ಕೊಳವೆ ಬಾವಿಗೆ ಬಿದ್ದು ಐದು ವರ್ಷದ ಬಾಲಕನ ದುರ್ಮರಣ

ಗುರುವಾರ ರಾತ್ರಿ ಬಾಲಕನನ್ನು ಬೋರ್​ವೆಲ್​ನಿಂದ ಹೊರತೆಗೆಯಲಾಯಿತು ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

Update: 2024-12-12 08:35 GMT
ಬೋರ್​ವೆಲ್​ ದುರಂತ

ರಾಜಸ್ಥಾನದ ದೌಸಾದಲ್ಲಿ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಆರ್ಯನ್ ಮೃತಪಟ್ಟ ಬಾಲಿ. 57 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕವೂ ಆತನನ್ನು ಜೀವಂತವಾಗಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.

ಗುರುವಾರ ರಾತ್ರಿ ಬಾಲಕನನ್ನು ಬೋರ್​ವೆಲ್​ನಿಂದ ಹೊರತೆಗೆಯಲಾಯಿತು ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಸುಧಾರಿತ ಲೈಫ್ ಸಪೋರ್ಟ್ ಸಿಸ್ಟಮ್ ಹೊಂದಿರುವ ಆಂಬ್ಯುಲೆನ್ಸ್ ನಲ್ಲಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ (ಡಿಸೆಂಬರ್ 9) ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಳಿಖಡ್ ಗ್ರಾಮದ ಹೊಲದಲ್ಲಿ ಆಟವಾಡುತ್ತಿದ್ದ ಆರ್ಯನ್ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ. ವಿಷಯ ಗೊತ್ತಾದ ಒಂದು ಗಂಟೆ ನಂತರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿತ್ತು.

ಜಮೀನಿನಲ್ಲಿ ಆಟವಾಡುತ್ತಿದ್ದ ಆರ್ಯನ್ ಆಕಸ್ಮಿಕವಾಗಿ ತಾಯಿಯ ಮುಂದೆಯೇ ಕೊಳವೆಬಾವಿಗೆ ಬಿದ್ದಿದ್ದಾನೆ. ರಕ್ಷಣಾ ತಂಡ ಅಲ್ಲಿಗೆ ತಲುಪಿದ ಕೂಡಲೇ ಪೈಪ್ ಮೂಲಕ ಆಮ್ಲಜನಕ ಪೂರೈಕೆ ಪ್ರಾರಂಭಿಸಲಾಯಿತು. ಬಾಲಕನ ಚಲನೆಯನ್ನು ಗಮನಿಸಲು ಕ್ಯಾಮೆರಾ ಇರಿಸಲಾಯಿತು.

ಸಮಾನಾಂತರ ಸುರಂಗ ಅಗೆಯಲು ಜೆಸಿಬಿಗಳು, ಡ್ರಿಲ್ಲಿಂಗ್ ಯಂತ್ರಗಳು ಮತ್ತು ಪೈಲಿಂಗ್ ರಿಗ್​ಗಳನ್ನು ಬಳಸಲಾಯಿತು. ಕಾರ್ಯಾಚರಣೆ ಸವಾಲಿನಿಂದ ಕೂಡಿತ್ತು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್​​ಡಿಆರ್​ಎಫ್​) ಸಿಬ್ಬಂದಿ ಪ್ರಕಾರ, ಈ ಪ್ರದೇಶದಲ್ಲಿ ನೀರಿನ ಮಟ್ಟವು ಸುಮಾರು 160 ಅಡಿಯಲ್ಲಿತ್ತು. ಮಗುವಿನ ಚಲನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲೂ ಸಾಧ್ಯವಾಗುತ್ತಿಲಿಲ್ಲ. ಸಿಬ್ಬಂದಿಯ ಸುರಕ್ಷತೆಯೂ ಆತಂಕವಾಗಿತ್ತು. ಆದಾಗ್ಯೂ ರಕ್ಷಣಾ ತಂಡ ಮಗುವನ್ನು ಮೆಲಕ್ಕೆ ಎತ್ತಿತ್ತು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರ್ಯನ್​ನನ್ನು ಆಸ್ಪತ್ರೆಗೆ ಸಾಗಿಸಿದರೂ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಘೋಷಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ದೌಸಾದ ಬಂಡಿಕುಯಿ ಪ್ರದೇಶದಲ್ಲಿ 35 ಅಡಿ ಆಳದ ತೆರೆದ ಕೊಳವೆಬಾವಿಯಿಂದ ಎರಡು ವರ್ಷದ ಬಾಲಕಿಯನ್ನು ರಕ್ಷಿಸಲಾಗಿತ್ತು. ಎನ್​​ಡಿಆರ್​ಎಫ್​ ಮತ್ತು ಎಸ್​​ಡಿಆರ್​​ಎಫ್​ ಬಾಲಕಿಯನ್ನು ರಕ್ಷಿಸಲು 18 ಗಂಟೆ ತೆಗೆದುಕೊಂಡಿತ್ತು.

Tags:    

Similar News