BIG BOSS KANNADA | ಸುದೀಪ್‌ ನಿರೂಪಣೆ ಇಲ್ವಾ? ನೋ ವೇ.. ಚಾನ್ಸೆ ಇಲ್ಲ ಎನ್ನುತ್ತಿದೆ ಪ್ರೋಮೋ

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11ಕ್ಕೆ ನಿರೂಪಕ ಯಾರು ಎನ್ನುವ ಪ್ರಶ್ನೆಗೆ ಪ್ರೊಮೋ ಮೂಲಕ ಉತ್ತರ ನೀಡಿರುವ ಬಿಗ್ ಬಾಸ್, ಕಿಚ್ಚ ಸುದೀಪ್ ಅವರ ಶೂಟಿಂಗ್ ವಿಡಿಯೋ ತುಣುಕನ್ನು ಹಂಚಿಕೊಂಡಿದೆ.

Update: 2024-09-18 11:46 GMT
ಬಿಗ್‌ ಬಾಸ್‌

ಈ ಬಾರಿಯ ಬಿಗ್ ಬಾಸ್ ಸೀಸನ್ 11ಕ್ಕೆ ನಿರೂಪಕ ಯಾರು ಎನ್ನುವ ಪ್ರಶ್ನೆಗೆ ಪ್ರೊಮೋ ಮೂಲಕ ಉತ್ತರ ನೀಡಿರುವ ಬಿಗ್ ಬಾಸ್, ಕಿಚ್ಚ ಸುದೀಪ್ ಅವರ ಶೂಟಿಂಗ್ ವಿಡಿಯೋ ತುಣುಕನ್ನು ಹಂಚಿಕೊಂಡಿದೆ.

ಸೆಪ್ಟೆಂಬರ್ 29ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಇದನ್ನು ನಟ ಕಿಚ್ಚ ಸುದೀಪ್‌ ನಡೆಸಿಕೊಡುತ್ತಿದ್ದಾರೆ. ತಂಡ ಮೊದಲು ಸಾರ್ವಜನಿಕರಿರುವ ಒಂದು ಪ್ರೋಮೋ ರಿಲೀಸ್ ಮಾಡಿ, ನಿರೂಪಕರು ಯಾರು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಇದೀಗ ಇನ್ನೊಂದು ಪ್ರೊಮೋ ರಿಲೀಸ್ ಮಾಡಿ, ಈ ಬಾರಿಯೂ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ದರ್ಬಾರ್ ನಡೆಯಲಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಈಗ ಸುದೀಪ್ ಶೂಟಿಂಗ್ ಝಲಕ್ ಹಂಚಿಕೊಂಡಿದೆ. 

ಕಲರ್ಸ್ ಕನ್ನಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ. ಕಿರುತೆರೆಯ ದೊಡ್ಡಣ್ಣ ಬಿಗ್ ಬಾಸ್ 11ರ ಅದ್ಧೂರಿ ಪ್ರೊಮೋ ಮೇಕಿಂಗ್ ಎಂದು ಶೀರ್ಷಿಕೆ ಹಾಕಲಾಗಿದೆ. ಕಿಚ್ಚ ಸುದೀಪ್‌ ಕಾರಿನಿಂದ ಇಳಿದು ಬಂದು ನಿರ್ದೇಶಕರ ಸಲಹೆಯಂತೆ ಆಕ್ಷನ್ ಮಾಡ್ತಾರೆ. ಹತ್ತು ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೆ ಲೆಕ್ಕ, ಇದು ಹೊಸ ಅಧ್ಯಾಯ ಎನ್ನುವುದನ್ನು ಪ್ರೋಮೋದಲ್ಲಿ ಹೇಳಲಾಗಿದೆ.

Full View

ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಶೋ ಸೆ.29ರಿಂದ ಶುರುವಾಗಲಿದ್ದು, ಸೆ.27ರಂದು ಡಾನ್ಸ್ ಶೂಟಿಂಗ್ ನಡೆಯಲಿದೆ. 28ರಂದು ಸ್ಪರ್ಧಿಗಳು ಮನೆಗೆ ಬರಲಿದ್ದಾರೆ. ಶೂಟಿಂಗ್ ಕೂಡ ಅಂದೇ ನಡೆಯಲಿದೆ. ಆದರೆ ಶೋ ಟೆಲಿಕಾಸ್ಟ್  ಸೆ.29ರಂದು ಆಗಲಿದೆ. ಬಿಗ್ ಬಾಸ್ ಮನೆಗೆ ಯಾರೆಲ್ಲ ಬರುತ್ತಾರೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಕಲಾವಿದರ ಹೆಸರುಗಳು ಪಟ್ಟಿಯಲ್ಲಿದ್ದು, ಬಿಗ್ ಬಾಸ್ ಆರಂಭದ ದಿನವೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಈ ಬಾರಿ ಬಿಗ್ ಬಾಸ್ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9. 30ಕ್ಕೆ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ಸುದೀಪ್‌ ಪಂಚಾಯ್ತಿ ನಡೆಯಲಿದ್ದು, ಆ ದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಪ್ರತಿ ಬಾರಿ ಹೌದು ಸ್ವಾಮಿ ಎನ್ನುತ್ತ ಬರ್ತಿದ್ದ ಬಿಗ್ ಬಾಸ್ ಈ ಬಾರಿ, "ನೋ ವೇ.. ಚಾನ್ಸೆ ಇಲ್ಲ" ಎನ್ನುತ್ತಿದ್ದಾರೆ. ಬಿಗ್ ಬಾಸ್ ಪ್ರೊಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎರಡು ಮಿಲಿಯನ್ಸ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ.

Tags:    

Similar News