Accident| ವಿಜಯಪುರದಲ್ಲಿ ಭೀಕರ ಅಪಘಾತ ; ಐವರು ಸ್ಥಳದಲ್ಲೇ ಸಾವು
ಬಸವನ ಬಾಗೇವಾಡಿ ಬಳಿ ಮಹೀಂದ್ರ ಎಕ್ಸ್‌ಯುವಿ 300 ಕಾರು, ಕಂಟೇನರ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, ಐವರು ಮೃತಪಟ್ಟಿದ್ದಾರೆ.;
By : The Federal
Update: 2025-05-21 04:28 GMT
ಸಾಂದರ್ಭಿಕ ಚಿತ್ರ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಮಹೀಂದ್ರ ಎಕ್ಸ್‌ಯುವಿ 300 ಕಾರು, ಕಂಟೇನರ್ ಹಾಗೂ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.
ಕಳೆದ ವರ್ಷ ತಾಳಿಕೋಟೆ ಸಮೀಪ ಕಾರು ಹಾಗೂ ರಾಗಿ ಕೊಯ್ದು ಯಂತ್ರದ ಮಧ್ಯೆ ಅಪಘಾತ ಸಂಭವಿಸಿ ಐವರು ಮೃತಪಟ್ಟಿದ್ದರು. ಮದುವೆ ಮಾತುಕತೆಗೆ ತೆರಳಿ ವಾಪಾಸಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳು ಮೃತಪಟ್ಟಿದ್ದರು.