾಲಕಿಯೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.;

Update: 2025-08-05 05:46 GMT

ಸಾಂದರ್ಭಿಕ ಚಿತ್ರ

ಬೆಳಗಾವಿ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಆರೋಪಿ ಚಂದ್ರಕಾಂತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

13 ವರ್ಷದ ಬಾಲಕಿಯನ್ನು ಬಾಲ್ಯ ವಿವಾಹದಿಂದ ರಕ್ಷಿಸಿ ಜುಲೈ 25 ರಂದು ಮಕ್ಕಳ ರಕ್ಷಣಾ ಘಟಕದ ಆಶ್ರಯ ಕೇಂದ್ರದಲ್ಲಿ ಇರಿಸಲಾಗಿತ್ತು.

ಬಾಲಕಿಯನ್ನು ವಿವಾಹವಾಗಿದ್ದ ಆರೋಪಿ ಚಂದ್ರಕಾಂತ್, ತಾನು ಬಾಲಕಿಯ ಚಿಕ್ಕಪ್ಪ ಎಂದು ಸುಳ್ಳು ಹೇಳಿ ಮಾತ್ರೆ ನೀಡುವ ನೆಪದಲ್ಲಿ ಆಶ್ರಯ ಕೇಂದ್ರಕ್ಕೆ ಬಂದಿದ್ದ. ನಂತರ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿ ಬಾಲಕಿಯೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಬಾಲಕಿಯರ ಅಪಹರಣ ಪ್ರಕರಣ

ಇತ್ತೀಚೆಗೆ ಬೆಂಗಳೂರಿನಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ನಗರ ಹೊರವಲಯದಲ್ಲಿ 15 ವರ್ಷದ ಬಾಲಕಿಯನ್ನು ಶಾಲೆಯಿಂದ ಮನೆಗೆ ಹೋಗುವಾಗ ಅಪಹರಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಾಲಕಿಯನ್ನು ಪತ್ತೆಹಚ್ಚಿ ರಕ್ಷಿಸಿದ್ದರು. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Similar News