Heavy Rain | ರಾಜ್ಯಾದ್ಯಂತ ಮುಂದಿನ ಒಂದು ವಾರ ಭಾರೀ ಮಳೆ

ಬೆಂಗಳೂರಿನಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.;

Update: 2025-08-14 04:57 GMT

ಬೆಂಗಳೂರು ಮಳೆ

ರಾಜ್ಯದ ಕರಾವಳಿ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿ ರಾಜ್ಯದ ಹಲವೆಡೆ ಗುರುವಾರದಿಂದ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಕೊಡಗು, ತುಮಕೂರು, ವಿಜಯನಗರ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ ಜಿಲ್ಲೆಗಳಲ್ಲಿ ಮತ್ತಷ್ಟು ಜೋರು ಮಳೆಯಾಗುವ ಸಾಧ್ಯತೆ ಇದೆ.

ಕುಂದಾಪುರ, ಕೋಟಾ, ಆಗುಂಬೆ, ಗೋಕರ್ಣ, ಧರ್ಮಸ್ಥಳ, ಅಂಕೋಲಾ, ಸಿಂದಗಿ, ಹುಣಸಗಿ, ಗುರುಮಿಟ್ಕಲ್, ಅಫ್ಜಲ್​ಪುರ, ಯಡ್ರಾಮಿ, ಮಂಕಿ, ಕುರ್ಡಿ, ಯಾದಗಿರಿ, ಶಹಾಪುರ, ಸೇಡಂ, ರಾಯಲ್ಪಾಡು, ಮಾನ್ವಿ, ದೇವರಹಿಪ್ಪರಗಿ, ಚಿತ್ತಾಪುರ್, ನರಗುಂದ, ಮೈಸೂರು, ಜೇವರ್ಗಿ, ಹುಮ್ನಾಬಾದ್, ಹೊಸಕೋಟೆ, ಗೇರುಸೊಪ್ಪ, ವೈಎನ್ ಹೊಸಕೋಟೆ, ತಿಪಟೂರು, ಸಿದ್ದಾಪುರ, ರಾಯಚೂರು, ಮಿಡಿಗೇಶಿ, ಮದ್ದೂರು, ಕನಕಪುರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೀದರ್, ಬಾದಾಮಿಯಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಬಿರುಸಿನ ಮಳೆ 

ಬೆಂಗಳೂರಿನಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕಸ್ತೂರಿ ನಗರದಿಂದ ಎಂಎಂಟಿ ಕಡೆಗೆ ಸಾಗುವ ರಸ್ತೆ, ಕೆ.ಆರ್. ಪುರ ಮೆಟ್ರೊ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ಕಡೆಗೆ ಸಾಗುವ ರಸ್ತೆ, ಹಳೆಯ ಉದಯ ಟಿವಿ ಜಂಕ್ಷನ್‌ನಿಂದ ಜಯಮಹಲ್ ಕಡೆಗೆ ಸಾಗುವ ರಸ್ತೆ, ಮಾರತ್‌ಹಳ್ಳಿಯಿಂದ, ಮಾರತ್‌ಹಳ್ಳಿ ಪೊಲಿಸ್ ಠಾಣೆ ಕಡೆಗೆ ಸಾಗುವ ರಸ್ತೆ, ಪುರಭವನದಿಂದ ಕೆ.ಆರ್. ಮಾರುಕಟ್ಟೆ ಕಡೆಗೆ ಸಾಗುವ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತ್ತು. 

ಖೋಡೆ ಕೆಳಸೇತುವೆ ಬಳಿ ಮಳೆ ನೀರು ನಿಂತಿದ್ದರಿಂದ ಮಲ್ಲೇಶ್ವರ ಕಡೆಗೆ ಸಾಗುವ ವಾಹನಗಳಿಗೆ ಅಡ್ಡಿಯಾಯಿತು. ಮಳೆಯ ಕಾರಣದಿಂದ ವಾಹನಗಳು ನಿಧಾನವಾಗಿ ಸಾಗಿದ್ದರಿಂದ ನಗರದ ವಿವಿಧೆಡೆ ವಾಹನ ದಟ್ಟಣೆ ಉಂಟಾಗಿತ್ತು. 

Tags:    

Similar News