Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್; ಸುನಿತಾ ವಿಲಿಯಮ್ಸ್, ವಿಲ್ಮೋರ್ ಸುರಕ್ಷಿತ
ಡ್ರಾಗನ್ ಕ್ಯಾಪ್ಸೂಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮಂಗಳವಾರ ಮುಂಜಾನೆ 1:05 AM (ET) ಗಂಟೆಗೆ ಹೊರಟಿತು. ನಂತರ, ಅದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮೊದಲು ಸುಮಾರು 17 ಗಂಟೆಗಳ ಕಾಲ ಪ್ರಯಾಣಿಸಿತು.;
ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿದ್ದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸೂಲ್ ಮಂಗಳವಾರ ಸಂಜೆ (ಭಾರತದ ಕಾಲಮಾನ ಬುಧವಾರ ಮುಂಜಾನೆ) ಫ್ಲೋರಿಡಾದ ಗಲ್ಫ್ ಕರಾವಳಿಯ ಬಳಿಯ ಸಮುದ್ರ ನೀರಿನಲ್ಲಿ ಸುರಕ್ಷಿತವಾಗಿ ಇಳಿದಿದೆ. ನಾಸಾದ ಇಬ್ಬರು ಖಗೋಳವಿಜ್ಞಾನಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಯಾವುದೇ ಸಮಸ್ಯೆ ಇಲ್ಲದೇ ಭೂಮಿಗೆ ಹಿಂದಿರುಗಿದರು. ಇದು ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿಯಾಗಿ ಪಡೆದಿರುವ ಯಶಸ್ಸಾಗಿದೆ.
ಡ್ರ್ಯಾಗನ್ ಕ್ಯಾಪ್ಸೂಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮಂಗಳವಾರ ಮುಂಜಾನೆ 1:05 AM (ET) ಗಂಟೆಗೆ ಹೊರಟಿತು. ನಂತರ, ಅದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮೊದಲು ಸುಮಾರು 17 ಗಂಟೆಗಳ ಕಾಲ ಪ್ರಯಾಣಿಸಿತು. ಕ್ಯಾಪ್ಸೂಲ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ, ಗರಿಷ್ಠ ಘರ್ಷಣೆ ಹಾಗೂ ಶಾಖವನ್ನು ಎದುರಿಸಿತು. ಆದರೆ ಅದರ ಶೀತಲೀಕರಣ ವ್ಯವಸ್ಥೆ ಮತ್ತು ಶೀಲ್ಡ್‌ಗಳು ಅದನ್ನು ನೌಕೆಯನ್ನು ರಕ್ಷಿಸಿದವು. ನಂತರ, ಪ್ಯಾರಾಚೂಟ್‌ಗಳು ತೆರೆದುಕೊಂಡು, ಕ್ಯಾಪ್ಸೂಲ್‌ನ ವೇಗವನ್ನು ಕಡಿಮೆ ಮಾಡಿದವು. ಅಂತಿಮವಾಗಿ, ಅದು ಮಂಗಳವಾರ ಸಂಜೆ 5:57 PM (ET) ಗಂಟೆಗೆ ಫ್ಲೋರಿಡಾದ ಪೆನ್ಸಕೋಲಾ ಬಳಿ ನೀರಿನಲ್ಲಿ ಇಳಿಯಿತು.
ಕ್ಯಾಪ್ಸೂಲ್ ನೀರಿನಲ್ಲಿ ಇಳಿದ ನಂತರ, ಸ್ಪೇಸ್‌ಎಕ್ಸ್ ಮತ್ತು ನಾಸಾ ತಂಡಗಳು ತಕ್ಷಣವೇ ಅದನ್ನು ಮರುಪಡೆದು, ಖಗೋಳವಿಜ್ಞಾನಿಗಳನ್ನು ಹಡಗಿನ ಮೇಲೆ ಇಳಿಸಿದರು. ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರು ಸುರಕ್ಷಿತರಾಗಿದ್ದಾರೆ ಮತ್ತು ಆರೋಗ್ಯ ಉತ್ತಮವಾಗಿದೆ ಎಂದು NASA ತಿಳಿಸಿದೆ. ಅವರನ್ನು ಈಗ ಹೌಸ್ಟನ್‌ನಲ್ಲಿರುವ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗಳು ಮತ್ತು ಮೆಡಿಕಲ್ ಚೆಕ್‌ಅಪ್‌ಗಳಿಗೆ ಒಳಪಡುತ್ತಾರೆ.
ಸ್ಪೇಸ್‌ಎಕ್ಸ್ ಮತ್ತು NASAನ ಜಂಟಿ ಯೋಜನೆ
ಈ ಮಿಷನ್ ಸ್ಪೇಸ್‌ಎಕ್ಸ್ ಮತ್ತು ನಾಸಾ ನಡುವಿನ ಜಂಟಿ ಸಾಧನೆಯಾಗಿದೆ. ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಅಮೆರಿಕದ ನೆಲದಿಂದ ಖಗೋಳವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಮತ್ತು ಹಿಂತಿರುಗಿಸುವ ಪರಿಪೂರ್ಣ ಸಾಮರ್ಥ್ಯ ಪಡೆದುಕೊಂಡಿದೆ. 2011ರಲ್ಲಿ ನಾಸಾ ಸ್ಪೇಸ್ ಶಟಲ್ ಯೋಜನೆ ನಿಲ್ಲಿಸಿದ ನಂತರ, ಅಮೆರಿಕನ್ ಖಗೋಳವಿಜ್ಞಾನಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲು ರಷ್ಯನ್ ಸೊಯುಜ್ ಕ್ಯಾಪ್ಸೂಲ್‌ಗಳನ್ನು ಅವಲಂಬಿಸಬೇಕಾಗಿತ್ತು. ಸ್ಪೇಸ್‌ಎಕ್ಸ್‌ನ ಯಶಸ್ಸು ರಷ್ಯಾ ಅವಲಂಬನೆಯನ್ನು ಕಡಿಮೆ ಮಾಡಿದೆ.
ಸುನಿತಾ ವಿಲಿಯಮ್ಸ್‌ನ ಭಾರತೀಯ ಮೂಲ
ಸುನಿತಾ ವಿಲಿಯಮ್ಸ್ ಇದುವರೆಗೆ ಒಟ್ಟು 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆದ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಅವರ ಸಾಧನೆ ಭಾರತೀಯ ಮಹಿಳೆಯರಿಗೆ ಸ್ಪೂರ್ತಿಯಾಗಿದೆ.
ಮುಂದಿನ ಹಂತಗಳು
ನಾಸಾ ಮತ್ತು ಸ್ಪೇಸ್‌ಎಕ್ಸ್ ಮುಂದಿನ ಮಿಷನ್‌ಗಳಿಗೆ ಸಿದ್ಧತೆ ನಡೆಸುತ್ತಿವೆ. ಡ್ರ್ಯಾಗನ್ ಕ್ಯಾಪ್ಸೂಲ್‌ಗಳು ಭವಿಷ್ಯದಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೆಚ್ಚಿನ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗಲಿವೆ. ಇದು ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಎನಿಸಿಕೊಳ್ಳಲಿದೆ
ಈ ಮಿಷನ್‌ನ ಯಶಸ್ಸು ಬಾಹ್ಯಾಕಾಶ ಸಂಶೋಧನೆಯಲ್ಲಿ ಮಾನವ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸ್ಪೇಸ್‌ಎಕ್ಸ್ ಮತ್ತು ನಾಸಾದ ಸಹಯೋಜನೆಯು ಭವಿಷ್ಯದಲ್ಲಿ ಮಂಗಳ ಗ್ರಹ ಮತ್ತು ಇತರ ಗ್ರಹಗಳಿಗೆ ಮಾನವ ಯಾನವನ್ನು ಸಾಧ್ಯವಾಗಿಸಬಹುದು.
Crew-9 ಅಂತರಿಕ್ಷಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೆಲಿಕಾಪ್ಟರ್‌ಗಳ ಮೂಲಕ ಹೌಸ್ಟನ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರು ಒಂದೆರಡು ದಿನಗಳಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲಿದ್ದಾರೆ. ಅವರು ದೀರ್ಘಕಾಲ ಬಾಹ್ಯಾಕಾಶ ಕೇಂದ್ರದಲ್ಲಿ ಉಳಿದಿರುವ ಕಾರಣ ಎದುರಿಸಿರುವ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ನಾಸಾ 45 ದಿನಗಳ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಿದೆ.
ಸುನಿತಾ ಪೂರ್ವಿಕರ ಊರಲ್ಲಿ ಸಂಭ್ರಮ
ನಾಸಾ ಬಾಹ್ಯಾಕಾಶ ಸಂಶೋಧಕಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಹೊತ್ತ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ಹಿನ್ನೆಲೆಯಲ್ಲಿ ಸುನಿತಾ ಅವರ ಮೂಲ ಊರಾಗಿರುವ ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ಸಂಭ್ರಮಾಚರಣೆ ನಡೆಯಿತು.
ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಸುನಿತಾ
ನಾಸಾ ಸಂಶೋಧಕಿ ಸುನೀತಾ ವಿಲಿಯಮ್ಸ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಬಹುದು ಎಂದು ಎನ್ಡಿಟಿಎ ಬುಧವಾರ ನಡೆಸಿದ ಸಂದರ್ಶನದಲ್ಲಿ ವಿಲಿಯಮ್ಸ್ ಅವರ ಚಿಕ್ಕಮ್ಮನ ಮಗಳು ಫಲ್ಗುಣಿ ಪಾಂಡ್ಯ ಹೇಳಿದ್ದಾರೆ. ನಾವು ಒಟ್ಟಿಗೆ ರಜೆಗೆ ಹೋಗಲು ಕೂಡ ಯೋಜನೆ ಮಾಡುತ್ತಿದ್ದೇವೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲಿದೆ ಎಂದು 286 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಸುನೀತಾ ವಿಲಿಯಮ್ಸ್ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ಪಾಂಡ್ಯ ತಿಳಿಸಿದ್ದಾರೆ.
ದ ಫೆಡರಲ್ ಲೈವ್ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.
ನಾಸಾದ ಇಬ್ಬರು ಖಗೋಳವಿಜ್ಞಾನಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಯಾವುದೇ ಸಮಸ್ಯೆ ಇಲ್ಲದೇ ಭೂಮಿಗೆ ಹಿಂದಿರುಗಿದರು. ಇದು ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿಯಾಗಿ ಪಡೆದಿರುವ ಯಶಸ್ಸಾಗಿದೆ.
ಮುಂದಿನ ಪ್ರಕ್ರಿಯೆಗಳ ಎಲ್ಲಾ ವಿವರಗಳು ನಾಸಾ (NASA) ದ ಲೈವ್‌ನಲ್ಲಿ ಲಭ್ಯವಿದೆ.
ಝುಲಾಸಾನ್ ಎನ್ನುವುದು ಕೇವಲ 7 ಸಾವಿರ ಜನರಿರುವ ಪುಟ್ಟ ಹಳ್ಳಿ. ಆದರೆ, ಬಾಹ್ಯಾಕಾಶದವರೆಗೂ ತಲುಪಿರುವ ಸುನೀತಾ ವಿಲಿಯಮ್ಸ್ ಗೆ ನಮ್ಮ ನೆಲದ ನಂಟಿದೆ ಎನ್ನುವುದೇ ಈ ಹಳ್ಳಿಯ ಜನರಿಗೆ ಹೆಮ್ಮೆಯ ಸಂಗತಿ. ಇಲ್ಲಿ ಸುನೀತಾರ ಪೂರ್ವಿಕರ ಮನೆಯಿದೆ. ಜೊತೆಗೆ, ಅವರ ತಾತನ ಸ್ಮರಣಾರ್ಥ ಒಂದು ಗ್ರಂಥಾಲಯವನ್ನೂ ಇಲ್ಲಿ ನಿರ್ಮಿಸಲಾಗಿದೆ. ಹಾಗಂತ ಸುನೀತಾ ಅವರು ಇಲ್ಲಿನ ನಂಟನ್ನು ಕಳೆದುಕೊಂಡಿಲ್ಲ. ತಾವು ಬಾಹ್ಯಾಕಾಶ ವಿಜ್ಞಾನಿಯಾಗಿ, ಗಗನಯಾತ್ರಿಯಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಬಳಿಕವೂ 1972, 2007 ಮತ್ತು 2013ರಲ್ಲಿ ಸುನೀತಾ ಝುಲಾಸಾನ್ ಗ್ರಾಮಕ್ಕೆ ಬಂದಿದ್ದರು. ಇಲ್ಲಿನ ಶಾಲೆಗೆ ದೇಣಿಗೆಯನ್ನೂ ನೀಡಿದ್ದರು.
2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಮರಳಲಾರರು ಎಂಬ ಸುದ್ದಿಗಳು ಬರತೊಡಗಿದಾಗ ಈ ಹಳ್ಳಿಯ ಜನರೂ ನೊಂದಿದ್ದರು. ಸುನೀತಾರ ಸುರಕ್ಷಿತ ಆಗಮನಕ್ಕಾಗಿ ಈ ಹಳ್ಳಿಯ ಜನ ಅಂದಿನಿಂದಲೂ ನಿತ್ಯ ಪ್ರಾರ್ಥನೆ ಮಾಡುತ್ತಿದ್ದಾರೆ. ತಮ್ಮ ಭರವಸೆಯ ಪ್ರತೀಕವಾಗಿ ಊರಿನಲ್ಲಿ ದೀಪವೊಂದನ್ನು ಹಚ್ಚಿಟ್ಟು, ಅದು ಆರದಂತೆ ನೋಡಿಕೊಂಡಿದ್ದಾರೆ. ಈಗ ಸುನೀತಾ ಭೂಮಿಯತ್ತ ಪ್ರಯಾಣ ಆರಂಭಿಸಿರುವುದು, ಈ ಗ್ರಾಮಸ್ಥರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಸುನಿತಾ ಪಾಲಿಗೆ ಇದೊಂದು ಅಮೋಘ ಸಾಧನೆಯೇ ಸರಿ. ಇಂಥ ಸಾಧನೆ ಮಾಡುವುದಕ್ಕೆ ಸತತ ಪರಿಶ್ರಮ, ದೃಢ ನಿಶ್ಚಯ ಬೇಕೆ ಬೇಕು. ಕೇವಲ 8 ದಿನಗಳ ಸಂಶೋಧನೆಗೆಂದು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಅವರು. 9 ತಿಂಗಳ ಬಳಿಕ ಹಲವಾರು ಸವಾಲುಗಳನ್ನು ಎದುರಿಸಿ ಹಿಂದಿರುಗಿದ್ದು ಅವರ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಎಲ್ಲ ಸಾಧನೆಯ ನಡುವೆ ಅವರು ಭಾರತದ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಹಾರುವಂತೆ ಮಾಡಿದ್ದಾರೆ. ಯಾಕೆಂದರೆ ಸುನಿತಾ ಅವರು ಗುಜರಾತ್ ಮೂಲದವರು.
ಅಮೋಘ ಜೀವನೋತ್ಸಾಹ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಜೀವನೋತ್ಸಾಹಕ್ಕೆ ಸರಿಸಾಟಿಯೇ ಇಲ್ಲ. ವಯಸ್ಸು 59 ಆಗಿದ್ದರೂ ಅವರು ಅದನ್ನು ಲೆಕ್ಕಿಸಿರಲಿಲ್ಲ ಭೂಮಿಗೆ ಒಂದಲ್ಲ ಒಂದು ದಿನ ಮರಳುತ್ತೇನೆ, ತನ್ನವರನ್ನು ಸೇರುತ್ತೇನೆ ಎಂಬ ಅಚಲ ನಂಬಿಕೆಯಿಟ್ಟಿದ್ದರು.
ಸುನೀತಾ ಅವರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಕಾದಿದ್ದು ಕೇವಲ ನಾಸಾ ಮಾತ್ರವಲ್ಲ. ಜಗತ್ತಿನ ಮೂಲೆ ಮೂಲೆಯ ಜನರೂ ಗಗನಯಾತ್ರಿಯ ಸುರಕ್ಷಿತ ಆಗಮನದ ಸುದ್ದಿ ಕೇಳಲು ತುದಿಗಾಲಲ್ಲಿ ನಿಂತಿದ್ದರು. ಭಾರತೀಯರಂತೂ ಸುನೀತಾ ಭಾರತದಲ್ಲೇ ಬಂದಿಳಿಯುತ್ತಾರೇನೋ ಎಂದೆನಿಸುವಷ್ಟರ ಮಟ್ಟಿಗೆ ಆಕೆಗಾಗಿ ಕಾದಿದ್ದರು. ಇದಕ್ಕೆ ಕಾರಣವೂ ಇದೆ. ಸುನೀತಾ ವಿಲಿಯಮ್ಸ್ ಅವರ ಮೂಲ ಗುಜರಾತ್.
ಸುನಿತಾ ಅವರು ಹುಟ್ಟಿದ್ದು ಅಮೆರಿಕದ ಓಹಿಯೋದಲ್ಲಿ(1965ರ ಸೆಪ್ಟೆಂಬರ್ 19ರಂದು). ಅವರ ತಂದೆಯ ಹೆಸರು ದೀಪಕ್ ಪಾಂಡ್ಯಾ, ತಾಯಿ ಬೋನಿ ಪಾಂಡ್ಯಾ. ಗುಜರಾತ್‌ನ ಝುಲಾಸಾನ್ ಎಂಬ ಹಳ್ಳಿಯವರಾದ ದೀಪಕ್ ಅವರು ನರವಿಜ್ಞಾನಿಯಾಗಿದ್ದರು 1957ರಲ್ಲಿ ಗುಜರಾತ್ನಿಂದ ಅಮೆರಿಕಕ್ಕೆ ಹೋಗಿ, ಅಲ್ಲಿನವರೇ ಆದ ಬೋನಿ ಅವರನ್ನು ವಿವಾಹವಾಗಿದ್ದರು.
ಮಹಾನ್ ಸಾಧನೆ ಮಾಡಿರುವ ಸುನೀತಾ ವಿಲಿಯಮ್ಸ್(Sunitha Williams) ಅವರು ಹುಟ್ಟಿದ್ದು, ಬೆಳೆದಿದ್ದು ಅಮೆರಿಕದಲ್ಲೇ ಆದರೂ, ತಮ್ಮ ಭಾರತದ ಬೇರುಗಳನ್ನು ಕಳಚಿಕೊಂಡಿರಲಿಲ್ಲ. ಅವರು ಅಮೆರಿಕದಲ್ಲೂ, ಬಾಹ್ಯಾಕಾಶ ಕೇಂದ್ರದಲ್ಲೂ “ಭಾರತದ ಸಂಸ್ಕೃತಿ”ಯ ಪ್ರತಿನಿಧಿಯಂತೆ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಜೂನ್ನಲ್ಲಿ ಬೋಯಿಂಗ್ನ ಸ್ಟಾರ್ಲೈನರ್ ನೌಕೆಯನ್ನು ಹತ್ತುವಾಲೂ ಭಾರತದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಬಾಹ್ಯಾಕಾಶಕ್ಕೆ ಸಮೋಸಾ ಕೊಂಡೊಯ್ದಿದ್ದ ಸುನಿತಾ
ಭಾರತದ ಖಾದ್ಯಗಳೆಂದರೆ ಸುನೀತಾಗೆ ಪಂಚಪ್ರಾಣ. ಅಂತೆಯೇ ಅವರ ಬಾಹ್ಯಾಕಾಶ ಯಾನ ಆರಂಭಕ್ಕೆ ಮೊದಲು ನಾಸಾ ಇಬ್ಬರು ಗಗನ ಯಾತ್ರಿಗಳಿಗೆ ತಮ್ಮ ಇಷ್ಟದ ಆಹಾರಗಳಲ್ಲಿ ಒಂದನ್ನು ಕೊಂಡೊಯ್ಯಲು ಅವಕಾಶ ನೀಡಿತ್ತು. ಅದು ಅವರ ಮಾನಸಿಕ ಖುಷಿಗಾಗಿ ಒದಗಿಸುವ ಒಂದು ಆಯ್ಕೆಯಾಗಿದೆ. ಈ ವೇಳೆ ಸುನೀತಾ ತಮ್ಮೊಂದಿಗೆ ಸಮೋಸಾವನ್ನು ಒಯ್ದಿದ್ದರು. ಈ ಮೂಲಕ ಭಾರತದ ಪರಂಪರೆಯ ಒಂದು ಭಾಗವೂ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿತ್ತು. ಬಾಹ್ಯಾಕಾಶವೆಂಬ ವಿಶಾಲ ಜಗತ್ತಿನಲ್ಲಿ ತನ್ನೂರಿನ ನಂಟನ್ನು ಬೆಸೆಯುವ ವಿಶೇಷ ಶಕ್ತಿ ಈ ಸಮೋಸಾಗಿತ್ತು.
ಭಗವದ್ಗೀತೆಯ ಶಕ್ತಿ
ಸುನಿತಾ ಅವರು ಬಾಹ್ಯಾಕಾಶದ ಯಾನದ ವೇಲೆ ಭಗವದ್ಗೀತೆಯ ಪ್ರತಿ ಮತ್ತು ಉಪನಿಷತ್ತುಗಳನ್ನೂ ಕೊಂಡೊಯ್ದಿದ್ದಾರೆ. ಈ ಪವಿತ್ರ ಗ್ರಂಥಗಳು ಬಾಹ್ಯಾಕಾಶ ಯೋಜನೆಯ ವೇಳೆ ತಮಗೆ ಶಕ್ತಿ, ಮಾರ್ಗದರ್ಶನ ಮತ್ತು ಅಂತರ್ದೃಷ್ಟಿಯನ್ನು ಒದಗಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು. ಇದು ಬಾಹ್ಯಾಕಾಶಕ್ಕೆ ಒಯ್ಯಲೇಬೇಕಾದ ಗ್ರಂಥಗಳು ಎಂದೂ ಹೇಳಿದ್ದರು. ಬಾಹ್ಯಾಕಾಶದ ಏಕಾಂತದಲ್ಲಿ ಈ ಆಧ್ಯಾತ್ಮಿಕ ಶಕ್ತಿಯು ಅವರ ಅನಿಶ್ಚಿತತೆಯನ್ನು ದೂರ ಮಾಡಿ, ಗುರಿಯತ್ತ ಗಮನ ನೆಡುವಂತೆ ಮಾಡಿತು.
ವಿಘ್ನ ವಿನಾಶಕನೂ ಜತೆಗಿದ್ದ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಲುವ ವೇಳೆ ಗಣೇಶನ ಪುಟ್ಟ ವಿಗ್ರಹವನ್ನೂ ಸುನೀತಾ ಒಯ್ದಿದ್ದರು. “ಅವನೂ ನನ್ನ ಜೊತೆ ಬಾಹ್ಯಾಕಾಶಕ್ಕೆ ಬರುತ್ತಿದ್ದಾನೆ” ಎಂದು ಅವರು ಹಾಸ್ಯಭರಿತರಾಗಿ ನುಡಿದಿದ್ದರು. ವಿಘ್ನ ವಿನಾಶಕನೂ ಆಗಿರುವ ಗಣೇಶ ನನಗೆ ಸದಾ ಮಾರ್ಗದರ್ಶನ ನೀಡುವ ಶಕ್ತಿ. ಗಣೇಶನ ವಿಗ್ರಹ ಸದಾ ನನ್ನ ಜೊತೆಗಿರುತ್ತದೆ ಎಂದು ಅವರು ಹೇಳಿದ್ದರು.
ಅಂತರಿಕ್ಷದಲ್ಲಿ ದೀಪದ ಹಬ್ಬ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಆಚರಣೆಯು ಸುನೀತಾಗೆ ಇನ್ನಿಲ್ಲದ ಸಂತೋಷ ಒದಗಿಸಿತ್ತು. ಇತರೆ ಗಗನಯಾತ್ರಿಕರೊಂದಿಗೆ ಸೇರಿ ಬೆಳಕಿನ ಹಬ್ಬವನ್ನು ಆಚರಿಸಿದ್ದ ಅವರು, ಇದೊಂದು ಅರ್ಥಪೂರ್ಣ ದೀಪಾವಳಿ. ಈ ದಿನ ನನಗೆ ನನ್ನ ಅಪ್ಪ ನೆನಪಾಗುತ್ತಿದ್ದಾರೆ ಎಂದು ಹೇಳಿದ್ದರು.