ರಾಜ್ಯದಾದ್ಯಂತ 'ಯುವʼ ಸಿನಿಮಾ ಬಿಡುಗಡೆ: ಸಂಭ್ರಮಿಸಿದ ಅಭಿಮಾನಿಗಳು
ಕನ್ನಡದ ವರನಟ ಡಾ.ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿ, ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಬೆಳ್ಳಿಪರದೆ ಮೇಲೆ ಮಿನುಗಿದ್ದಾರೆ. ಯುವ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಯುವ’ ಇಂದು (ಮಾರ್ಚ್ 29) ವಿಶ್ವಾದ್ಯಂತ ರಿಲೀಸ್ ಆಗಿದೆ.;
ಕನ್ನಡದ ವರನಟ ಡಾ.ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿ, ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಬೆಳ್ಳಿಪರದೆ ಮೇಲೆ ಮಿನುಗಿದ್ದಾರೆ. ಯುವ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಯುವ’ ಇಂದು (ಮಾರ್ಚ್ 29) ವಿಶ್ವಾದ್ಯಂತ ರಿಲೀಸ್ ಆಗಿದೆ.
ಬೆಂಗಳೂರಿನಲ್ಲಿ 250 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದ್ದು,'ಯುವ' ಬಿಡುಗಡೆಗೆ ಕಾದು ಕುಳಿತಿದ್ದ ಅಭಿಮಾನಿಗಳು ಥಿಯೇಟರ್ಗಳೆದುರು ಕುಣಿದು ಸಂಭ್ರಮಿಸಿದ್ದಾರೆ.
ಬೃಹತ್ ಕಟೌಟ್‌ಗಳಿಗೆ ಹೂವಿನ ಹಾರ
ಚಿತ್ರಮಂದಿರಗಳ ಹೊರಗಡೆ ಬೃಹತ್ ಕಟೌಟ್ ಜತೆಗೆ ಪುನೀತ್ ರಾಜ್ ಕುಮಾರ್ ಕಟೌಟ್ ಅನ್ನೂ ನಿಲ್ಲಿಸಿ ಹೂವಿನ ಹಾರ ಹಾಕಲಾಗಿದೆ.
ಬೆಂಗಳೂರಿನ ಸಿದ್ದೇಶ್ವರ ಥಿಯೇಟರ್ನಲ್ಲಿ ಮುಂಜಾನೆಯಿಂದಲೇ ಫ್ಯಾನ್ಸ್ ಶೋ ಪ್ರದರ್ಶನ ಕಂಡಿದೆ. ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ ಎದುರು ಯುವ ಅವರ ಕಟೌಟ್ಗಳನ್ನು ಹಾಕಲಾಗಿದೆ. ಮುಂಜಾನೆಯ ಶೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದರು.
ಅಭಿಮಾನಿಗಳೊಂದಿಗೆ ರಾಘಣ್ಣ ಡಾನ್ಸ್
ಕಿರಿ ಮಗನ ಚೊಚ್ಚಲ ಸಿನಿಮಾ ವೀಕ್ಷಿಸಲು ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಸಮೇತ ಸಂತೋಷ್ ಥಿಯೇಟರ್‌ಗೆ ಆಗಮಿಸಿದ್ದು, ನೆರೆದಿದ್ದ ಅಭಿಮಾನಗಳ ಜೊತೆ ರಾಘಣ್ಣ ಡಾನ್ಸ್ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅಪ್ಪು ಪುತ್ರಿ ವಂದಿತಾ ಕೂಡ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ.
'ಕಾಂತಾರ' ನಟಿ ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಇದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಸಂತೋಷ್ ಆನಂದ್ ರಾಮ್ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ ಅದ್ಧೂರಿಯಾಗಿ ನಿರ್ಮಿಸಿದೆ.
ಯುವ’ ಸಿನಿಮಾದಲ್ಲಿ ಅಪ್ಪ ಮಗನ ಬಾಂಧವ್ಯವನ್ನು ಸಾರುವ ಸಿನಿಮಾವಾಗಿದ್ದು, ಸಿನಿಮಾದ ಯುವ ರಾಜ್‌ಕುಮಾರ್ ಅವರು ಈ ಸಿನಿಮಾದಲ್ಲಿಕಾಲೇಜು ಹುಡುಗನ ಮಾಸ್ ಲುಕ್‌ನಲ್ಲಿ ಹಾಗೂ ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಡೆಲಿವರಿ ಬಾಯ್ ಹುಡುಗನಾಗಿ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎನ್ನೋದು ಈ ಸಿನಿಮಾದ ಕಥೆ.
ಯುವ ಸಿನಿಮಾ ನೋಡಿದ ಫ್ಯಾನ್ಸ್ ಹೇಳಿದ್ದೇನು?
'ಯುವ' ಅಪ್ಪ-ಮಗನ ಬಾಂಧವ್ಯದ ಕುರಿತಾದ ಸಿನಿಮಾ. ಯುವ ಕಾಲೇಜು ವಿದ್ಯಾರ್ಥಿ ಮತ್ತು ಫುಡ್ ಡೆಲಿವರಿ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಆಹಾರ ವಿತರಣಾ ಏಜೆಂಟ್‌ಗಳು ಎದುರಿಸುವ ಸವಾಲುಗಳ ಕುರಿತಾದ ಕಥೆ.
ಎಕ್ಸ್ (ಟ್ವಿಟ್ಟರ್) ನಲ್ಲಿ ಕನ್ನಡ ಚಿತ್ರರಂಗದ ಅಭಿಮಾನಿಗಳು ಚಿತ್ರಕ್ಕೆ ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ.
"ಅತ್ಯುತ್ತಮವಾದ ಸಿನಿಮಾದ ಜೊತೆಗೆ ಈ ಸಿನಿಮಾದಲ್ಲಿ ಉತ್ತಮ ಸಂದೇಶವನ್ನೂ ನೀಡಿದ್ದೀರಿ. ಯುವಕರು, ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳಬೇಡಿ. ಯುವ ಮತ್ತು ಸಪ್ತಮಿ ಜೋಡಿ ಕೂಡ ಅದ್ಭುತವಾಗಿದೆ" ಎಂದು ಎಕ್ಸ್ ಬಳಕೆದಾರ @sunilnpujar23 ಕನ್ನಡದಲ್ಲಿ ಬರೆದಿದ್ದಾರೆ.
"ಇದೀಗ ನಾನು #ಯುವ ಸಿನಿಮಾವನ್ನು ವೀಕ್ಷಿಸಿದೆ. ಯುವ ಅವರ ಚೊಚ್ಚಲ ಚಿತ್ರದ ಸ್ಕ್ರಿಪ್ಟ್ ಪರ್ಫೆಕ್ಟ್, ಕೌಟುಂಬಿಕ ಮೌಲ್ಯಗಳಿಂದ ಕೂಡಿದ ಚಲನಚಿತ್ರವನ್ನು ನೋಡಿದೆ. ಡಾನ್ಸ್ ಮತ್ತು ಫೈಟ್‌ಗಳು ಸೂಪರ್, ವಿಶೇಷವಾಗಿ 2 ನೇ ಭಾಗ (ಅರ್ಧ) ಭಾವನಾತ್ಮಕವಾಗಿದೆ. ಇದು ಸಂಪೂರ್ಣವಾಗಿ ಕೌಟುಂಬಿಕ ಮನರಂಜನೆಯಾಗಿದೆ," ಎಂದು ಮತ್ತೊಬ್ಬ ಬಳಕೆದಾರ @nikhilbiligere X ನಲ್ಲಿ ಹೇಳಿದ್ದಾರೆ.
“#ಯುವ ಒಂದು ಚೊಚ್ಚಲ ನಟನಿಗೆ ಪರಿಪೂರ್ಣ ಚಿತ್ರ. KFI ಗೆ ಮತ್ತೊಬ್ಬ ಮಾಸ್ ಹೀರೋ ಸಿಕ್ಕಿದೆ. ಮೊದಲಾರ್ಧವು ಒನ್-ಲೈನರ್‌ಗಳಿಂದ ತುಂಬಿರುತ್ತದೆ (ಕೆಲವು ಡೈಲಾಗ್‌ಗಳು ಫ್ಯಾನ್ ವಾರ್‌ಗಳಿಗೆ ಕೌಂಟರ್‌ಗಳಂತೆ ಭಾಸವಾಗುತ್ತದೆ) ಮತ್ತು ಫೈಟ್‌ಗಳು, ಇದು ಕೋರ್ ಅಭಿಮಾನಿಗಳಿಗೆ ರಸದೌತಣ ನೀಡುತ್ತದೆ. ದ್ವಿತೀಯಾರ್ಧವು ಕೌಟುಂಬಿಕ ನಾಟಕ ಮತ್ತು ತಂದೆ-ಮಗನ ಭಾವನೆಗಳಿಂದ ತುಂಬಿದೆ" ಎಂದು @Virat_Rocky18 X ನಲ್ಲಿ ಬರೆದಿದ್ದಾರೆ.
ಚಿಕ್ಕಪ್ಪ ಶಿವ ರಾಜ್‌ಕುಮಾರ್ ಹಾರೈಕೆ
ನಟ ಮತ್ತು ಯುವನ ಚಿಕ್ಕಪ್ಪ ಶಿವ ರಾಜ್‌ಕುಮಾರ್ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ಎಕ್ಸ್‌ನಲ್ಲಿ ಶುಭ ಹಾರೈಸಿದರು. “ನಿಮ್ಮ ಚೊಚ್ಚಲ ಪ್ರವೇಶಕ್ಕೆ ಅಭಿನಂದನೆಗಳು @yuva_rajkumar ಇದು ಅನೇಕ ಮೈಲಿಗಲ್ಲುಗಳಲ್ಲಿ ಮೊದಲನೆಯದಾಗಿರಲಿ. #ಯುವ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್' ಎಂದು ಬರೆದುಕೊಂಡಿದ್ದಾರೆ.
"#ಯುವಗೆ ಹೊಂಬಾಳೆ ಫಿಲ್ಮ್ಸ್‌ಗೆ ಶುಭಾಶಯಗಳು! ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರಕ್ಕೆ ಬೆಂಕಿ ಹಚ್ಚಿರುವುದನ್ನು ನೋಡಲು ಉತ್ಸುಕನಾಗಿದ್ದೇನೆ. ಈ ಮಾಸ್ ಫ್ಯಾಮಿಲಿ ಎಂಟರ್‌ಟೈನರ್‌ನ ಇಡೀ ಚಿತ್ರತಂಡ ಮತ್ತು ಸಿಬ್ಬಂದಿಗೆ ಯಶಸ್ಸು ಸಿಗಲಿ!" ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಕ್ಸ್‌ನಲ್ಲಿ ಬರೆದಿದ್ದಾರೆ.