ಹಾವೇರಿಯಲ್ಲಿ ದುರಂತ | ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕರಿಬ್ಬರ ಸಾವು
ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ;
ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಸಿದ್ದು(24) ಹಾಗೂ ಪ್ರೀತಮ್(25) ಮೃತ ಕೂಲಿ ಕಾರ್ಮಿಕರು. ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದ್ದಾಗ ರೋಲರ್ ಹರಿದು ಸಾವನ್ನಪ್ಪಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ರೋಡ್ ರೋಲರ್ ಸಂಬಂಧಿತ ಗುತ್ತಿಗೆದಾರರು ಬರುವವರೆಗೂ ಶವ ಸ್ಥಳಾಂತರಿಸದಿರಲು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಲು ಒತ್ತಾಯಿಸಲಾಗಿದೆ. ಸದ್ಯ ಬಿಗುವಿನ ವಾತಾವರಣ ಹಿನ್ನೆಲೆ ಸ್ಥಳಕ್ಕೆ ಎಸ್ಪಿ ಭೇಟಿ ನೀಡಿದ್ದಾರೆ.
ಹೇಗೆ ನಡೆಯಿತು ಘಟನೆ?
ಮೂಟೆಬೆನ್ನೂರಿನ ರಸ್ತೆ ಕೆಲಸಕ್ಕಾಗಿ ಸಿದ್ದು ಮತ್ತು ಪ್ರೀತಮ್ ಬಂದಿದ್ದರು. ಎಂದಿನಂತೆ ಮಧ್ಯಾಹ್ನದ ಊಟದ ಬಳಿಕ ಕೆಲ ಸಮಯ ನಿದ್ರೆ ಮಾಡಲು ಎಂದು ಇಬ್ಬರೂ ರಸ್ತೆ ಪಕ್ಕದಲ್ಲೇ ಮಲಗಿದ್ದರು. ಆದರೆ, ಅವರು ಮಲಗಿರುವುದನ್ನು ಗಮನಿಸದ ಅದೇ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ರೋಡ್ ರೋಲರ್ ಚಾಲಕ ಇಬ್ಬರ ಮೇಲೂ ರೋಲರ್ ಹರಿಸಿದ್ದಾನೆ. ಹಾಗಾಗಿ ಇಬ್ಬರೂ ನತದೃಷ್ಟ ಕಾರ್ಮಿಕರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.