Actor Darshan Case | ನಟ ದರ್ಶನ್‌ಗೆ A2ನಿಂದ A1 ಬಡ್ತಿ ನೀಡಿ ಚಾರ್ಜ್​ಶೀಟ್?

ದರ್ಶನ್ ಅವರನ್ನೇ ಎ1 ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ರೇಣುಕಾ ಸ್ವಾಮಿ ಕೇಸಿನಲ್ಲಿ ದರ್ಶನ್ ಎ2 ಆಗಿದ್ದರು. ನಟಿ ಪವಿತ್ರಾ ಗೌಡ ಎ1 ಆಗಿದ್ದರು.

Update: 2024-08-22 08:23 GMT
ನಟ ದರ್ಶನ್‌ ಅವರನ್ನು a1 ಆರೋಪಿ ಮಾಡಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು, ಕೋರ್ಟ್‌ಗೆ ಚಾರ್ಜ್​ಶೀಟ್​ ಸಲ್ಲಿಸಲು ಮುಂದಾಗಿದ್ದು, ದರ್ಶನ್ ಅವರನ್ನೇ ಎ1 ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದರು. ನಟಿ ಪವಿತ್ರಾ ಗೌಡ ಎ1 ಆಗಿದ್ದರು.

ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕಿದ್ದು, ಅವರೇ ಕೊಲೆ ಮಾಡಿಸಿರುವುದು ಎಂಬುದು ಬಹುತೇಕ ಖಚಿತವಾಗಿದೆ. ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಇರುವುದರಿಂದ ಕೇಸ್‌ನಲ್ಲಿ ಎ1 ಆಗಲಿದ್ದಾರೆ. A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ರೇಣುಕಾಸ್ವಾಮಿ ಕೈ ಮುಗೀತಿರೋ ಫೋಟೋ ರಿಟ್ರೀವ್

ಕೊಲೆ ಕೇಸ್‌ನಲ್ಲಿ ಆರೋಪಿಗಳ ಮೊಬೈಲ್ ಡೇಟಾ ರಿಟ್ರೀವ್ ಮಾಡಲಾಗಿದೆ. ಇದರಲ್ಲಿ ರೇಣುಕಾ ಸ್ವಾಮಿಯ 4 ಫೋಟೋಗಳು ಸಿಕ್ಕಿವೆ. ಸಾಯುವುದಕ್ಕೂ ಮುನ್ನ ಆತ ಕೈ ಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ಇದಾಗಿದೆ. ನಾಲ್ಕು ಮತ್ತು ಎಂಟು ಸೆಕೆಂಡಿನ ಎರಡು ವಿಡಿಯೋಗಳನ್ನು ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಮರು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರದೋಶ್ ಮತ್ತು ಇನ್ನೋರ್ವನ ಮೊಬೈಲ್‌ನಿಂದ ಈ ಫೋಟೋ ರಿಟ್ರೀವ್ ಆಗಿದ್ದು, ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ.

ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವ ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ಪೋಟೋ, ವಿಡಿಯೋಗಳನ್ನು ಚಿತ್ರೀಕರಿಸಿದ್ದರು. ಆತ ಮೃತಪಟ್ಟ ಬಳಿಕ ಮೊಬೈಲ್‌ ಶಾಪ್‌ಗೆ ಹೋಗಿ ಫೋಟೋ, ವಿಡಿಯೋಗಳನ್ನು ಡಿಲೀಟ್‌ ಮಾಡಿದ್ದಾರೆ. ಇದೀಗ ಈ ಎಲ್ಲಾ ಸಾಕ್ಷ್ಯಗಳನ್ನು ರಿಟ್ರೀವ್ ಮಾಡಿದ್ದಾರೆ. 

ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ 3ರಿಂದ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

ಜೈಲು ಮುಂದೆ ಉರುಳು ಸೇವೆಗೆ ಮುಂದಾದ ಅಭಿಮಾನಿ

ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ಇದೀಗ ದರ್ಶನ್​ ಅಭಿಮಾನಿಯೊಬ್ಬ ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ಉರುಳು ಸೇವೆ ಮಾಡಲು ಮುಂದಾಗಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿ ಮಾತಾಡಿರುವ ʼನಮ್ಮ ಕರುನಾಡು ಯುವ ಸೇನೆʼ ಎಂಬ ಸಂಘಟನೆಯ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ರವಿಕುಮಾರ್​ ಎಂಬ ವ್ಯಕ್ತಿ, "ದರ್ಶನ್​ ಅವರನ್ನು ರಿಲೀಸ್​ ಮಾಡಬೇಕು ಎಂದು ಒತ್ತಾಯಿಸಿ ಆ.23ರಂದು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಒಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್​ ಅಭಿಮಾನಿಗಳು ಭಾಗಿಯಾಗಬೇಕು" ಎಂದು ಮನವಿ ಮಾಡಿದ್ದಾರೆ.

ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಪೋಸ್ಟ್‌ಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಆತನಿಗೆ ಚಿತ್ರಹಿಂಸೆ ಕೊಲೆ ಮಾಡಿ ರಾಜಕಾಲುವೆಗೆ ಮೃತದೇಹವನ್ನು ಎಸೆದಿದ್ದರು ಎಂಬ ಆರೋಪ ದರ್ಶನ್‌ ಮತ್ತು ಗ್ಯಾಂಗ್‌ ಮೇಲಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್‌, ಆತನ ಪೇಯಸಿ ಪವಿತ್ರಾ ಗೌಡ ಸೇರಿದಂತೆ ಹದಿನೇಳು ಮಂದಿ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಮತ್ತು ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.

Tags:    

Similar News