Cabinet Meeting | ಅಭಿವೃದ್ಧಿಗೆ ಅನುದಾನದ ಕೊರತೆ: 4,500 ಕೋಟಿ ಸಂಗ್ರಹಕ್ಕೆ ಗಣಿಗಾರಿಕೆಗೆ ಹೊಸ ತೆರಿಗೆ

ಗ್ಯಾರಂಟಿ ಯೋಜನೆಗಳಿಗಾಗಿ ಹೆಚ್ಚಿನ ಅನುದಾನ ನಿಗದಿ ಹಿನ್ನೆಲೆಯಲ್ಲಿ ಇತರ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಟ್ಟಿದೆ;

Update: 2024-12-06 12:24 GMT

ಗ್ಯಾರಂಟಿ ಯೋಜನೆಗಳಿಗಾಗಿ ಹೆಚ್ಚಿನ ಅನುದಾನ ನಿಗದಿ ಹಿನ್ನೆಲೆಯಲ್ಲಿ ಇತರ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ಈ  ಹಿನ್ನೆಲೆಯಲ್ಲಿ  ಖನಿಜ ಗಣಿಗಾರಿಕೆ ಮಾಡುತ್ತಿರುವ ಭೂ ಮಾಲಿಕರಿಂದ ಸುಮಾರು ಸುಮಾರು 4,500 ಕೋಟಿ ರೂ. ತೆರಿಗೆ ಸಂಗ್ರಹಿಸಿ  ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.

ಪ್ರತಿ ಟನ್‌ ಖನಿಜಕ್ಕೆ  100 ರೂ. ತೆರಿಗೆ ವಿಧಿಸುವ ಮೂಲಕ  ಬೃಹತ್‌ ಗಾತ್ರದ ತೆರಿಗೆ ಸಂಗ್ರಹಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ  ಸಂಪುಟ ಸಭೆ  ನಿರ್ಧರಿಸಿದೆ.  ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ನಿರ್ಧಾರ ಮಾಡಿದೆ.

‘ಖನಿಜಗಳನ್ನು ಹೊಂದಿರುವ ಭೂಮಿಗೆ ತೆರಿಗೆಯನ್ನು ಹಾಕಲು ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಆ ಮೂಲಕ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಇನಡೆದ ಸಂಪುಟ ಸಭೆ ಬಳಿಕ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್,  ಹೊಸ ತೆರಿಗೆ ಬಗ್ಗೆ ವಿವರ ನೀಡಿದ್ದಾರೆ. 

‘ಭೂಮಿಯಲ್ಲಿ ಬಾಕ್ಸೈಟ್, ಕ್ರೋಮೈಟ್ ಇನ್ನಿತರ ಯಾವುದೇ ಖನಿಜ ನಿಕ್ಷೇಪಗಳನ್ನು ಹೊಂದಿದ್ದು, ಭೂಮಾಲೀಕರು ಗಣಿಗಾರಿಕೆಯನ್ನು ಮಾಡುತ್ತಿದ್ದಲ್ಲಿ ಆ ಭೂಮಾಲೀಕರು ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹ ಜಮೀನುಗಳಲ್ಲಿ ಗಣಿಗಾರಿಕೆಯನ್ನು ಮಾಡುತ್ತಿದ್ದರೆ ಮಾತ್ರ ಈ ಕಾನೂನು ಅನ್ವಯವಾಗುತ್ತದೆ. ಭೂಮಿಯಿಂದ ತೆಗೆಯುವ ಪ್ರತಿ ಟನ್ ಖನಿಜಕ್ಕೆ 100 ರೂ. ತೆರಿಗೆ ವಿಧಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಈ ತೆರಿಗೆಯನ್ನು ಭೂಮಾಲೀಕರು ಕಟ್ಟಬೇಕಿದೆ. ಆ ಖನಿಜದ ಹಕ್ಕು ಭೂಮಾಲೀಕರಿಗೆ ಸೇರುತ್ತದೆ’ ಎಂದು ಸಚಿವ ಎಚ್‌.ಕೆ. ಪಾಟೀಲ್‌  ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ. ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜವಿರುವ ಭೂಮಿಗಳ) ತೆರಿಗೆ ವಿಧೇಯಕ 2024ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸರ್ವೋಚ್ಛ ನ್ಯಾಯಾಲಯವು 3 ತಿಂಗಳುಗಳ ಹಿಂದೆ ತೀರ್ಪು ಕೊಟ್ಟಿತ್ತು. ಖನಿಜ ಇರುವ ಭೂಮಿಗಳ ಮೇಲೆ ಅಥವಾ ಖನಿಜ ಭೂಮಿಗಳು ಹಾಗೂ ಖನಿಜದ ಹಕ್ಕುಗಳ ಮೇಲೆ ತೆರಿಗೆ ವಿಧಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಮುಖ್ಯ ಖನಿಜಗಳಿಗೆ ತೆರಿಗೆ ವಿಧಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಈ ಹಿಂದೆ ಸ್ವಂತ ಭೂಮಿಯಲ್ಲಿ ಯಾವುದೇ ರೀತಿಯ ಅದಿರು ಗಣಿಕಾರಿಗೆಕೆ ಅವಕಾಶ ಇರಲಿಲ್ಲ. ಬೇರೆಯವರಿಗೆ ಗಣಿಗಾರಿಕೆ ಮಾಡಲು ಭೂಮಾಲೀಕ ಅನುಮತಿ ಕೊಟ್ಟಾಗ ಗಣಿಗಾರಿಗೆ ಮಾಡುವವರು ಅದಕ್ಕೆ ಸರ್ಕಾರ ನಿಗದಿ ಮಾಡಿದ್ದ ರಾಯಲ್ಟಿ ಕಟ್ಟುತ್ತಿದ್ದರು. ಜೊತೆಗೆ ಭೂಮಿಯಡಿ ಸಿಗುವ ಖನಿಜಗಳು ಸರ್ಕಾರದ ಸ್ವತ್ತು ಎಂದು ಪರಿಗಣನೆ ಆಗುತ್ತಿತ್ತು. ಈ ಬಗ್ಗೆ ಕೆಲ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಅಂತಹ ಕಾನೂನನ್ನು ರದ್ದು ಮಾಡಲಾಗಿತ್ತು. ಈ ವಿಷಯದ ಕುರಿತು ಇತ್ತೀಚೆಗೆ ಹೊಸ ಕಾನೂನು ತರುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆ ಪ್ರಕಾರ ಈಗ ಭೂಮಾಲೀಕರು ಗಣಿಕಾರಿಗೆ ಮಾಡಬಹುದು. ಜೊತೆಗೆ ತಗೆಯುವ ಪ್ರತಿ ಟನ್ ಅದಿರಿಗೆ ತೆರಿಗೆ ಹಾಕುವ ಅನುಮತಿ ಕೊಡಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಬ್ಬಿಣದ ಅದಿರಿನ ಗಣಿ ಗುತ್ತಿಗೆಗಳಲ್ಲಿ 25 ಗಣಿ ಗುತ್ತಿಗೆಗಳು ಹರಾಜೇತರ ರೂಪದಲ್ಲಿ ಮಂಜೂರಾಗಿವೆ. ಅವುಗಳಲ್ಲಿ 5 ಗಣಿ ಗುತ್ತಿಗೆಗಳನ್ನು ಕೇಂದ್ರ/ರಾಜ್ಯ ಸರ್ಕಾರಿ ಸ್ವಾಮ್ಯಗಳಿಗೆ ಮೀಸಲಿರಿಸಿದೆ. ಈ ಎಲ್ಲಾ ಗಣಿ ಗುತ್ತಿಗೆಗಳಿಂದ ವಾರ್ಷಿಕವಾಗಿ 77.36 ದಶಲಕ್ಷ ಟನ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದ್ದರಿಂದ ಹರಾಜೇತರ ಗಣಿ ಗುತ್ತಿಗೆಗಳು ಮತ್ತು ಕೇಂದ್ರ ರಾಜ್ಯ ಸರ್ಕಾರಿ ಸ್ವಾಮ್ಯದ ಮೀಸಲಿರಿಸಿದ ಈ ಗಣಿ ಗುತ್ತಿಗೆಗಳ ಮೇಲೆ ಖನಿಜ ಹಕ್ಕು ತೆರಿಗೆ ವಿಧಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ತೆರಿಗೆ ರೂಪದಲ್ಲಿ ಸುಮಾರು 4 ಸಾವಿರ ಕೋಟಿ ರೂಪಾಯಿಗಳ ಆದಾಯ ಸರ್ಕಾರಕ್ಕೆ ಬರಲಿದೆ ಎಂಬ ಮಾಹಿತಿಯಿದೆ.

ಕರ್ನಾಟಕ (ಮಿನರಲ್ ರೈಟ್ಸ್ ಆ್ಯಂಡ್ ಬೀಯರಿಂಗ್ ಲ್ಯಾಂಡ್) ತೆರಿಗೆ ವಿಧೇಯಕ 2024 ಅನ್ನು ವಿಧಾಮಂಡಲದಲ್ಲಿ ಮಂಡಿಸಲು; ಸಚಿವ ಸಂಪುಟ ನಿರ್ಣಯ ಮಾಡಿದೆ. ಗಣಿ ಗುತ್ತಿಗೆ ಮಂಜೂರಾದ ವಿಧಾನ ಮತ್ತು ಪಾವತಿಸುವ ರಾಜಧನವನ್ನು ಆಧರಿಸಿ ಗಣಿ ಗುತ್ತಿಗೆಗಳ ವರ್ಗೀಕರಣದ ಅನುಸಾರವಾಗಿ ವಿವಿಧ ತೆರಿಗೆ ದರ ಪ್ರಸ್ತಾಪಿಸಿ ಆಹಾ ವರ್ಗಗಳಲ್ಲಿ ಏಕರೀತಿಯ ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ.

ಹರಾಜು ಮಾರ್ಗದಿಂದ ನೀಡಲಾದ ಗಣಿಗಾರಿಕೆ ಬ್ಲಾಕ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗಗಳ ಗಣಿ ಗುತ್ತಿಗೆಗಳಿಗೆ ರಾಜಧನ ಸೇರಿದಂತೆ ಸರಾಸರಿ ಮಾರಾಟ ಬೆಲೆ (ASP) ಶೇ.60% ರಷ್ಟು Ceiling limit ನಿಗದಿಪಡಿಸಲು ಪ್ರಸ್ತಾಪಿಸಿದೆ. ಏಕೆಂದರೆ ಹರಾಜು ಮಾಡಿದ

ಗಣಿಗಾರಿಕೆಗಳು ಶೇ.60% ಕ್ಕಿಂತ ಹಚ್ಚು Ceiling ದರದೊಂದಿಗೆ ವ್ಯತ್ಯಾಸದ ಮೊತ್ತಕ್ಕೆ ತೆರಿಗೆ ವಿಧಿಸಲಾಗುತ್ತದೆ. ಹರಾಜು ಮಾಡಿದ ಯಾವುದೇ ಖನಿಜದ ಗಣಿ ಗುತ್ತಿಗೆಗಳಿಗೆ ತೆರಿಗೆ ಹಕ್ಕುಗಳನ್ನು ಕಾಯ್ದಿರಿಸುವ ಸಲುವಾಗಿ ರಾಜಧನದ ಮೇಲೆ ಶೇ. 0.25% ಖನಿಜ ಹಕ್ಕುಗಳ ತೆರಿಗೆಯಾಗಿ ವಿಧಿಸಲುಪ್ರಸ್ತಾಪಿಸಲಾಗಿದೆ. ಎಲ್ಲಾ ಗಣಿ ಗುತ್ತಿಗೆ ವರ್ಗಗಳಿಗೆ ಖನಿಜವಿರುವ ಭೂಮಿಗಳ ಮೇಲೀನ ತೆರಿಗೆಗೆ ಏಕಬದ್ಧ ತೆರಿಗೆ ದರವನ್ನು ಪ್ರಸ್ತಾಪಿಸಿದೆ.

ಪ್ರಸ್ತಾಪಿತ ಕಾಯ್ದೆಯ ಖನಿಜ ಹಕ್ಕುಗಳ ತೆರಿಗೆ ಎಎಸ್​ಪಿಯ ಶೇ.60% ರಷ್ಟು ಪರಿಗಣಿಸಿದರೆ ರಾಜ್ಯವು ಪ್ರತಿವರ್ಷ ಸುಮಾರು ರೂ.4,207.95 ಕೋಟಿ ಹೆಚ್ಚುವರಿ ಆದಾಯವನ್ನು ಮತ್ತು ಖನಿಜವಿರುವ ಭೂಮಿಗಳ ಮೇಲಿನ ತೆರಿಗೆ ಪ್ರಕಾರ ಪ್ರತಿ ವರ್ಷ ಸುಮಾರು ರೂ. 505.9 ಕೋಟಿ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಿದೆ.


Tags:    

Similar News