ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ ಕ್ಷಮೆ ಕೇಳಿದ ವ್ಯಕ್ತಿ
ʼಸಲ್ಮಾನ್ ಖಾನ್ ಹತ್ಯೆ ಬಾಬಾ ಸಿದ್ಧಿಕಿ ಹತ್ಯೆಗಿಂತಲೂ ಭೀಕರವಾಗಿರುತ್ತದೆ’ ಎನ್ನುವ ಸಂದೇಶ ಬಂದಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರೇ ಮಾಡಿರಬಹುದು ಎಂದು ಊಹಿಸಲಾಗಿತ್ತು.;
ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆಗಳು ಹೆಚ್ಚಾಗಿವೆ.
ಇತ್ತೀಚೆಗೆ ‘ಸಲ್ಮಾನ್ ಖಾನ್ ಹತ್ಯೆ ಬಾಬಾ ಸಿದ್ಧಿಕಿ ಹತ್ಯೆಗಿಂತಲೂ ಭೀಕರವಾಗಿರುತ್ತದೆ’ ಎನ್ನುವ ಸಂದೇಶ ಬಂದಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರೇ ಮಾಡಿರಬಹುದು ಎಂದು ಊಹಿಸಲಾಗಿತ್ತು. ಬಳಿಕ ಪ್ರಕರಣ ಸೆಟಲ್ ಮಾಡಲು ಐದು ಕೋಟಿ ರೂಪಾಯಿ ನೀಡುವಂತೆ ಸಂದೇಶ ಕಳಿಸಿದಾತ ಬೇಡಿಕೆ ಇಟ್ಟಿದ್ದ. ಈಗ ಅದೇ ವ್ಯಕ್ತಿ ಕ್ಷಮೆ ಕೇಳಿದ್ದಾನೆ.
ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂಪಾಯಿಗೆ ಬೇಡಿಕೆಯಿಡುವ ಬೆದರಿಕೆ ಸಂದೇಶವನ್ನು ಕಳುಹಿಸಲು ಬಳಸಲಾದ ಮೊಬೈಲ್ ಫೋನ್ ಸಂಖ್ಯೆಯಿಂದ ಮುಂಬೈ ಸಂಚಾರ ಪೊಲೀಸರಿಗೆ ಮೆಸೇಜ್ ಬಂದಿದ್ದು, ಈ ಮೆಸೇಜ್‌ನಲ್ಲಿ ‘ನನ್ನ ಸಂದೇಶ ಮಿಸ್ ಆಗಿ ಹೋಗಿದೆ. ಈ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದು ಆತ ಈಗ ಸಂದೇಶ ಕಳುಹಿಸಿದ್ದಾನೆ. ಇದಾದ ಬಳಿಕವೂ ಪೊಲೀಸರು ಪ್ರಕರಣವನ್ನು ಹಗುರವಾಗಿ ಸ್ವೀಕರಿಸಿಲ್ಲ. ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಸಂದೇಶ ಬಂದಿದ್ದು ಜಾರ್ಖಂಡದಿಂದ ಎನ್ನಲಾಗಿದೆ. ಆ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಕ್ಷಮೆ ಕೇಳಿದ ಹೊರತಾಗಿಯೂ ಆತನ ಬಂಧನಕ್ಕೆ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಲ್ಮಾನ್ ಖಾನ್‌ಗೆ ಈ ರೀತಿ ಬೆದರಿಕೆ ಬಂದಿರೋದು ಇದೇ ಮೊದಲೇನು ಅಲ್ಲ. ಇದಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ನಡೆದಿವೆ. ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು. ಈ ವರ್ಷದ ಏಪ್ರಿಲ್‌ನಲ್ಲಿ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಸಲ್ಮಾನ್ ಖಾನ್ ಬಾಂದ್ರಾದ ಮನೆ ಹೊರಗಡೆ ಗುಂಡಿನ ದಾಳಿ ನಡೆಸಿದ್ದರು. ಕೆಲವು ತಿಂಗಳ ಹಿಂದೆ ಖಾನ್‌ನನ್ನು ಕೊಲ್ಲಲು ಬಿಷ್ಣೋಯ್ ಗ್ಯಾಂಗ್ ನಡೆಸಿದ ಸಂಚನ್ನು ನವಿ ಮುಂಬೈ ಪೊಲೀಸರು ಬೇಧಿಸಿದ್ದರು.