ಬಜೆಟ್ ಪಶ್ಚಿಮ ಬಂಗಾಳವನ್ನು ಸಂಪೂರ್ಣ ನಿರ್ಲಕ್ಷಿಸಿದೆ: ಮಮತಾ ಬ್ಯಾನರ್ಜಿ
ಮಂಗಳವಾರ (ಜುಲೈ 23) ಮಂಡಿಸಿರುವ ಕೇಂದ್ರ ಬಜೆಟ್ ಇದೀಗ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೊಂಡಿದೆ. ಈ ಆರೋಪವನ್ನು ಬಿಜೆಪಿ ವಿರೋಧಿಸಿದೆ.
ವಿವಾದಕ್ಕೀಡಾದ ಪೂರ್ವೋದಯ ಎಂಬ ಹೊಸ ಯೋಜನೆ:
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಪೂರ್ವ ರಾಜ್ಯಗಳ ಅಭಿವೃದ್ಧಿಗಾಗಿ ಸೀತಾರಾಮನ್ ಅವರು ವಿಕಾಸ್ ಭಿ, ವಿರಾಸತ್ ಭಿ ಘೋಷಿಸಿದ್ದಾರೆ.
ಬಂಗಾಳದ ವಿರುದ್ಧ ಪಕ್ಷಪಾತ
ಈ ಯೋಜನೆಯು ಮಾನವ ಸಂಪನ್ಮೂಲ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಆರ್ಥಿಕ ಅವಕಾಶಗಳ ಉತ್ಪಾದನೆಯನ್ನು ಕಲ್ಪಿಸುತ್ತದೆ. ಆದರೆ ಯೋಜನೆಯಡಿ ಘೋಷಿಸಲಾದ ನಿರ್ದಿಷ್ಟ ಯೋಜನೆಗಳು ಪಶ್ಚಿಮ ಬಂಗಾಳದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ. ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಯೋಜನೆಗಳು ಹೆಚ್ಚಾಗಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಸೇರಿವೆ ಎಂದು ಮಮತಾ ಆರೋಪಿಸಿದ್ದಾರೆ.
ʻʻಯಾವುದೇ ರಾಜ್ಯಕ್ಕೆ ವಿಶೇಷ ಗಮನ ನೀಡುವುದರ ವಿರುದ್ಧ ನನ್ನ ವಿರೋಧವಿಲ್ಲ, ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯವನ್ನು ನಿರ್ಲಕ್ಷಿಸುವು ಸರಿಯಲ್ಲʼʼ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಹಾರ, ಅಸ್ಸಾಂ, ಸಿಕ್ಕಿಂ ಮತ್ತು ಇತರ ರಾಜ್ಯಗಳಲ್ಲಿ ದೀರ್ಘಕಾಲಿಕ ಪ್ರವಾಹ ಸಮಸ್ಯೆಗಳನ್ನು ಪರಿಹರಿಸಲು ಬಜೆಟ್‌ನಲ್ಲಿ ಘೋಷಿಸಲಾದ ವಿಶೇಷ ಆರ್ಥಿಕ ಬೆಂಬಲ ನೀಡಲಾಗಿದೆ. ಆದರೆ ಬಂಗಾಳವು ಪ್ರವಾಹ ಪೀಡಿತ ರಾಜ್ಯವಾಗಿದ್ದರೂ, ವಿಶೇಷ ಆರ್ಥಿಕ ಬೆಂಬಲದಿಂದ ವಂಚಿತವಾಗಿದೆ ಎಂದು ಟಿಎಂಸಿ ಹೇಳಿದೆ.
''ಬಜೆಟ್‌ನಲ್ಲಿ ಬಂಗಾಳವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಜೆಟ್ ರಾಜಕೀಯ ಪಕ್ಷಪಾತದಿಂದ ಕೂಡಿದೆ” ಎಂದು ಬ್ಯಾನರ್ಜಿ ಕಿಡಿಕಾರಿದ್ದಾರೆ.
MGNREGA ಮತ್ತು PMAY ನಂತಹ ಹಲವಾರು ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯಕ್ಕೆ ಇನ್ನೂ 1.71 ಲಕ್ಷ ಕೋಟಿ ರೂ. ಹಣ ಪಾವತಿಯಾಗಬೇಕು ಎಂದು ಹೇಳುವ ಮೂಲಕ ಬಜೆಟ್‌ನಲ್ಲಿ ಆಗಿರುವ ತಾರತಮ್ಯವನ್ನು TMC ಲಿಂಕ್ ಮಾಡಿದೆ.
ʻʻಈ ಬಿಜೆಪಿ ಸರ್ಕಾರದಿಂದ ಬಂಗಾಳವು ಹೇಗೆ ನಿರಂತರವಾಗಿ ವಂಚಿತವಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಬಂಗಾಳವನ್ನು ನಿರಂತರವಾಗಿ ಹಿಂಸಿಸಲಾಯಿತು ಮತ್ತು ವಂಚಿತಗೊಳಿಸಲಾಗಿದೆʼʼ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ಬಿಜೆಪಿಯನ್ನು ದೂಷಿಸಿದೆ
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ʻಜೋ ಹುಮಾರೆ ಸಾಥ್, ಹಮ್ ಉಂಕೆ ಸಾಥ್ʼ (ನಮ್ಮೊಂದಿಗೆ ಇರುವವರ ಜೊತೆ ನಾವಿದ್ದೇವೆ) ಎಂಬ ಇತ್ತೀಚಿನ ಹೇಳಿಕೆಯನ್ನು ಬಜೆಟ್ ಪ್ರತಿಬಿಂಬಿಸುತ್ತದೆ ಎಂದು ಅಭಿಷೇಕ್ ಹೇಳಿದರು .
ಪಕ್ಷವು ಸಬ್ಕಾ ಸಾಥ್ ಸಬ್ಕಾ ವಿಕಾಸ್ ನೀತಿಗೆ ಕಡಿವಾಣ ಹಾಕಬೇಕು ಮತ್ತು ಬದಲಿಗೆ ಜೋ ಹುಮಾರೆ ಸಾಥ್, ಹಮ್ ಉಂಕೆ ಸಾಥ್ ನೀತಿಯನ್ನು ಅನುಸರಿಸಬೇಕು ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಧಿಕಾರಿ ಬಿಜೆಪಿ ಸಭೆಯಲ್ಲಿ ಸಲಹೆ ನೀಡಿದ್ದರು.
"ಬಂಗಾಳ ಯಾವಾಗಲೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಿಂದ ಮುನ್ನಡೆಸಿದೆ ಮತ್ತು ಧೀಮಂತರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಹುಟ್ಟುಹಾಕಿದೆ ... ಆದರೆ ಅದೇ ಬಂಗಾಳ ಇಂದು ವಂಚಿತವಾಗಿದೆ ಮತ್ತು ಬಂಗಾಳದ ಜನರು ಖಂಡಿತವಾಗಿಯೂ ತಕ್ಕ ಉತ್ತರವನ್ನು ನೀಡುತ್ತಾರೆ" ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಹೇಳಿದರು.
ಬಿಜೆಪಿಗರ ಸಮರ್ಥನೆ:
ಬಜೆಟ್ ಅನ್ನು ಟಿಎಂಸಿ ಪಕ್ಷ ರಾಜಕೀಯವಾಗಿ ಅಸ್ತ್ರಗೊಳಿಸುತ್ತಿದೆ ಎಂದು ಅರಿತ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ತಮ್ಮ ಪಕ್ಷದ ನೇತೃತ್ವದ ಮೋದಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಹರಸಾಹಸಪಟ್ಟರು.
ʻʻಒಟ್ಟಾರೆ ಬಜೆಟ್‌ನಿಂದ ಬಂಗಾಳಕ್ಕೆ ಲಾಭವಾಗಲಿದೆ. ಉದಾಹರಣೆಗೆ, ಸಿಕ್ಕಿಂನಲ್ಲಿ ತೀಸ್ತಾ ನದಿಗೆ ಪ್ರವಾಹ ನಿಯಂತ್ರಣ ಕ್ರಮ ಕೈಗೊಂಡರೆ, ಬಂಗಾಳಕ್ಕೂ ಲಾಭವಾಗುತ್ತದೆ. ಅದೇ ರೀತಿ, ಬಜೆಟ್‌ನಲ್ಲಿ ವಿವರಿಸಿರುವ ಇತರ ಸಾಮಾನ್ಯ ಯೋಜನೆಗಳು ಮತ್ತು ನೀತಿಗಳಿಂದ ರಾಜ್ಯವು ಸಹ ಪ್ರಯೋಜನ ಪಡೆಯುತ್ತದೆʼʼ ಎಂದು ಅವರು ಹೇಳಿದರು.