ಕಲಬುರಗಿ| ಭಾರೀ ಮಳೆಗೆ ಗೋಡೆ ಕುಸಿದು ಬಾಲಕಿ ಸಾವು, ನಾಲ್ವರಿಗೆ ಗಾಯ
ಯಡ್ರಾಮಿ ಪಟ್ಟಣದ ಒಂದು ಮನೆಯಲ್ಲಿ ಮೃತ ಸಾನಿಯಾ ಮತ್ತು ಅವಳ ಸಹೋದರ ಸಹೋದರಿಯರು ಮಾತ್ರ ವಾಸಿಸುತ್ತಿದ್ದರು. ತಂದೆ-ತಾಯಿ ಸಾಲದ ಬಾಧೆಗೆ ಊರು ಬಿಟ್ಟು ಬೇರೆಡೆ ಹೋಗಿದ್ದರು ಎನ್ನಲಾಗಿದೆ.
ಗೋಡೆ ಕುಸಿದು ಮೃತಪಟ್ಟಿರುವ ಬಾಲಕಿ
ಕಲಬುರಗಿಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು 10 ವರ್ಷದ ಬಾಲಕಿ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ.
10 ವರ್ಷದ ಬಾಲಕಿ ಸಾನಿಯಾ ಸೈಫಾನ ಸಾಬ್ ತಂಬುಳಿ ಮೃತಪಟ್ಟ ಬಾಲಕಿ.ಆ ಬಾಲಕಿಯ ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಡ್ರಾಮಿ ಪಟ್ಟಣದ ಒಂದು ಮನೆಯಲ್ಲಿ ಮೃತ ಸಾನಿಯಾ ಮತ್ತು ಅವಳ ಸಹೋದರ ಸಹೋದರಿಯರು ಮಾತ್ರ ವಾಸಿಸುತ್ತಿದ್ದರು. ತಂದೆ-ತಾಯಿ ಸಂಘದ ಸಾಲದ ಬಾಧೆಗೆ ಊರು ಬಿಟ್ಟು ಬೇರೆಡೆ ಹೋಗಿದ್ದರು ಎನ್ನಲಾಗಿದೆ. ಕಳೆದ ರಾತ್ರಿ ಎಲ್ಲರೂ ಮನೆಯಲ್ಲಿ ಮಲಗಿದ್ದಾಗ, ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಮನೆಯ ಗೋಡೆ ಕುಸಿದಿದ್ದು, ಸಾನಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಗೊಂಡ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿ, ಯಡ್ರಾಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ನಾಲ್ವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್‌ಗೆ ಘಟನೆ ಕುರಿತು ತಿಳಿದಿದ್ದರೂ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.