ಬಿಗ್‌ ಬಾಸ್‌ಗೆ ಬಿಗ್‌ ಸರ್ಜರಿ| ಕಿಚ್ಚ ಸುದೀಪ್‌ ಔಟ್‌; ಯಾರಾಗಲಿದ್ದಾರೆ ಮುಂದಿನ ಬಿಗ್‌ಬಾಸ್‌?

ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಖ್ಯಾತ ನಿರೂಪಕ ಪಟ್ಟವನ್ನು ಗಿಟ್ಟಿಸಿಕೊಂಡಿದ್ದ ನಟ ಕಿಚ್ಚ ಸುದೀಪ್‌ ಈ ಬಾರಿ ಈ ಶೂ ನಿಂದ ಹೊರಹೋಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.;

Update: 2024-08-06 12:59 GMT
ಯಾರಾಗ್ತಾರೆ ಈ ಬಾರಿಯ ಬಿಗ್‌ ಬಾಸ್‌ ನಿರೂಪಕ
Click the Play button to listen to article

ಕನ್ನಡದ ಪ್ರಸಿದ್ಧ ಟಿವಿ ರಿಯಾಲಿಟಿ ಶೋ ʼಬಿಗ್‌ ಬಾಸ್‌ʼ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್‌ ಈ ಬಾರಿ ಬಿಗ್‌ಬಾಸ್‌ ರಿಯಾಲಿಟಿ ಶೋ ನಿರೂಪಣೆಯಿಂದ ಹೊರಹೋಗುವ ಸಾಧ್ಯತೆಗಳು ಇವೆ . ಬದಲಿಗೆ ಕನ್ನಡದ ಖ್ಯಾತ ನಟರಾದ ರಮೇಶ್‌ ಅರವಿಂದ್‌, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಅಥವಾ ಕೆಜಿಎಫ್‌ ಖ್ಯಾತಿಯ ಯಶ್‌ ಅವರು ಸುದೀಪ್‌ ಜಾಗದಲ್ಲಿ ʼಬಿಗ್‌ ಬಾಸ್‌ʼ ಆಗುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ರಿಯಾಲಿಟಿ ಶೋ ಜನರ ಅಚ್ಚುಮೆಚ್ಚಿನ ಶೋ ಆಗಿದ್ದು, ಈ ಶೋನಲ್ಲಿ ಸಿನಿಮಾ ನಟಿಯರು, ಕಿರುತೆರೆ ನಟಿಯರು, ಕಾರ್ಯಕ್ರಮ ನಿರೂಪಕರು, ಸುದ್ದಿ ವಾಚಕರು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಖ್ಯಾತರಾಗಿರುವ ವ್ಯಕ್ತಿಗಳಿಗೆ ತಮ್ಮ ʼರಿಯಾಲಿಟಿʼ ಪ್ರದರ್ಶನದ ವೇದಿಕೆಯಾಗಿದೆ. ಮೊದಲಿನಿಂದಲೂ ಈ ಶೋ ನ ನಿರೂಪಣೆ ಮಾಡಿ ಜನಮನ್ನಣೆ ಪಡೆದುಕೊಂಡಿರುವ ಬಿಗ್‌ ಬಾಸ್‌ - 10 ಸೀಸನ್‌ ಖ್ಯಾತ ನಿರೂಪಕ ಪಟ್ಟ ಕೂಡ ಸುದೀಪ್‌ ಅವರಿಗೆ ದೊರಕಿತ್ತು. ಈಗ ಬಿಗ್‌ ಬಾಸ್‌ 11 ಸೀಸನ್‌ಗೆ ಸುದೀಪ್‌ ಬದಲಿಗೆ ಇನ್ನೊಂದು ಮುಖ ಕಂಡುಬರಲಿದೆ ಎಂದು ಮೂಲಗಳು ತಿಳಸಿವೆ.

ಹಿಂದಿಯ ಬಿಗ್‌ ಬಾಸ್‌ನಿಂದ ಪ್ರಸಿದ್ಧ ನಟ ಸಲ್ಮಾನ್ ಖಾನ್‌ ಹೊರನಡೆಯಲಿದ್ದಾರೆ ಹಾಗೂ ಅನಿಲ್‌ ಕಪೂರ್‌ ಅವರು ಆ ಜಾಗ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಂತೆ ಸುದೀಪ್‌ ಬದಲಿಗೆ ಇತರ ಖ್ಯಾತನಾಮ ನಟರೊಬ್ಬರಿಗೆ ಬಿಗ್‌ ಬಾಸ್‌ ನಿರೂಪಕನ ಪಟ್ಟ ನೀಡಲು ಕಲರ್ಸ್‌ ಕನ್ನಡ ಸಿದ್ಧವಾಗಿದೆ ಎನ್ನಲಾಗಿದೆ. ರಮೇಶ್‌ ಅರವಿಂದ್‌, ರಿಷಬ್‌ ಶೆಟ್ಟಿ ಹಾಗೂ ಯಶ್‌ ಅವರಲ್ಲಿ ಯಾರಾದರೊಬ್ಬರು ಸುದೀಪ್‌ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರಿಕ್‌ ಪಾರ್ಟಿ ರಕ್ಷಿತ್‌ ಶೆಟ್ಟಿ ಅವರ ಹೆಸರೂ ಚರ್ಚೆಗೆ ಬಂದಿದೆ ಎನ್ನಲಾಗಿದೆ.

2013 ರಲ್ಲಿ ಆರಂಭಗೊಂಡ ಈ ಶೋವನ್ನು ಆರಂಭದಿಂದಲೂ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದರು. ಇದುವರೆಗೆ 10 ಶೋಗಳನ್ನು ಕನ್ನಡದ ಬಿಗ್‌ ಬಾಸ್‌ ಒಳಗೊಂಡಿದೆ. ಈ ಶೋಗೆ ನಟಿ ಶೃತಿ, ವಿಜಯ ರಾಘವೇಂದ್ರ, ಅನುಶ್ರೀ, ಸೃಜನ್‌ ಲೋಕೇಶ್‌, ಅಕುಲ್‌ ಬಾಲಾಜಿ, ಹುಚ್ಚ ವೆಂಕಟ್‌, ಪ್ರಥಮ್‌, ಅಪರ್ಣಾ , ಶೃತಿ, ರೂಪೇಶ್‌ ಶೆಟ್ಟಿ, ಚಂದನ್‌ ಶೆಟ್ಟಿ, ನಿವೇದಿತಾ, ಮತ್ತಿತರರು ಬಿಗ್‌ ಬಾಸ್‌ ಮನೆಗೆ ಒಳಹೋಗಿ ಬಂದಿದ್ದರು. ಇದೀಗ ಸುದೀಪ್‌ ಸ್ಥಾನಕ್ಕೆ ಯಾವ ನಟನ ಎಂಟ್ರಿಯಾಗಲಿದೆ ಎಂಬುವುದು ಕುತೂಹಲ ಮೂಡಿಸಿದೆ.

ಇತ್ತೀಚೆಗೆ Bigg Boss OTT 3 ಶೋವನ್ನು ಸಲ್ಮಾನ್‌ ಖಾನ್‌ ಬದಲಿಗೆ ಹಿರಿಯ ನಟ ಅನಿಲ್‌ ಕಪೂರ್‌ ನಿರೂಪಣೆ ಮಾಡಿದ್ದರು. ಈಗ ಕನ್ನಡದಲ್ಲೂ ಬದಲಾವಣೆ ಆಗಲಿದೆ ಎಂದು ಹೇಳಲಾಗಿದೆ.

Tags:    

Similar News