ಜೈಲಿನಲ್ಲಿ ಸಿಗರೇಟ್ ಹಿಡಿದ ದರ್ಶನ್ ಫೋಟೋ ವೈರಲ್

ಕೊಲೆ ಆರೋಪದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ದರ್ಶನ್​ ಅವರ ಒಂದು ಫೋಟೋ ವೈರಲ್​ ಆಗಿದೆ.;

Update: 2024-08-25 14:17 GMT
ದರ್ಶನ್ ವೈರಲ್ ಫೋಟೋ
Click the Play button to listen to article

ಕೊಲೆ ಆರೋಪದಲ್ಲಿ ನಟ ದರ್ಶನ್​ ಜೈಲು ಸೇರಿದ್ದು,  ದರ್ಶನ್​ ಅವರ ಒಂದು ಫೋಟೋ ವೈರಲ್​ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್​ ಆಗಿರುವ ಫೋಟೋದಿಂದ ದರ್ಶನ್‌ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ.

ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪದಡಿ ನಟ  ದರ್ಶನ್​ ಮೇಲಿದೆ ಪರಪ್ಪನ ಅಗ್ರಹಾರದ ಸ್ಪೆಷಲ್​ ಬ್ಯಾರಕ್​ನಲ್ಲಿ ಇರಿಸಲಾಗಿದೆ. ದರ್ಶನ್​ ಅವರು ಸ್ಪೆಷಲ್​ ಬ್ಯಾರಕ್​ನಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ ಮಗ್​ ಹಿಡಿದುಕೊಂಡು ಅವರು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟ್​ ಕೂಡ ಇದೆ. ಈ ಫೋಟೋ ವೈರಲ್​ ಆಗಿದೆ. 

ಜೈಲಿನಲ್ಲಿ ದರ್ಶನ್​ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಫೋಟೋ ನೋಡಿದ ಬಳಿಕ ಅದು ಖಚಿತವಾಗಿದೆ. ಅವರ ವಿಗ್​ ಕೂಡ ತೆಗೆಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ  ದರ್ಶನ್​ ಹಾಗೂ ಗ್ಯಾಂಗ್​ ವಿರುದ್ಧ ಈಗಾಗಲೇ ಅನೇಕ ಬಗೆಯ ಸಾಕ್ಷಿಗಳು ಸಿಕ್ಕಿವೆ. ಇನ್ನೇನು ಕೆಲವೇ ದಿನಗಳಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಪ್ರಕರಣದ ತನಿಖೆ ಆರಂಭ ಆದಾಗ ದರ್ಶನ್​ ಅವರು ಎ2 ಆಗಿದ್ದರು. ಆದರೆ ಚಾರ್ಚ್​ಶೀಟ್​ ಸಲ್ಲಿಸುವ ಹಂತದಲ್ಲಿ ಅವರನ್ನು ಎ1 ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ. 

ರೌಡಿಶೀಟರ್‌ರೊಂದಿಗೆ ದರ್ಶನ್‌  ಸಹವಾಸ?

ವೈರಲ್‌ ಆಗಿರುವ ಚಿತ್ರದಲ್ಲಿ ನಟ ದರ್ಶನ್‌ ರೌಡಿಶೀಟರ್​ಗಳ ಸಹವಾಸ ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ. ಫೋಟೋದಲ್ಲಿ ದರ್ಶನ್​ ಅವರು ರೌಡಿಶೀಟರ್​ ನಾಗನ ಜೊತೆ ಕುಳಿತು ಸಿಗರೇಟ್​ ಸೇದುತ್ತಾ ಇರುವುದು ಕಾಣಿಸಿದೆ. ದರ್ಶನ್​ ಜೊತೆ ಫೋಟೋದಲ್ಲಿ ಇರುವುದು ನಟೋರಿಯಸ್​ ಕ್ರಿಮಿನಲ್​ ವಿಲ್ಸನ್​ ಗಾರ್ಡನ್​ ನಾಗ. ವಿಲ್ಸನ್ ಗಾರ್ಡನ್ ನಾಗ ಎಂಬ ಆತ ಬೆಂಗಳೂರು ದಕ್ಷಿಣ ವಿಭಾಗದ ರೌಡಿಶೀಟರ್. ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ನಾಗ ಜೈಲುಪಾಲಾಗಿದ್ದಾನೆ. ಕಳೆದ ಆಗಸ್ಟ್​ನಲ್ಲಿ ಕೋರ್ಟ್​ಗೆ ವಿಲ್ಸನ್ ಗಾರ್ಡನ್ ನಾಗ ಶರಣಾಗಿದ್ದ. ಆತನ ವಿರುದ್ಧ ಕೋಕಾ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿತ್ತು. ದರ್ಶನ್​ ಜೈಲಿಗೆ ಹೋದಾಗ ವಿಲ್ಸನ್ ಗಾರ್ಡನ್ ನಾಗನ ಭೇಟಿಗೆ ಮುಂದಾಗಿದ್ದರು. ಈಗ ನಾಗನ ಜೊತೆ ಟೀ, ಸಿಗರೇಟ್ ಶೇರ್ ಮಾಡುತ್ತಿರುವ ದರ್ಶನ್ ಫೋಟೋ ಹೊರಬಂದಿದೆ.

ದರ್ಶನ್ ಪಕ್ಕದಲ್ಲೇ ಕುಳಿತಿರುವ ಮತ್ತೊಬ್ಬ ಆರೋಪಿ ನಾಗರಾಜ್. ಈತ ದರ್ಶನ್​ ಮ್ಯಾನೇಜರ್​. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 11ನೇ ಆರೋಪಿಯಾಗಿ ನಾಗರಾಜ್​ ಜೈಲು ಸೇರಿದ್ದಾನೆ. ದರ್ಶನ್​ ಮಾಡುವ ಪಾರ್ಟಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಈಗ ಜೊತೆಗಿರುತ್ತಿದ್ದ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಾಗ ಕಾಲಿನಿಂದ ಒದ್ದಿದ್ದು ಇದೇ ನಾಗ. ಹಾಗಾಗಿ ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್​ನಲ್ಲಿ ನಾಗನದ್ದು ಪ್ರಮುಖ ಪಾತ್ರವಿತ್ತು ಎನ್ನಲಾಗಿದೆ.

Tags:    

Similar News