ಬಾಲಿವುಡ್ ಹಿರಿಯ ನಟ ಅಚ್ಯುತ್ ಪೋತ್‌ದಾರ್ ನಿಧನ
ಅಚ್ಯುತ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಬ್ಲಾಕ್ ಬಸ್ಟರ್ ಚಿತ್ರ 3 ಈಡಿಯಟ್ಸ್ ನಲ್ಲಿ ಪ್ರಾಧ್ಯಾಪಕರ ಪಾತ್ರವನ್ನು ನಿರ್ವಹಿಸುವ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದರು.;
ಬಾಲಿವುಡ್ ಹಿರಿಯ ನಟ ಅಚ್ಯುತ್ ಪೋತ್‌ದಾರ್‌ಇಹಲೋಕ ತ್ಯಜಿಸಿದ್ದಾರೆ.
ಅರೇ ಭಾಯಿ.. ಕೆಹೆನಾ ಕ್ಯಾ ಚಾಹ್ತೇ ಹೊ...! ಎಂಬ ಮೀಮ್ ಮೂಲಕ ದೇಶಾದ್ಯಂತ ಪ್ರಸಿದ್ಧರಾದ ನಟ ಅಚ್ಯುತ್ ಪೋತ್‌ದಾರ್ ಸೋಮವಾರ ತಮ್ಮ 91 ನೇ ವಯಸ್ಸಿನಲ್ಲಿ ಮುಂಬೈನ ಥಾಣೆಯಲ್ಲಿನ ಜುಪಿಟರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಜ್ಯೂಪಿಟರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಸಂಜೆ ಅಚ್ಯುತ್ ಪೋತ್‌ದಾರ್ ನಿಧನರಾದರು. ಅವರ ಅಂತ್ಯಸಂಸ್ಕಾರ ಮಂಗಳವಾರ ನಡೆಯಲಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.
ತಮ್ಮ ಅದ್ಭುತ ನಟನಾ ವೃತ್ತಿಜೀವನದಲ್ಲಿ 125 ಕ್ಕೂ ಹೆಚ್ಚು ಚಲನಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅಚ್ಯುತ, ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಬ್ಲಾಕ್ ಬಸ್ಟರ್ ಚಿತ್ರ 3 ಈಡಿಯಟ್ಸ್ ನಲ್ಲಿ ಪ್ರಾಧ್ಯಾಪಕನ ಪಾತ್ರವನ್ನು ನಿರ್ವಹಿಸುವ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದರು.
ಅಚ್ಯುತ ಪೋತ್‌ದಾರ್ ದೂರದರ್ಶನ ಮತ್ತು ಬಾಲಿವುಡ್‌ನ ಪ್ರಸಿದ್ಧ ನಟರಾಗಿದ್ದರು. ನಟನ ನಿಧನದ ಸುದ್ದಿ ಅವರ ಅಭಿಮಾನಿಗಳಲ್ಲಿ ಶೋಕವನ್ನುಂಟುಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ, ಹಿಂದಿ ಚಿತ್ರರಂಗದ ಹೊರತಾಗಿ, ಅವರು ಮರಾಠಿ ಉದ್ಯಮದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು.
ಅಚ್ಯುತ್ ಪೋತ್‌ದಾರ್ 'ಅರ್ಧ ಸತ್ಯ', 'ತೇಜಾಬ್', 'ದಿಲ್ವಾಲೆ', 'ವಾಸ್ತವ್', 'ಪರಿಣೀತ', 'ದಬಾಂಗ್', '3 ಈಡಿಯಟ್ಸ್' ಮತ್ತು 'ಲಗೇ ರಹೋ ಮುನ್ನಾ ಭಾಯ್' ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ಅಮೀರ್ ಖಾನ್ ಅಭಿನಯದ '3 ಈಡಿಯಟ್ಸ್' ಚಿತ್ರದಲ್ಲಿ ಅವರು ಪ್ರಾಧ್ಯಾಪಕನ ಪಾತ್ರವನ್ನು ನಿರ್ವಹಿಸಿದ್ದಾರೆ. 'ಅರೆ ಕೆಹ್ನಾ ಕ್ಯಾ ಚಾಹತೇ ಹೋ' ಚಿತ್ರದ ಅವರ ಸಂಭಾಷಣೆ ಸಾಕಷ್ಟು ಪ್ರಸಿದ್ಧವಾಯಿತು. ಇಂದಿಗೂ ಹೆಚ್ಚಿನ ಜನರು ಅವರನ್ನು ಈ ಸಂಭಾಷಣೆಯ ಮೂಲಕ ತಿಳಿದಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಚಿಕ್ಕದಾದರೂ ತಮಾಷೆಯಾಗಿತ್ತು.
ಸೈನ್ಯದಲ್ಲೂ ಕೆಲಸ ಮಾಡಿದ್ದ ಅಚ್ಯುತ
ಅಚ್ಯುತ್ ಪೋತ್‌ದಾರ್ ಮಧ್ಯಪ್ರದೇಶದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಅವರು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದರು. ಹಲವು ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಂತರ, ಅವರು 1967 ರಲ್ಲಿ ಸೈನ್ಯದಿಂದ ನಿವೃತ್ತರಾದರು. ಬಳಿಕ ಸುಮಾರು 25 ವರ್ಷಗಳ ಕಾಲ ಇಂಡಿಯನ್ ಆಯಿಲ್‌ನಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು.
ಅಚ್ಯುತ್ ಪೋತ್‌ದಾರ್ 44 ನೇ ವಯಸ್ಸಿನಲ್ಲಿ ನಟನಾ ಜಗತ್ತಿಗೆ ಕಾಲಿಟ್ಟರು. 80 ರ ದಶಕದಲ್ಲಿ ಅವರು ದೊಡ್ಡ ಪರದೆಯ ಮೇಲೆ ತಾರೆಯಾಗಿದ್ದರು. ಚಲನಚಿತ್ರಗಳ ನಂತರ, ಅವರು ಟಿವಿ ಜಗತ್ತಿಗೆ ಪ್ರವೇಶಿಸಿದರು. ಟಿವಿಯಲ್ಲಿ, ಅವರು 'ವಾಗ್ಲೆ ಕಿ ದುನಿಯಾ', 'ಶ್ರೀಮತಿ ತೆಂಡೂಲ್ಕರ್', 'ಮಜ್ಹಾ ಹೋಶಿಲ್ ನಾ' ಮತ್ತು 'ಭಾರತ್ ಕಿ ಖೋಜ್' ನಂತಹ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದರು. ಅದು ಸಣ್ಣ ಪಾತ್ರವಾಗಿರಲಿ ಅಥವಾ ದೊಡ್ಡ ಪಾತ್ರವಾಗಿರಲಿ, ಪ್ರತಿಯೊಂದು ಪಾತ್ರದಲ್ಲೂ ತಮ್ಮನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಅವರಿಗೆ ತಿಳಿದಿತ್ತು.