ಪ್ರೇಮಿಗಳ ದಿನಕ್ಕೆ ರಾಜ್ಯದ ಕೆಂಗುಲಾಬಿಗೆ ವಿದೇಶದಲ್ಲಿ ಭಾರೀ ಬೇಡಿಕೆ
ಪ್ರೇಮಿಗಳ ದಿನಾಚರಣೆಗೆ ರಾಜ್ಯದ ದೇಶಿ ಗುಲಾಬಿ ಹೂವುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ರಾಜ್ಯದಿಂದ ಒಂದು ಕೋಟಿ ಹೂವುಗಳು ವಿದೇಶಕ್ಕೆ ರಫ್ತಾಗಲಿವೆ.
ಪ್ರೇಮಿಗಳ ನಿವೇದನೆಗೆ ರೆಡಿಯಾಗಿರುವ ಕೆಂಪು ಗುಲಾಬಿಗೆ ಪ್ರೇಮಿಗಳ ದಿನದಂದು ಡಿಮ್ಯಾಂಡೋ ಡಿಮಾಂಡು. ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ರಾಜ್ಯದ ದೇಶಿ ಗುಲಾಬಿ ಹೂವುಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ರಾಜ್ಯದಿಂದ ಒಂದು ಕೋಟಿ ಹೂವುಗಳು ವಿದೇಶಕ್ಕೆ ರಫ್ತಾಗಲಿವೆ.
ಕಳೆದ ವರ್ಷ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ದೇಶಗಳಿಗೆ ಲಕ್ಷಾಂತರ ಕೆಜಿ ಗುಲಾಬಿ ರಫ್ತಾಗಿದ್ದು, ಅತಿ ಹೆಚ್ಚು ಹೂ ರಪ್ತು ಮಾಡುವ ವಿಮಾನ ನಿಲ್ದಾಣ ಎಂಬ ಸ್ಥಾನವನ್ನು ಪಡೆದಿತ್ತು. ಈ ಬಾರಿಯೂ ಕಳೆದ ವರ್ಷಕ್ಕಿಂತ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಗುಲಾಬಿ ಬೆಳೆಗಾರಿಗೆ ತಾವು ಬೆಳೆದಿರುವ ಗುಲಾಬಿ ಹೂವುಗಳು ವಿದೇಶಕ್ಕೆ ಹಾರಿರುವುದು ಸಂತಸ ತಂದಿದೆ.
ಬೆಂಗಳೂರಿನ ಅಂತರಾಷ್ಟ್ರೀಯ ಪುಪ್ಪ ಹರಾಜು ಕೇಂದ್ರದಿಂದ ಹೂವುಗಳ ಪೂರೈಕೆಗೆ ಸಲಕ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲೆಡೆ ಹೂವುಗಳ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರಿನ ಅಂತರಾಷ್ಟ್ರೀಯ ಪುಪ್ಪ ಹರಾಜು ಕೇಂದ್ರಕ್ಕೆ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಅತಿ ಹೆಚ್ಚು ಬೆಳೆಯುವ ಗುಲಾಬಿ ರೈತರಿದ್ದು ಈ ಜಿಲ್ಲೆಗಳಿಂದ ಅತೀ ಹೆಚ್ಚಿನ ಗುಣಮಟ್ಟದ ಗುಲಾಬಿಗಳು ಈ ಮಾರುಕಟ್ಟೆಗೆ ಪ್ರವೇಶಿಸುತ್ತವೆ. ಕೊರೊನಾ ಸಂದರ್ಭದಲ್ಲಿ ಕುಸಿತ ಕಂಡಿದ್ದ ಹೂವಿನ ಮಾರುಕಟ್ಟೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದ್ದರಿಂದ ರೈತರ ಮೊಗದಲ್ಲಿ ಸಂತಸ ತುಂಬಿದೆ.
ಗುಲಾಬಿ ರಪ್ತು ಏರಿಕೆ
ವಿದೇಶದಲ್ಲಿ ಗುಲಾಬಿ ಹೂವಿಗೆ ಭಾರೀ ಬೇಡಿಕೆ ಇದ್ದು, 2021 ರಲ್ಲಿ 90 ಲಕ್ಷ, 2022ರಲ್ಲಿ 1.38 ಕೋಟಿ ಹಾಗೂ 2023 ರಲ್ಲಿ 1.74 ಕೋಟಿ ಹೂವು ರಫ್ತಾಗಿದ್ದು, ಈ ವರ್ಷ ಬಹಳಷ್ಟು ಏರಿಕೆ ಕಂಡಿದೆ. ಇನ್ನು ಬೆಲೆಗೆ ಸಂಬಂಧಿಸಿದಂತೆ ಬೇಡಿಕೆಗಳು ಏರಿಳಿತವಾಗುತ್ತಿದ್ದು, ಕಳೆದ ವರ್ಷ 40 ರೂಗಳವರೆಗೆ ಏರಿಕೆಯಾಗಿತ್ತು. ಈ ಬಾರಿ ಹರಾಜು ಕೇಂದ್ರದಲ್ಲಿ ಪ್ರತಿ ಗುಲಾಬಿಗೆ 18 ರೂಗಳಲ್ಲಿ ಮಾರಾಟಗೊಳ್ಳುತ್ತಿದೆ ಎಂದು ಐಫ್ಯಾಬ್ ʼದ.ಫೆಡರಲ್ʼ-ಕರ್ನಾಟಕʼಕ್ಕೆ ತಿಳಿಸಿದೆ.
ಎಲ್ಲೆಲ್ಲಿಗೆ ರಪ್ತಾಗುತ್ತೆ ಈ ಗುಲಾಬಿ ಹೂವು
ರಾಜ್ಯದ ವಿಮಾನ ನಿಲ್ದಾಣದಿಂದ ಕೌಲಾಲಂಪುರ, ಸಿಂಗಾಪುರ, ಕುವೈತ್, ಮನಿಲಾ, ನ್ಯೂಯಾರ್ಕ್, ಲೆಬನಾನ್, ಮಾಲ್ಡೀವ್ಸ್, ಜೋರ್ಡಾನ್, ದುಬೈ ಮುಂತಾದ ದೇಶಗಳಿಗೆ ಹಾಗೂ ಭಾರತದ ದಿಲ್ಲಿ, ಕೊಲ್ಕತ್ತಾ, ಮುಂಬಯಿ. ಗುವಾಹಟಿ, ಅಹಮದಾಬಾದ್, ಕೊಚ್ಚಿ, ಚಂಡೀಗಢ ಮತ್ತು ಪಟನಾ ಮುಂತಾದ ಕಡೆ ರಫ್ತಾಗುತ್ತವೆ.
ಯಾವೆಲ್ಲ ಹೂವುಗಳಿಗೆ ಬೇಡಿಕೆ
ಪ್ರೇಮಿಗಳ ದಿನ ಸಮೀಪಿಸುತ್ತಿಂತೆಯೇ ಕೆಂಪು ಗುಲಾಬಿಗಳದ್ದೇ ಕಾರುಬಾರು. ಅಂದಹಾಗೆ ಪ್ರೇಮಿಗಳ ದಿನಕ್ಕೆ ತಾಜ್ ಮಹಲ್, ಸಮುರಾಯ್, ಎಲ್ಲೋ, ಹಾಟ್‌ಶಾಟ್, ಬೋನಿಯರ್, ಸೌರನ್, ಜ್ಯುಮಿಲಿಯಾ, ರಾಕ್‌ಸ್ಟಾರ್, ಡಚ್ ಮುಂತಾದ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಒಟ್ಟಾರೆಯಾಗಿ ಈ ಬಾರಿಯ ಗುಲಾಬಿ ಹೂವಿಗೆ ಅತೀ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಕೋಟಿ ಹೂವುಗಳು ವಿದೇಶಕ್ಕೆ ಹಾರಿರುವುದು ಗುಲಾಬಿ ಹೂವಿನಂತೆ ಗುಲಾಬಿ ಬೆಳೆಗಾರರ ಮೊಗ ಅರಳಿದೆ.