ಸುನಿತಾ ಪಾಲಿಗೆ ಇದೊಂದು ಅಮೋಘ ಸಾಧನೆಯೇ ಸರಿ. ಇಂಥ ಸಾಧನೆ... ... Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್; ಸುನಿತಾ ವಿಲಿಯಮ್ಸ್​, ವಿಲ್ಮೋರ್​ ಸುರಕ್ಷಿತ

ಸುನಿತಾ ಪಾಲಿಗೆ ಇದೊಂದು ಅಮೋಘ ಸಾಧನೆಯೇ ಸರಿ. ಇಂಥ ಸಾಧನೆ ಮಾಡುವುದಕ್ಕೆ ಸತತ ಪರಿಶ್ರಮ, ದೃಢ ನಿಶ್ಚಯ ಬೇಕೆ ಬೇಕು. ಕೇವಲ 8 ದಿನಗಳ ಸಂಶೋಧನೆಗೆಂದು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಅವರು. 9 ತಿಂಗಳ ಬಳಿಕ ಹಲವಾರು ಸವಾಲುಗಳನ್ನು ಎದುರಿಸಿ ಹಿಂದಿರುಗಿದ್ದು ಅವರ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಎಲ್ಲ ಸಾಧನೆಯ ನಡುವೆ ಅವರು ಭಾರತದ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಹಾರುವಂತೆ ಮಾಡಿದ್ದಾರೆ. ಯಾಕೆಂದರೆ ಸುನಿತಾ ಅವರು ಗುಜರಾತ್ ಮೂಲದವರು.

ಅಮೋಘ ಜೀವನೋತ್ಸಾಹ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಜೀವನೋತ್ಸಾಹಕ್ಕೆ ಸರಿಸಾಟಿಯೇ ಇಲ್ಲ. ವಯಸ್ಸು 59 ಆಗಿದ್ದರೂ ಅವರು ಅದನ್ನು ಲೆಕ್ಕಿಸಿರಲಿಲ್ಲ ಭೂಮಿಗೆ ಒಂದಲ್ಲ ಒಂದು ದಿನ ಮರಳುತ್ತೇನೆ, ತನ್ನವರನ್ನು ಸೇರುತ್ತೇನೆ ಎಂಬ ಅಚಲ ನಂಬಿಕೆಯಿಟ್ಟಿದ್ದರು.

ಸುನೀತಾ ಅವರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಕಾದಿದ್ದು ಕೇವಲ ನಾಸಾ ಮಾತ್ರವಲ್ಲ. ಜಗತ್ತಿನ ಮೂಲೆ ಮೂಲೆಯ ಜನರೂ ಗಗನಯಾತ್ರಿಯ ಸುರಕ್ಷಿತ ಆಗಮನದ ಸುದ್ದಿ ಕೇಳಲು ತುದಿಗಾಲಲ್ಲಿ ನಿಂತಿದ್ದರು. ಭಾರತೀಯರಂತೂ ಸುನೀತಾ ಭಾರತದಲ್ಲೇ ಬಂದಿಳಿಯುತ್ತಾರೇನೋ ಎಂದೆನಿಸುವಷ್ಟರ ಮಟ್ಟಿಗೆ ಆಕೆಗಾಗಿ ಕಾದಿದ್ದರು. ಇದಕ್ಕೆ ಕಾರಣವೂ ಇದೆ. ಸುನೀತಾ ವಿಲಿಯಮ್ಸ್ ಅವರ ಮೂಲ ಗುಜರಾತ್.

ಸುನಿತಾ ಅವರು ಹುಟ್ಟಿದ್ದು ಅಮೆರಿಕದ ಓಹಿಯೋದಲ್ಲಿ(1965ರ ಸೆಪ್ಟೆಂಬರ್ 19ರಂದು). ಅವರ ತಂದೆಯ ಹೆಸರು ದೀಪಕ್ ಪಾಂಡ್ಯಾ, ತಾಯಿ ಬೋನಿ ಪಾಂಡ್ಯಾ. ಗುಜರಾತ್‌ನ ಝುಲಾಸಾನ್ ಎಂಬ ಹಳ್ಳಿಯವರಾದ ದೀಪಕ್ ಅವರು ನರವಿಜ್ಞಾನಿಯಾಗಿದ್ದರು 1957ರಲ್ಲಿ ಗುಜರಾತ್​ನಿಂದ ಅಮೆರಿಕಕ್ಕೆ ಹೋಗಿ, ಅಲ್ಲಿನವರೇ ಆದ ಬೋನಿ ಅವರನ್ನು ವಿವಾಹವಾಗಿದ್ದರು.

Update: 2025-03-18 22:56 GMT

Linked news

Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್;  ಸುನಿತಾ ವಿಲಿಯಮ್ಸ್​, ವಿಲ್ಮೋರ್​  ಸುರಕ್ಷಿತ