‘ಕಾಲ್ ಗರ್ಲ್’ ಎಂದು ಯುವತಿ ನಂಬರ್‌ ದುರ್ಬಳಕೆ: ಪಿಜಿ ಓನರ್‌ ಅರೆಸ್ಟ್‌

‘ಕಾಲ್ ಗರ್ಲ್’ ಎಂದು ಹೇಳಿ ಮಹಿಳೆಯೊಬ್ಬರ ಫೋನ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪೇಯಿಂಗ್ ಗೆಸ್ಟ್‌ ಮಾಲೀಕರೊಬ್ಬರನ್ನು ಬೆಂಗಳೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Update: 2024-07-09 07:48 GMT
ಯುವತಿಯ ಪೋನ್‌ ನಂಬರ್‌ ದರ್ಬಳಕೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Click the Play button to listen to article

‘ಕಾಲ್ ಗರ್ಲ್’ ಎಂದು ಹೇಳಿಕೊಂಡು ಮಹಿಳೆಯೊಬ್ಬರ ಫೋನ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪೇಯಿಂಗ್ ಗೆಸ್ಟ್ ಮಾಲೀಕರನ್ನು ಬೆಂಗಳೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆರೋಪಿಯನ್ನು ಬೆಂಗಳೂರಿನ ರಾಜಾಜಿನಗರದ ನಿವಾಸಿ ಆನಂದ್ ಶರ್ಮಾ (30) ಎಂದು ಗುರುತಿಸಲಾಗಿದೆ. ಶರ್ಮಾ ಶಿವಾನಂದ್ ವೃತ್ತದಲ್ಲಿ ವಿ-ಸ್ಟೇಜ್ ಪಿಜಿ ಎಂಬ ಪಿಜಿ ನಡೆಸುತ್ತಿದ್ದಾರೆ.

ಘಟನೆಯ ವಿವರ

ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬರು ವಸತಿಗಾಗಿ ಅವರನ್ನು ಸಂಪರ್ಕಿಸಿದ್ದರು. ಆತ ಮಹಿಳೆಯಿಂದ ಮುಂಗಡವಾಗಿ ಹಣವನ್ನು ಪಡೆದು ಪಿಜಿ ನೋಡಲು ಬರುವಂತೆ ಹೇಳಿದ್ದ. ಮಹಿಳೆ ಪಿಜಿಗೆ ಭೇಟಿ ನೀಡಿದಾಗ ಆಕೆಗೆ ಪಿಜಿ ಯೋಗ್ಯವೆನಿಸಿಲ್ಲ. ಹೀಗಾಗಿ ಆಕೆ ಮುಂಗಡ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು. ಆದರೆ ಮುಂಗಡ ವಾಪಸ್‌ ಮಾಡಲು ಪಿಜಿ ಓನರ್‌ ನಿರಾಕರಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಮಹಿಳೆ ಪಿಜಿ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಮತ್ತು ಇತರರನ್ನು ಎಚ್ಚರಿಕೆಯಿಂದ ಇರುವಂತೆ ಕೇಳಿಕೊಂಡಿದ್ದರು. ಆಕೆಯ ಕೃತ್ಯಕ್ಕೆ ಪ್ರತೀಕಾರವಾಗಿ, ಆರೋಪಿಯು ‘ಕಾಲ್ ಗರ್ಲ್’ ಎಂದು ಆಕೆಯ ಮೊಬೈಲ್‌ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡು ಜಾಹೀರಾತು ಪೋಸ್ಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದಾಗಿ ಮಹಿಳೆಗೆ ನಿರಂತರ ಕರೆ ಬಂದ ಬಳಿಕ ಈಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಅದು ಪಿಜಿ ಮಾಲೀಕನ ಕೃತ್ಯ ಎಂದು ಗೊತ್ತಾಗಿದೆ. ಶರ್ಮಾ ತಾನೇ ಅಪರಾಧ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸದ್ಯ ಆರೋಪಿಯ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Tags:    

Similar News