Actor Darshan Case | ದರ್ಶನ್ ಭೇಟಿ ಮಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ
ಕೆಲವು ದಿನಗಳ ಹಿಂದಷ್ಟೇ ಹಾಸ್ಯ ನಟ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಹೋಗಿದ್ದರು. ಆದರೆ, ಆ ವೇಳೆ ದರ್ಶನ್ ಭೇಟಿ ಸಾಧ್ಯವಾಗಿರಲಿಲ್ಲ.;
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಹಾಸ್ಯನಟ ಸಾಧು ಕೋಕಿಲಾ ಅವರು ಗುರುವಾರ ಜೈಲಿನಲ್ಲಿ ಭೇಟಿ ಮಾಡಿದರು.
ಕೆಲವು ದಿನಗಳ ಹಿಂದಷ್ಟೇ ಸಾಧು ಕೋಕಿಲಾ ಅವರು ದರ್ಶನ್ ಭೇಟಿ ಮಾಡುವುದಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಆದರೆ, ಆ ವೇಳೆ ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಸಂಬಂಧ ಗುರುವಾರ(ಜು.25) ಮತ್ತೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿ, ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಸಾಧು, ದರ್ಶನ್ ಅವರನ್ನು ಮಾತಾಡಿಸಿಕೊಂಡು ಬಂದಿದ್ದು, ನೋಡಿ ಸಮಾಧಾನ ಆಯ್ತು. ಇವತ್ತು ಭೇಟಿ ಮಾಡಿದ್ವಿ. ಆರಾಮಾಗಿ ಇದ್ದಾರೆ. ಬುಕ್ಸ್ ಓದಿಕೊಂಡು ಕೂಲ್ ಆಗಿ ಆರಾಮಾಗಿ ಇದ್ದಾರೆ. ನೋಡಿ ನನಗೆ ನೆಮ್ಮದಿ ಸಿಕ್ಕಿತು. ಮೆಜೆಸ್ಟಿಕ್ ಮೊದಲನೇ ಸಿನಿಮಾದಿಂದ ನನ್ನ ಜೊತೆಗೆ ಇದ್ದಾರೆ. ತುಂಬಾ ಆತ್ಮೀಯತೆಯಿಂದ ದರ್ಶನ್ ಏನು ಅಂತ ಚೆನ್ನಾಗಿ ಗೊತ್ತು. ಬ್ರದರ್ ಆಗಿ ನಾನು ಭೇಟಿ ಮಾಡಿದ್ದೇನೆ" ಎಂದು ಅವರು ಹೇಳಿದ್ದಾರೆ.